ಬೆಂಗಳೂರು,ಜ.20- ಚುನಾವಣೆ ಸಮೀಪಿಸುತ್ತಿರುವಂತೆ ಕಾಂಗ್ರೆಸ್ನತ್ತ ವಲಸೆ ಬರುವವರ ಸಂಖ್ಯೆ ಹೆಚ್ಚಾಗಿದೆ.
ಬಿಜೆಪಿಯ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಇಂದು ಬಿಜೆಪಿ ತೊರೆಯುವುದಾಗಿ ಪ್ರಕಟಿಸಿದ್ದು, ಶೀಘ್ರವೇ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ಬಿಜೆಪಿಯ ಹಲವು ಶಾಸಕರು ಕಾಂಗ್ರೆಸ್ ಕದ ತಟ್ಟುತ್ತಿದ್ದು, ಬೆಂಗಳೂರಿನ ಇಬ್ಬರು ಪ್ರಭಾವಿ ಶಾಸಕರು ಕೈಪಡೆ ಸೇರ್ಪಡೆಯಾಗಲು ದುಂಬಾಲು ಬಿದಿದ್ದಾರೆ.
ಆಪರೇಷನ್ ಕಮಲ ನಡೆಸಿ ಜೆಡಿಎಸ್ನ ಮೂವರು, ಕಾಂಗ್ರೆಸ್ನ 14 ಮಂದಿ ಶಾಸಕರನ್ನು ಸೆಳೆದುಕೊಂಡ ಸರ್ಕಾರ ರಚಿಸಿದ್ದ ಬಿಜೆಪಿಗೆ ಚುನಾವಣೆ ಸಮೀಪಿಸುತ್ತಿರುವಂತೆ ಇಕ್ಕಟ್ಟಿನ ವಾತಾವರಣ ನಿರ್ಮಾಣವಾಗಿದೆ. ಕಾಂಗ್ರೆಸ್ನ ಹಲವು ಮಂದಿ ಶಾಸಕರು ಬಿಜೆಪಿ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ.
ಸುಮಾರು 20ಕ್ಕೂ ಹೆಚ್ಚು ಮಂದಿ ಬಿಜೆಪಿ ಸೇರಲು ಬಯಸಿದ್ದಾರೆ ಎಂದು ಕೇಸರಿ ಪಡೆಯ ನಾಯಕರು ಪದೇ ಪದೇ ಹೇಳಿಕೊಳ್ಳುತ್ತಲೇ ಇದ್ದಾರೆ. ಬರುವವರನ್ನು ಬೇಗ ಕರೆಸಿಕೊಳ್ಳಿ, ತಡ ಯಾಕೆ ಎಂದು ಡಿ.ಕೆ.ಶಿವಕುಮಾರ್ ಸವಾಲು ಹಾಕುತ್ತಲೇ ಇದ್ದರು. ಆದರೆ ಈವರೆಗೂ ಕಾಂಗ್ರೆಸ್ನ ಯಾವ ಶಾಸಕರು ಬಿಜೆಪಿ ಸೇರ್ಪಡೆಯಾಗಿಲ್ಲ.
ಬದಲಾಗಿ ಬಿಜೆಪಿ ಸರ್ಕಾರ ರಚನೆಯಾಗುವ ವೇಳೆ ಸಮ್ಮಿಶ್ರ ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂಪಡೆದು ಬಿಜೆಪಿ ಜೊತೆ ಸೇರಿದ್ದ ಮುಳಬಾಗಿಲು ಕ್ಷೇತ್ರದ ಪಕ್ಷೇತರ ಶಾಸಕ ನಾಗೇಶ್ ಇತ್ತೀಚೆಗೆ ಮತ್ತೆ ಕಾಂಗ್ರೆಸ್ ಸೇರ್ಪಡೆಯಾದರು. ಸರ್ಕಾರ ರಚನೆಯಾಗಲು ಮುಂದಾಳತ್ವ ವಹಿಸಿದ್ದ ಆಗಿನ ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿದ್ದ ಎಚ್.ವಿಶ್ವನಾಥ್ ಈಗ ಯು ಟರ್ನ್ ಪಡೆದು ಕಾಂಗ್ರೆಸ್ ಸೇರ್ಪಡೆಗೆ ಮುಂದಾಗಿದ್ದಾರೆ.
