ಮತ್ತೆ ಕಾಂಗ್ರೆಸ್ ಕದ ತಟ್ಟುತ್ತಿರುವ ವಲಸಿಗ ಶಾಸಕರು

Social Share

ಬೆಂಗಳೂರು,ಫೆ.25- ಚುನಾವಣೆ ಸಮೀಪಿಸುತ್ತಿರುವಂತೆ ರಾಜಕೀಯ ಸ್ಥಾನಪಲ್ಲಟ ಗಳು ತೀವ್ರಗೊಳ್ಳುತ್ತಿದ್ದು, ಕಾಂಗ್ರೆಸ್‍ಗೆ ಕೈಕೊಟ್ಟು ಬಿಜೆಪಿ ಸೇರಿದ್ದ ಪ್ರಭಾವಿಗಳು ಮತ್ತೆ ಮೂಲ ಪಕ್ಷದ ಕದ ತಟ್ಟುತ್ತಿರುವ ವದ್ಧಂತಿಗಳಿವೆ.

ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಪತನಕ್ಕೆ ಮೂಹೂರ್ತ ಇಟ್ಟು ಬಾಂಬೆಯಲ್ಲಿ ಠಿಕಾಣಿ ಹೂಡಿ ಆಪರೇಷನ್ ಕಮಲ ಯಶಸ್ವಿಯಾದ ಬಳಿಕ, ಮರಳಿ ಬಂದು ಸರ್ಕಾರದಲ್ಲಿ ಸಚಿವರಾದವರ ಪೈಕಿ ಕೆಲವರು ತಮ್ಮ ಮುಂದಿನ ರಾಜಕೀಯ ಭವಿಷ್ಯದ ಕುರಿತುಗೊಂದಲಕ್ಕೆ ಒಳಗಾಗಿ ಪಕ್ಷ ನಿಷ್ಠೆ ಬದಲಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್‍ನ 14 ಮಂದಿ, ಜೆಡಿಎಸ್‍ನ ಮೂವರು ಶಾಸಕರು ಕಳೆದ ಬಾರಿ ಬಿಜೆಪಿ ಸರ್ಕಾರ ರಚನೆಯಾಗಲು ತಾವು ಕಾರಣ ಎಂಬ ಕಾರಣಕ್ಕೆ ಸಂಪುಟದಲ್ಲಿ ಸ್ಥಾನ ಗಿಟ್ಟಿಸಲು ಯತ್ನಿಸಿದರು, ಅವರಲ್ಲಿ ಕೆಲವರು ಯಶಸ್ವಿಯಾದರು. ಮುಂದಿನ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮತ್ತೆ ಸಚಿವರಾಗುವ ಖಾತ್ರಿ ಕಳೆದುಕೊಂಡಿದ್ದಾರೆ. ಏಕೆಂದರೆ ಈ ಬಾರಿ ಬಿ-ಫಾರಂ ಕೊಟ್ಟು ಗೆಲ್ಲಿಸಿಕೊಳ್ಳುವ ಬಿಜೆಪಿ ವಲಸಿಗ ಶಾಸಕರ ತಾಳಕ್ಕೆ ಕುಣಿಯುವುದಿಲ್ಲ ಎಂಬುದು ಸ್ಪಷ್ಟವಾಗಿದೆ.

ಈಗಾಗಲೇ ಮೂರು ವರ್ಷ ಸಚಿವರಾಗಿ ಸಾಕಷ್ಟು ಪ್ರಭಾವಿಯಾಗಿ ಬೆಳೆದಿರುವ ಬೆಂಗಳೂರಿನ ಮೂರು ಹಾಗೂ ಇತರ ಭಾಗದ ನಾಲ್ಕೈದು ಮಂದಿ ವಲಸಿಗ ಶಾಸಕರು ಮತ್ತೆ ಕಾಂಗ್ರೆಸ್‍ನತ್ತ ಮುಖ ಮಾಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಬಿ-ಫಾರಂನಿಂದಲೇ ಗೆಲ್ಲುವುದರಿಂದ ಪಕ್ಷದ ಮರ್ಜಿಯಲ್ಲಿ ಇರಬೇಕಾಗುತ್ತದೆ. ಈಗಾಗಲೇ ಅಲ್ಲಿ ಸಾಕಷ್ಟು ಪ್ರಭಾವಿಗಳು ಹಾಗೂ ಹಿರಿಯ ನಾಯಕರಿದ್ದಾರೆ.

