ಕೊಪ್ಪಳ,ಸೆ.17- ಚೈತ್ರಾ ಕುಂದಾಪುರ ಪ್ರಕರಣದ ಬಳಿಕ ಬಿಜೆಪಿಯಲ್ಲಿ ಎಲ್ಲಾ ಟಿಕೆಟ್‍ಗಳು ಮಾರಾಟವಾಗಿವೆ ಎಂಬುದು ಖಚಿತವಾಗಿದೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಆರೋಪಿಸಿದ್ದಾರೆ. ಬಿಜೆಪಿಯಲ್ಲಿ 5 ರಿಂದ 7 ಕೋಟಿಗೆ ವಿಧಾನಸಭೆ ಟಿಕೆಟ್, 70 ರಿಂದ 80 ಕೋಟಿಗೆ ಸಚಿವ ಸ್ಥಾನ, 2,500 ಕೋಟಿಗೆ ಮುಖ್ಯಮಂತ್ರಿ ಹುದ್ದೆ ಮಾರಾಟವಾಗಿದೆ ಎಂದು ಅವರೇ ಹೇಳುತ್ತಿದ್ದರು. ಇದ್ಯಾವೂ ನಮ್ಮ ಅಭಿಪ್ರಾಯಗಳಲ್ಲ. ಬಿಜೆಪಿಯವರ ಹೇಳಿಕೆಗಳಲ್ಲೇ ದೃಢಪಟ್ಟಿದೆ.
ಬಿಜೆಪಿಯಲ್ಲಿ ಮುಖ್ಯಮಂತ್ರಿ ಹುದ್ದೆ ಮಾರಾಟಕ್ಕಿರುವ ಬಗ್ಗೆ ಬಸನಗೌಡ ಪಾಟೀಲ್ ಯತ್ನಾಳ್ ಅವರೇ ಹೇಳಿದ್ದರು. ಚೈತ್ರಾ ಕುಂದಾಪುರ ಅವರ ಪ್ರಕರಣ ಈಗ ಬಿಜೆಪಿಯಲ್ಲಿ ವಿಧಾನಸಭೆ ಟಿಕೆಟ್ ಕೂಡ ಮಾರಾಟಕ್ಕಿರುವುದನ್ನು ಸಾಬೀತುಪಡಿಸಿದೆ ಎಂದರು.
ಲೋಕಸಭೆ ಚುನಾವಣೆಯ ಟಿಕೆಟ್‍ಗಳು ಕೂಡ ಬಿಜೆಪಿಯಲ್ಲಿ ಮಾರಾಟಕ್ಕಿರಬಹುದು. ವಿಧಾನಸಭೆ ಮತ್ತು ವಿಧಾನಪರಿಷತ್‍ನ ವಿರೋಧಪಕ್ಷದ ನಾಯಕರನ್ನು ಬಿಜೆಪಿಯವರೂ ಇನ್ನೂ ನೇಮಿಸಿಲ್ಲ. ಅದಕ್ಕೆ ಯಾವಾಗ ಟೆಂಡರ್ ಕರೆಯುತ್ತಾರೋ ಗೊತ್ತಿಲ್ಲ. ಪತ್ರಿಕೆಗಳಲ್ಲಿ, ಟಿವಿಗಳಲ್ಲಿ ಅಥವಾ ಜಾಗತಿಕ ಟೆಂಡರ್ ಕರೆಯುತ್ತಾರೋ ಗೊತ್ತಿಲ್ಲ. ಅದು 100 ಕೋಟಿಗೋ ಅಥವಾ 200 ಕೋಟಿಗೆ ಬಿಕರಿಯಾಗುತ್ತದೆಯೇನೋ ಎಂಬ ಮಾಹಿತಿ ಇಲ್ಲ ಎಂದು ಲೇವಡಿ ಮಾಡಿದರು.
ಸರ್ವಾಧಿಕಾರಿ ಆಡಳಿತವನ್ನು ಕಿತ್ತೊಗೆಯಲು ಸಂಘಟನಾತ್ಮಕ ಹೋರಾಟ: ಮಲ್ಲಿಕಾರ್ಜುನ ಖರ್ಗೆ
ಚೈತ್ರಾ ಕುಂದಾಪುರ ಅವರ ಪ್ರಕರಣ ಬಿಜೆಪಿಯ ಟಿಕೆಟ್ ಮಾರಾಟವನ್ನು ಖಚಿತಪಡಿಸಿದೆ. ಕಾಂಗ್ರೆಸ್ ಪಕ್ಷದಲ್ಲಿ ಆ ರೀತಿ ನಡೆದಿಲ್ಲ ನಾವು ಸರ್ವೆ ಮಾಡಿ ವಾಸ್ತವಾಂಶ ತಿಳಿದುಕೊಂಡು ಬಳಿಕ ಟಿಕೆಟ್ ಹಂಚಿಕೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ಚೈತ್ರಾ ಕುಂದಾಪುರ ಪ್ರಕರಣದಲ್ಲಿ ಕೊಪ್ಪಳ ಜಿಲ್ಲೆಯ ಮಾಜಿ ಶಾಸಕರೊಬ್ಬರಿಗೆ ವಂಚನೆಯಾಗಿರುವುದು ನಡೆದಿದ್ದರೆ, ಅದನ್ನೂ ಕೂಡ ಸಿಸಿಬಿಗೆ ವಹಿಸಲು ಚರ್ಚೆ ನಡೆಸುವುದಾಗಿ ತಿಳಿಸಿದರು. 3 ಉಪಮುಖ್ಯಮಂತ್ರಿಗಳ ಹುದ್ದೆಯ ಬಗ್ಗೆ ಸಚಿವ ಕೆ.ಎನ್.ರಾಜಣ್ಣ ಅವರ ಹೇಳಿಕೆಗೆ ತಾವು ಪ್ರತಿಕ್ರಿಯಿಸುವುದಿಲ್ಲ ಎಂದು ಜಾರಿಕೊಂಡರು.
BJP, #OppositionLeader, #Minister, #ShivarajTangadagi,