ಜೆಡಿಎಸ್ ಅಧಿಕಾರಕ್ಕೆ ಬಂದರೆ ಹಳೇ ಪಿಂಚಣಿ ಯೋಜನೆ ಜಾರಿ
ಹಲವು ಬಿಜೆಪಿ ಶಾಸಕರು ಕಾಂಗ್ರೆಸ್ ಸೇರ್ಪಡೆಯಾಗಲು ಆಸಕ್ತಿ ತೋರಿಸಿದ್ದು, ಅವರಿಗೆ ವಿಧಾನಸಭೆ ಚುನಾವಣೆಯಲ್ಲಿ ಅವಕಾಶ ಮಾಡಿಕೊಡಲು ಸಾಧ್ಯವಾಗದಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರೇ ಪಕ್ಷಕ್ಕೆ ಸೇರಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂದು ಹೇಳಲಾಗಿದೆ. ಅದರಲ್ಲೂ ಬೆಂಗಳೂರಿನ ಇಬ್ಬರು ಪ್ರಭಾವಿ ಶಾಸಕರು ಕಾಂಗ್ರೆಸ್ ಬಾಗಿಲು ತಟ್ಟುತ್ತಿದ್ದಾರೆ ಎನ್ನಲಾಗಿದೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ನೆಲಮಂಗಲ ನಗರಸಭೆಯಲ್ಲಿರುವ 14 ಮಂದಿ ಜೆಡಿಎಸ್ ಸದಸ್ಯರ ಪೈಕಿ 11 ಮಂದಿ ಇಂದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಜೊತೆಗೆ ಜಿಲ್ಲಾ ಪಂಚಾಯತ್ನ ಮಾಜಿ ಸದಸ್ಯರು ಇತರ ಪ್ರಮುಖ ನಾಯಕರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ನೆಲಮಂಗಲದಲ್ಲಿ ಬೃಹತ್ ಸಮಾವೇಶ ನಡೆಯಲಿದೆ ಎಂದು ತಿಳಿಸಿದರು.
ಪೊಲೀಸ್ ಮುಖ್ಯಸ್ಥರೊಂದಿಗೆ ಪ್ರಧಾನಿ ಮೋದಿ ಮಹತ್ವದ ಸಭೆ
ನೆಲಮಂಗಲದ ಹಾಲಿ ಶಾಸಕರು ಅಲ್ಲಿನ ನಗರಸಭೆಯ ಅಸ್ತಿತ್ವವನ್ನೇ ತೆಗೆದು ಹಾಕಲು ಯತ್ನಿಸಿದರು. ಸದಸ್ಯರು ಸುಪ್ರೀಂಕೋರ್ಟ್ ವರೆಗೂ ಹೋಗಿ ಹೋರಾಟ ನಡೆಸಿ ಗೆದ್ದಿದ್ದಾರೆ ಎಂದು ಹೇಳಿದರು.
ಪ್ರಜಾಧ್ವನಿ ಯಾತ್ರೆಯಲ್ಲಿ ಬಳ್ಳಾರಿಯಿಂದ ಆರಂಭಗೊಂಡು ನಿನ್ನೆ ದಾವಣಗೆರೆಯಲ್ಲಿ ಮುಕ್ತಾಯವಾಗಿದೆ. ಈ ನಡುವೆ ಹಲವು ನಾಯಕರು ಪಕ್ಷ ಸೇರ್ಪಡೆಗೆ ಮಾತುಕತೆ ನಡೆಸಿದ್ದಾರೆ. ರಾಜ್ಯದಲ್ಲಿ ಬದಲಾವಣೆಯ ಪರ್ವ ಆರಂಭವಾಗಿದೆ.