ಸಿದ್ದುಗೆ ಕಟುಸತ್ಯ ಎದುರಿಸುವ ಕಾಲ ಬಂದೇ ಬರುತ್ತೇ : ಸಿಎಂ

ಅವರ ನಡುವೆ ವಲಸೆ ಬಂದ ನಮ್ಮನ್ನು ಪರಿಗಣಿಸುವ ಸಾಧ್ಯತೆಗಳು ಕ್ಷೀಣವಾಗಿರುತ್ತವೆ. ಹತ್ತರಲ್ಲಿ ಹನ್ನೊಂದನೆ ಶಾಸಕರಾಗಿ ಉಳಿಯುವುದಕ್ಕಿಂತ ಮತ್ತೆ ಕಾಂಗ್ರೆಸ್ ಸೇರುವುದು ಸೂಕ್ತ ಎಂಬ ಚರ್ಚೆಗಳು ನಡೆದಿವೆ ಎನ್ನಲಾಗಿದೆ.

ಬಿಜೆಪಿಗೆ ಹೋದರೂ ಕಾಂಗ್ರೆಸ್‍ನ ಹಿರಿಯ ನಾಯಕರ ಜೊತೆ ಉತ್ತಮ ಭಾಂದವ್ಯವನ್ನು ಪಾಲಿಸುತ್ತಲೆ ಬಂದಿರುವ ವಲಸಿಗರು ತಮ್ಮನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವಂತೆ ದುಂಬಾಲು ಬಿದಿದ್ದಾರೆ ಎನ್ನಲಾಗಿದೆ. ಕ್ಷೇತ್ರದಲ್ಲಿ ಟಿವಿ. ಕುಕ್ಕರ್ ಹಂಚುವಾಗ ಬಿಜೆಪಿ ಬದಲಿಗೆ ವೈಯಕ್ತಿಕ ಹೆಸರಿನಲ್ಲಿ ಮತದಾರರನ್ನು ಒಲೈಸುವ ಯತ್ನ ನಡೆಸಿರುವುದು ಈ ಅನುಮಾನಕ್ಕೆ ಇಂಬು ನೀಡಿದೆ. ಕಾಂಗ್ರೆಸ್‍ಗೆ ಸೇರಿಸಿಕೊಂಡರೆ ಎರಡು ಕ್ಷೇತ್ರಗಳ ಚುನಾವಣೆಯ ಖರ್ಚು ವೆಚ್ಚಗಳನ್ನು ಭರಿಸುವುದಾಗಿ ವಲಸಿಗ ಶಾಸಕರು ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್‍ಗೆ ಈಗಲೂ ಬೆಂಗಳೂರಿನಲ್ಲಿ ಕೆಲವು ಕ್ಷೇತ್ರಗಳಲ್ಲಿ ಸಮರ್ಥ ಅಭ್ಯರ್ಥಿಯ ಕೊರತೆ ಕಾಡುತ್ತಿದೆ. ಚಿಕ್ಕಪೇಟೆ, ಯಶವಂತಪುರ, ಬೊಮ್ಮನಹಳ್ಳಿ, ಯಲಹಂಕ, ದಾಸರಹಳ್ಳಿ, ಬೆಂಗಳೂರು ದಕ್ಷಿಣ, ರಾಜರಾಜೇಶ್ವರಿನಗರ, ರಾಜಾಜೀನಗರ, ಕೆ.ಆರ್.ಪುರಂ, ಮಹಾಲಕ್ಷ್ಮೀ ಬಡಾವಣೆ, ಮಲ್ಲೇಶ್ವರಂ, ಪದ್ಮನಾಭನಗರ ಕ್ಷೇತ್ರಗಳಲ್ಲಿ ಗೆಲ್ಲುವ ಅಭ್ಯರ್ಥಿಗಳ ಹುಡುಕಾಟ ನಡೆದಿದೆ. ಪ್ರಸಕ್ತ ಸರ್ಕಾರದಲ್ಲಿ ಸಂಪುಟದಲ್ಲಿ ಪ್ರಭಾವಿ ಸಚಿವರು ಆಗಿರುವ ಶಾಸಕರೊಬ್ಬರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರೊಂದಿಗಿನ ಹಳೆಯ ನಂಟನ್ನು ಬಳಸಿಕೊಂಡು ಮಾತೃಪಕ್ಷಕ್ಕೆ ಮರಳಲು ಯತ್ನಿಸುತ್ತಿದ್ದಾರೆ ಎನ್ನಲಾಗಿದೆ.

