ನವದೆಹಲಿ,ಫೆ.8- ಲೋಕಸಭೆಯಲ್ಲಿ ಪ್ರಧಾನಿ ಮತ್ತು ಅದಾನಿ ನಡುವಿನ ಸಂಬಂದ ಕುರಿತಂತೆ ಮಾತನಾಡಿರುವ ಕಾಂಗ್ರೆಸ್ ಮುಖಂಡ ರಾಹುಲ್‍ಗಾಂಧಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ರಾಹುಲ್ ಗಾಂಧಿ ಅವರು ಲೋಕಸಭೆಯ ದಾರಿತಪ್ಪಿಸುವ ಮೂಲಕ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಮತ್ತು ಯಾವುದೆ ಸಾಕ್ಷಿಇಲ್ಲದೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ದ ಆರೋಪ ಮಾಡಿರುವುದು ಮಾನಹಾನಿಕರ ಹೇಳಿಕೆಯಾಗಿರುವುದರಿಂದ ರಾಹುಲ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಪತ್ರದಲ್ಲಿ ಆಗ್ರಹಿಸಿದ್ದಾರೆ.
ರಾಹುಲ್ ಹೇಳಿಕೆಗಳು ತಪ್ಪುದಾರಿಗೆಳೆಯುವ, ಅವಹೇಳನಕಾರಿ, ಅಸಭ್ಯ, ಅಸಂಸದೀಯ, ಘನತೆಯಿಲ್ಲದ ಮತ್ತು ಸದನದ ಘನತೆಗೆ ಮತ್ತು ಮಾನ್ಯ ಪ್ರಧಾನ ಮಂತ್ರಿಗಳನ್ನು ದೋಷಾರೋಪಣೆ ಮಾಡುವ ಸ್ವಭಾವವನ್ನು ಹೊಂದಿವೆ ಎಂದು ಅವರು ಹೇಳಿದರು.
ಭೂಕಂಪನ ಪೀಡಿತ ಟರ್ಕಿಯಲ್ಲಿ ನರಕಯಾತನೆ: ಸಾವಿನ ಸಂಖ್ಯೆ 8000ಕ್ಕೇರಿಕೆ
ತಮ್ಮ ಹೇಳಿಕೆಗಳನ್ನು ಬೆಂಬಲಿಸಲು ಯಾವುದೇ ದೃಢೀಕೃತ ದಾಖಲೆಗಳನ್ನು ಸಲ್ಲಿಸಿಲ್ಲ. ಹಾಗಾಗಿ, ಯಾವುದೆ ಸಾಕ್ಷ್ಯಾಧಾರಗಳ ಅನುಪಸ್ಥಿತಿಯಲ್ಲಿ ಅವರು ಸದನವನ್ನು ದಾರಿತಪ್ಪಿಸುವಂತಹ ಹೇಳಿಕೆಯನ್ನು ನೀಡಿದ್ದಾರೆ ಎಂದು ದುಬೆ ಆರೋಪಿಸಿದ್ದಾರೆ.
ಕುಮಾರಸ್ವಾಮಿ ಹೇಳಿಕೆಯಿಂದ ಬಿಜೆಪಿಗೆ ಆತಂಕವಿಲ್ಲ: ಅಶ್ವಥ್ ನಾರಾಯಣ
ಈ ನಡವಳಿಕೆಯು ಸದನ ಮತ್ತು ಅದರ ಸದಸ್ಯರ ಸವಲತ್ತುಗಳ ಸ್ಪಷ್ಟ ಉಲ್ಲಂಘನೆಯಾಗಿದೆ, ಜೊತೆಗೆ ಸದನದ ಅವಹೇಳನದ ಸ್ಪಷ್ಟ ಪ್ರಕರಣವಾಗಿದೆ. ಸವಲತ್ತು ಉಲ್ಲಂಘನೆ ಮತ್ತು ಸದನದ ಅವಹೇಳನಕ್ಕಾಗಿ ದಯವಿಟ್ಟು ರಾಹುಲ್ ಗಾಂಧಿ ವಿರುದ್ಧ ತಕ್ಷಣ ಕ್ರಮ ತೆಗೆದುಕೊಳ್ಳುವಂತೆ ನಾನು ನಿಮ್ಮನ್ನು ವಿನಂತಿಸುತ್ತೇನೆ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
BJP, MP, Against, Rahul Gandhi, PM Modi, Remarks,