ನವದೆಹಲಿ,ಮಾ.17-ಭಾರತ ವಿರೋಧಿ ಹೇಳಿಕೆ ನೀಡಿರುವ ರಾಹುಲ್‍ಗಾಂಧಿ ಅವರ ಸಂಸದ ಸ್ಥಾನ ವಜಾಗೊಳಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ. ಕೇಂಬ್ರಿಡ್ಜ್ ವಿವಿಯಲ್ಲಿ ಭಾರತೀಯ ಪ್ರಜಾಪ್ರಭುತ್ವ ಕುರಿತು ರಾಹುಲ್ ನೀಡಿರುವ ಹೇಳಿಕೆ ಪರಿಶೀಲಿಸಲು ವಿಶೇಷ ಸಮತಿ ರಚಿಸಬೇಕು ಎಂದು ಒತ್ತಾಯಿಸಿರುವ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ದೇಶದ ಮಾನವನ್ನು ವಿದೇಶದಲ್ಲಿ ಹರಾಜು ಹಾಕಿರುವ ರಾಹುಲ್ ಸಂಸದ ಸ್ಥಾನ ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ರಾಹುಲ್ ಗಾಂಧಿ ಅವರು ಯುರೋಪ್ ಮತ್ತು ಅಮೆರಿಕದಲ್ಲಿ ತಮ್ಮ ಹೇಳಿಕೆಗಳಿಂದ ಸಂಸತ್ತಿನ ಮತ್ತು ದೇಶದ ಘನತೆಯನ್ನು ನಿರಂತರವಾಗಿ ಹಾಳುಮಾಡಿದ್ದಾರೆ ಮತ್ತು ಆದ್ದರಿಂದ ಅವರನ್ನು ಸಂಸತ್ತಿನಿಂದ ಹೊರಹಾಕುವ ಸಮಯ ಬಂದಿದೆ ಎಂದಿದ್ದಾರೆ.
ಬರೋಬ್ಬರಿ 4 ಸಾವಿರ ಚಿತ್ರಮಂದಿರಗಳಲ್ಲಿ ತೆರೆಗಪ್ಪಳಿಸುತ್ತಿದೆ ಕಬ್ಜ ಚಿತ್ರ
ಕಳೆದ ವಾರವೂ ದುಬೆ ಅವರು ಕಾಂಗ್ರೆಸ್ ನಾಯಕರ ವಿರುದ್ಧದ ವಿಶೇಷಾಕಾರದ ನೋಟಿಸ್‍ಗೆ ಸಂಸದೀಯ ಸಮಿತಿಯ ಮುಂದೆ ಮಂಡಿಸುವಾಗ ಲೋಕಸಭೆಯಿಂದ ಗಾಂಯವರ ಸದಸ್ಯತ್ವವನ್ನು ವಜಾಗೊಳಿಸುವಂತೆ ಕೋರಿದ್ದರು ಎಂದು ಮೂಲಗಳನ್ನು ಉಲ್ಲೇಖಿಸಿವೆ.
ಇಂದು ಮುಂಜಾನೆ, ಎಂಟು ಕೇಂದ್ರ ಸಚಿವರು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಸಂಸತ್ ಭವನದಲ್ಲಿ ಭೇಟಿಯಾಗಿ ರಾಹುಲ್ ವಿಷಯ ಕುರಿತಂತೆ ಚರ್ಚೆ ನಡೆಸಿದ್ದಾರೆ.
ಗಿಫ್ಟ್ ಹಿಡಿದು ಮನವೊಲಿಸಲು ಬಂದ ಜನಪ್ರತಿನಿಗಳ ವಿರುದ್ಧ ಆಕ್ರೋಶ
ಕಳೆದ ನಾಲ್ಕು ದಿನಗಳಿಂದ ಪ್ರತಿದಿನ ಬೆಳಿಗ್ಗೆ, ಕ್ಯಾಬಿನೆಟ್ ಮಂತ್ರಿಯೊಬ್ಬರು ಮಾಧ್ಯಮಗಳ ಮುಂದೆ ರಾಹುಲ್ ವಿರುದ್ಧ ದಾಳಿ ನಡೆಸುತ್ತಿದ್ದಾರೆ. ಮುಂದಿನ ಸರದಿಯಲ್ಲಿ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರಿದ್ದಾರೆ.
#BJP, #RahulGandhi, #suspended, #LokSabha,