ಮುಗಿಯದ ಮೆಟ್ರೋ ಅವಾಂತರ : ಅದೃಷ್ಟವಶಾತ್ ತಪ್ಪಿದ ಮತ್ತೊಂದು ದುರಂತ

ಕ್ಷೇತ್ರದಲ್ಲಿ ಈ ಕುರಿತು ವ್ಯಾಪಕ ವದ್ಧಂತಿಗಳು ಹರಡಲಾರಂಭಿಸಿವೆ. ಈ ಮೊದಲು ಹಲವು ಬಾರಿ ವಲಸಿಗ ಶಾಸಕರು ತಾವು ಬಿಜೆಪಿಯಲ್ಲೇ ಉಳಿಯಲಿದ್ದು, ಕಾಂಗ್ರೆಸ್‍ಗೆ ಮರಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ರಾಜಕೀಯದಲ್ಲಿ ಯಾವಾಗ ಏನು ಬೇಕಾದರೂ ಆಗಬಹುದು ಎಂಬುದು ಹಲವು ಬಾರಿ ಸಾಬೀತಾಗಿದೆ. ಕಾಂಗ್ರೆಸ್‍ನ ಉನ್ನತ ಮೂಲಗಳು ವಲಸಿಗ ಶಾಸಕರು ತಮ್ಮೊಂದಿಗೆ ಸಂಪರ್ಕದಲ್ಲಿರುವುದನ್ನು ಸ್ಪಷ್ಟಪಡಿಸಿವೆ.

ಜಾತ್ಯತೀತ ಶಕ್ತಿಗಳ ಜೊತೆ ಹೊಂದಾಣಿಕೆಗೆ ಕಾಂಗ್ರೆಸ್ ಸಿದ್ಧ : ಖರ್ಗೆ

ಜೆಡಿಎಸ್‍ನ ಶಾಸಕರಾದ ಶಿವಲಿಂಗೇಗೌಡ, ಎಸ್.ಆರ್.ಶ್ರೀನಿವಾಸ್, ಎ.ಟಿ.ರಾಮಸ್ವಾಮಿ, ಶ್ರೀನಿವಾಸಗೌಡ, ಬಿಜೆಪಿಯ ಎಂಎಲ್‍ಸಿ ಹೆಚ್.ವಿಶ್ವನಾಥ್‍ಸ ಅವರು ಕಾಂಗ್ರೆಸ್ ಸೇರ್ಪಡೆಗೆ ಕ್ಷಣಗಣನೆ ಶುರುವಾಗಿದೆ. ಅದೇ ಸಮಯದಲ್ಲಿ ಗೆಲ್ಲುವ ಅಭ್ಯರ್ಥಿಗಳು ಪಕ್ಷಕ್ಕೆ ಬಂದರೆ ಸ್ವಾಗತಿಸುವುದಾಗಿ ಹೇಳುತ್ತಿರುವ ಕಾಂಗ್ರೆಸ್ ನಾಯಕರು, ವಲಸಿಗರಿಗೆ ಮಣೆ ಹಾಕುವ ಸಾಧ್ಯತೆಯನ್ನು ಅಲ್ಲಗಳೆದಿಲ್ಲ.

BJP, MLAs, Congress, election,

Articles You Might Like

Share This Article