ವ್ಯಕ್ತಿ ಚಾರಿತ್ರ್ಯಾ ನೋಡಿ ಪಕ್ಷಕ್ಕೆ ಸೇರಿಸಿಕೊಳ್ಳಿ : ಹೈಕಮಾಂಡ್ ಸೂಚನೆ

Social Share

ಬೆಂಗಳೂರು,ನ.30- ಇನ್ನು ಮುಂದೆ ಪಕ್ಷಕ್ಕೆ ಯಾರನ್ನೇ ಸೇರ್ಪಡೆ ಮಾಡಿಕೊಳ್ಳುವಾಗ ವ್ಯಕ್ತಿಯ ಚಾರಿತ್ರ್ಯ, ಹಿನ್ನಲೆಯನ್ನು ಕಡ್ಡಾಯವಾಗಿ ಪರಿಗಣಿಸಿ ವರಿಷ್ಠರ ಅನುಮತಿ ಪಡೆಯಬೇಕೆಂದು ಬಿಜೆಪಿ ಹೈಕಮಾಂಡ್ ರಾಜ್ಯ ಘಟಕಕ್ಕೆ ಸೂಚನೆ ಕೊಟ್ಟಿದೆ.

ಕಳೆದ ವಾರ ಕ್ರಿಮಿನಲ್ ಅಪರಾಧ ಹಿನ್ನಲೆಯುಳ್ಳ ಸೈಕಲ್ ರವಿಯನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದು ಹಾಗೂ ಸೈಲೆಂಟ್ ಸುನೀಲ ಜೊತೆ ಸಂಸದರು ಮತ್ತು ಶಾಸಕರು ವೇದಿಕೆ ಹಂಚಿಕೊಂಡಿರುವುದು ಬಿಜೆಪಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಈ ಹಿನ್ನಲೆಯಲ್ಲಿ ಇನ್ನು ಮುಂದೆ ಯಾರೇ ಪಕ್ಷಕ್ಕೆ ಸೇರ್ಪಡೆಯಾಗುವುದಾದರೆ ಮೊದಲು ಅವರ ಚಾರಿತ್ರ್ಯ ಹಾಗೂ ಹಿನ್ನಲೆಯನ್ನು ತಿಳಿದುಕೊಂಡು ವರಿಷ್ಠರಿಗೆ ಮಾಹಿತಿ ನೀಡಬೇಕು. ನಾವು ಒಪ್ಪಿಗೆ ಕೊಟ್ಟರೆ ಮಾತ್ರ ಸೇರಿಸಿಕೊಳ್ಳಬೇಕೆಂದು ಸೂಚನೆ ಕೊಟ್ಟಿದೆ.

ಮತದಾರರ ಮಾಹಿತಿ ಕಳವು: ಸರ್ಕಾರೇತರ ಸಂಸ್ಥೆಗಳ ಮೇಲೆ ಅನುಮಾನದ ಹುತ್ತ..!

ಇತ್ತೀಚೆಗೆ ಪಕ್ಷಕ್ಕೆ ಯಾರೇ ಸೇರ್ಪಡೆಯಾದರೂ ಅವರ ಹಿನ್ನಲೆ ಸೇರಿದಂತೆ ಪ್ರತಿಯೊಂದನ್ನು ಜನರು ಗಮನಿಸುತ್ತಾರೆ. ನಾವು ಯಾವುದನ್ನೂ ಕೂಡ ಮುಚ್ಚಿಡಲು ಸಾಧ್ಯವಿಲ್ಲ. ಮಾಧ್ಯಮಗಳಿಗಿಂತ ಸಾಮಾಜಿಕ ಜಾಲತಾಣಗಳಲ್ಲಿ ಇಂಚಿಂಚು ಮಾಹಿತಿಯನ್ನು ಹರಿಬಿಡುತ್ತಾರೆ. ಇದು ಸರ್ಕಾರ ಮತ್ತು ಪಕ್ಷಕ್ಕೆ ಮುಳುವಾಗತ್ತದೆ ಎಂದು ಎಚ್ಚರಿಸಿದೆ.

