ಬೆಂಗಳೂರು, ಮಾ.3- ಲೋಕಾಯುಕ್ತ ಬಲೆಗೆ ಬಿದ್ದಿರುವ ಶಾಸಕರ ಪುತ್ರ ಪ್ರಶಾಂತ್ ಮಾಡಾಳ್ ಅವರ ಲಂಚಾರೋಪಗಳು ಬಗೆದಷ್ಟೂ ಹೊರಬರುತ್ತಲೇ ಇವೆ. ಕೆಎಸ್‍ಡಿಎಲ್‍ಗೆ ಅಧ್ಯಕ್ಷರಾಗಿದ್ದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪರವಾಗಿ ಲಂಚ ಸ್ವೀಕರಿಸಿದ್ದ ಪ್ರಕರಣದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಶಾಸಕರ ಮಗ ಪ್ರಶಾಂತ್ ಮಾಡಾಳ್ ಅವರ ಟೆಂಡರ್ ಪುರಾಣ ಭಯಾನಕವಾಗಿದೆ ಎಂದು ತಿಳಿದುಬಂದಿದೆ.
ಬಿಲ್ಡರ್‍ಗಳಿಗೆ ಹಾಗೂ ತಮ್ಮ ಆಪ್ತರಿಗೆ ತಮಗೆ ಬೇಕಾದಷ್ಟು ಹಣ ಕೊಡುವವರಿಗೆ ಟೆಂಡರ್ ಕೊಡಿಸಲು ಪೂರಕ ಕ್ರಮ ಕೈಗೊಳ್ಳುತ್ತಿದ್ದರು. ಬೇಡವಾದವರಿಗೆ ಟೆಂಡರ್ ಸಿಗದಂತೆ ನೋಡಿಕೊಳ್ಳಲು ಬೆದರಿಕೆ ಹಾಗೂ ಬ್ಲಾಕ್‍ಮೇಲ್ ತಂತ್ರ ಅನುಸರಿತ್ತಿದ್ದರು ಎಂದು ಹೇಳಲಾಗುತ್ತಿದೆ.
ಆದಾಗ್ಯೂ ಟೆಂಡರ್ ಸಲ್ಲಿಸುತ್ತಿದ್ದ ವರನ್ನು ಹಣಿಯಲು ಅವರು ಬಲ ಪ್ರಯೋಗವನ್ನೂ ಕೂಡ ಮಾಡಿಸುತ್ತಿದ್ದರು ಎನ್ನಲಾಗಿದೆ. ಇಂತಹ ಹತ್ತು-ಹಲವು ಟೆಂಡರ್ ವಂಚಿತರು ದೂರುಗಳನ್ನು ಹೇಳಿಕೊಂಡಿದ್ದಾರೆ.
40% ಸರ್ಕಾರಕ್ಕೆ ಮಾಡಾಳು ಪುತ್ರ ಮತ್ತೊಂದು ಸಾಕ್ಷಿ : ಹೆಚ್‌ಡಿಕೆ
ತಮ್ಮ ಅಪ್ಪ ಅಧ್ಯಕ್ಷರಾಗಿರುವ ಕಚೇರಿಯಲ್ಲಿ ಕುಳಿತು ತಾವೇ ದರ್ಬಾರ್ ಮಾಡುತ್ತಿದ್ದರು. ಅಲ್ಲದೆ, ಅಲ್ಲಿರುವ ಎಲ್ಲ ಅಕಾರಿಗಳನ್ನು ಡಮ್ಮಿ ಮಾಡಿದ್ದರು. ಕಾನೂನಾತ್ಮಕವಾಗಿ ಟೆಂಡರ್ ಸಲ್ಲಿಸಿದರೆ ಅವರಿಗೆ ಟೆಂಡರ್ ಸಿಗದಂತೆ ನೋಡಿಕೊಳ್ಳುವುದು ಮತ್ತು ಇವರಿಗೆ ಬೇಕಾದವರಿಗೆ ಹಾಗೂ ಹಣ ಕೊಟ್ಟವರಿಗೆ ಟೆಂಡರ್ ದೊರೆಯುವಂತೆ ಮಾಡುವುದನ್ನು ರಾಜಾರೋಷವಾಗಿ ಮಾಡುತ್ತಿದ್ದರು ಎಂಬ ಆರೋಪಗಳು ಕೇಳಿಬಂದಿವೆ.
ಬಹಳ ಕಾಲದಿಂದ ಇದು ನಡೆಯುತ್ತಿತ್ತು. ಹೀಗಾಗಿ ಇವರಿಂದ ತೊಂದರೆ ಅನುಭವಿಸಿರುವವರು ಇವರ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
ಈಗ ಇವರು ಲೋಕಾಯುಕ್ತ ದಾಳಿಗೆ ತುತ್ತಾಗಿ ಕೋಟಿ ಕೋಟಿ ಹಣ ಪತ್ತೆಯಾಗಿ ಕಂಬಿ ಎಣಿಸುವಂತಾಗಿದೆ. ಬಹುತೇಕ ಇಲಾಖೆಗಳಲ್ಲಿ ಇದೇ ಪರಿಸ್ಥಿತಿ ಇದೆ. ಬಹಳ ಹಿಂದಿನಿಂದಲೂ ಸರ್ಕಾರದ ಟೆಂಡರ್ ಪಡೆದು ಪ್ರಾಮಾಣಿಕವಾಗಿ ಕೆಲಸ ಮಾಡಿಕೊಂಡು ಬರುತ್ತಿದ್ದವರಿಗೆ ಇತ್ತೀಚಿನ ದಿನಗಳಲ್ಲಂತೂ ಯಾವುದೇ ಕೆಲಸ ದೊರೆಯದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಕೂಡಲೇ ವಿಧಾನಸಭೆ ಚುನಾವಣೆ ಘೋಷಣೆ ಮಾಡಲು ಸಿದ್ದರಾಮಯ್ಯ ಒತ್ತಾಯ
ಲಂಚದ ಪ್ರಮಾಣ ಗರಿಷ್ಠ ಮಟ್ಟ ಮುಟ್ಟಿದೆ. ಪ್ರಾಮಾಣಿಕ ಗುತ್ತಿಗೆದಾರರಂತೂ ಕೆಲಸ ಮಾಡದ ಪರಿಸ್ಥಿತಿ ಉಂಟಾಗಿದೆ. ಲೋಕಾಯುಕ್ತರ ಈ ಕ್ರಮಕ್ಕೆ ಸಾರ್ವಜನಿಕರಲ್ಲಿ ಪ್ರಶಂಸೆ ಮೂಡಿದೆ. ಎಲ್ಲ ಇಲಾಖೆಗಳ ಮೇಲೂ ದಾಳಿ ನಡೆಸಿ ಕ್ರಮ ಕೈಗೊಂಡರೆ ಇಂತಹ ಭ್ರಷ್ಟರನ್ನು ಮಟ್ಟ ಹಾಕಬೇಕಾಗಿದೆ.
BJP, MLA, son, Prashant Nadal, arrested, Bengaluru, bribe,