ಜೆಡಿಎಸ್-ಬಿಜೆಪಿಯಿಂದ ಹಲವು ಮಂದಿ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ. ನೆಲಮಂಗಲದಲ್ಲಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲಿದ್ದಾರೆ. ಬಿಜೆಪಿಯ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಕಾಂಗ್ರೆಸ್ ಸೇರ್ಪಡೆಗೆ ದಿನಾಂಕ ನಿಗದಿಯಾಗಿದೆ ಎಂದು ತಿಳಿಸಿದರು.
ಬಿಜೆಪಿಯಲ್ಲಿರುವ ಹಾಲಿ ಶಾಸಕರು ಕಾಂಗ್ರೆಸ್ಗೆ ಬರುತ್ತಾರೆ. ಬೆಂಗಳೂರಿನ ಇಬ್ಬರು ಶಾಸಕರು ನಮ್ಮನ್ನು ಸಂಪರ್ಕಿಸಿರುವ ಮಾಹಿತಿಯನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ. ಬಹಳಷ್ಟು ಮಂದಿ ಕಾಂಗ್ರೆಸ್ ಸೇರಲು ಸಿದ್ಧರಾಗಿದ್ದಾರೆ. ಹೆಸರು ಬಹಿರಂದ ಪಡಿಸಲು ಸಾಧ್ಯವಿಲ್ಲ. ಅವರಿಗೆ ಸ್ಥಳಾವಕಾಶ ಮಾಡಲು ಕಷ್ಟ ಎಂಬ ಕಾರಣಕ್ಕೆ ನಾವೇ ನಿಧಾನ ಮಾಡುತ್ತಿದ್ದೇವೆ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಬೆಮಲ್ ಕಾಂತರಾಜು ನೇತೃತ್ವದಲ್ಲಿ ನೆಲಮಂಗಲ ನಗರಸಭೆಯ ಜೆಡಿಎಸ್ ಹಾಲಿ ಅಧ್ಯಕ್ಷರು, 11 ಮಂದಿ ನಗರಸಭೆ ಸದಸ್ಯರು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು, ಪ್ರಮುಖ ಮುಖಂಡರು ಹಾಗೂ ನೂರಾರು ಜೆಡಿಎಸ್ ಕಾರ್ಯಕರ್ತರು ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಪೊಲೀಸ್ ಮುಖ್ಯಸ್ಥರೊಂದಿಗೆ ಪ್ರಧಾನಿ ಮೋದಿ ಮಹತ್ವದ ಸಭೆ
ನೆಲಮಂಗಲ ನಗರಸಭೆಯಲ್ಲಿ 14 ಮಂದಿ ಜೆಡಿಸ್ ಸದಸ್ಯರಿದ್ದು, ಅವರಲ್ಲಿ 11 ಮಂದಿ ಕಾಂಗ್ರೆಸ್ ಗೆ ಬೆಷರತ್ ಸೇರ್ಪಡೆಯಾಗಿದ್ದಾರೆ. ಅಧ್ಯಕ್ಷರಾದ ಲತಾ ಹೇಮಂತ್ ಕುಮಾರ್, ನಗರಸಭೆ ಸದಸ್ಯರಾದ ರಾಜಮ್ಮ ಪಿಳ್ಳಪ್ಪ, ಆನಂದ್, ಆಂಜಿನಪ್ಪ, ಅಂಜನಮೂರ್ತಿ (ಪಾಪಣಿ), ದಾಕ್ಷಾಯಿಣಿ ರವಿ ಕುಮಾರ್, ಪ್ರಸಾದ್, ಚೇತನ್, ಪುಷ್ಪಲತಾ ಮಾರೇಗೌಡ, ಭಾರತಿ ಬಾಯಿ ನಾರಾಯಣ್ ರಾವ್ ಸೇರಿ ಹಲವು ಮಂದಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
BJP, MLAs, soon, join, Congress,