ಒಂದೆರಡು ಕ್ಷೇತ್ರಗಳಿಗಾಗಿ ಅಪರಾಧ ಹಿನ್ನಲೆಯುಳ್ಳ ವ್ಯಕ್ತಿಗಳನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರೆ ಅದು ಬೇರೆ ಬೇರೆ ಕ್ಷೇತ್ರಗಳ ಮೇಲೆ ಪರಿಣಾಮ ಬೀರುತ್ತದೆ. ರಾಜ್ಯ ಬಿಜೆಪಿ ಘಟಕ ತೆಗೆದುಕೊಂಡಿರುವ ನಿಲುವು ನಮಗೆ ತೃಪ್ತಿಕರವಾಗಿಲ್ಲ ಎಂದು ವರಿಷ್ಠರು ಅಸಮಧಾನ ಹೊರಹಾಕಿದ್ದಾರೆ.

ಸಚ್ಚಾರಿತ್ರ್ಯ ಹಿನ್ನಲೆಯವರಾದರೆ ಯಾವುದೇ ಸಮಸ್ಯೆ ಇಲ್ಲ. ಆದರೆ ಅಪರಾಧ ಹಿನ್ನಲೆ ಹೊಂದಿದವರಾಗಿದ್ದರೆ ಪಕ್ಷಕ್ಕೆ ಮುಜುಗರವಾಗುತ್ತದೆ. ಈಗ ಸೈಕಲ್ ರವಿ ಮತ್ತು ಸೈಲೆಂಟ್ ಸುನೀಲನ ಜೊತೆ ವೇದಿಕೆ ಹಂಚಿಕೊಂಡಿರುವುದರಿಂದ ಸಾರ್ವಜನಿಕವಾಗಿ ನಮಗೆ ಉತ್ತರ ಕೊಡಲು ಕಷ್ಟಕರವಾಗುತ್ತದೆ ಎಂದಿದ್ದಾರೆ.

ಇಂಥವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಯಾವ ಸಂದೇಶ ಕೊಡಲು ಹೊರಟಿದ್ದೀರಿ ಎಂದು ಪ್ರಶ್ನಿಸಿದರೆ ನಮ್ಮ ಬಳಿ ಉತ್ತರವಿಲ್ಲ. ಹಾಗಾಗಿ ಕಂಡಕಂಡವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಪ್ರಕ್ರಿಯೆಗೆ ತಡೆ ಹಾಕಬೇಕೆಂದು ಹೈಕಮಾಂಡ್ ಸೂಚನೆ ನೀಡಿದೆ ಎಂದು ಹೇಳಲಾಗಿದೆ.

ಪ್ರಧಾನಿ ನರೇಂದ್ರಮೋದಿ ಅವರ ಜೊತೆ ಅಪ್ಪಿತಪ್ಪಿ ಇಂಥವರು ವೇದಿಕೆ ಹಂಚಿಕೊಂಡರೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಇದು ಸುದ್ದಿಯಾಗುತ್ತದೆ. ನಮ್ಮ ವಿರೋಧಿಗಳು ಇದಕ್ಕಾಗಿಯೇ ಕಾಯುತ್ತಿರುತ್ತಾರೆ. ಇದಕ್ಕೆ ಅವಕಾಶ ಕೊಡಬೇಡಿ ಎಂದು ಎಚ್ಚರಿಸಿದೆ.

ಖ್ಯಾತ ಉದ್ಯಮಿ ವಿಕ್ರಮ್ ಕಿರ್ಲೋಸ್ಕರ್ ನಿಧನ

ಎರಡು ಕ್ಷೇತ್ರಗಳನ್ನು ಕಳೆದುಕೊಂಡರೆ ಆಕಾಶ ಕಳಚಿ ಬೀಳುವುದಿಲ್ಲ. ಆದರೆ ಅಂಥವರ ಸೇರ್ಪಡೆಯಿಂದ ಬೇರೆ ಬೇರೆ ಕ್ಷೇತ್ರಗಳ ಮೇಲೆ ಪರಿಣಾಮ ಬೀರಿದರೆ ಪಕ್ಷಕ್ಕಾಗುವ ನಷ್ಟವನ್ನು ತಪ್ಪಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಯಾರನ್ನೇ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವುದಿದ್ದರೆ ಮೊದಲು ಅವರ ಹಿನ್ನಲೆಯನ್ನು ಸಂಪೂರ್ಣ ಪರಿಶೀಲಿಸಿ ಪಕ್ಷದ ಶಿಸ್ತು ಸಮಿತಿ, ಹಿರಿಯರ ಗಮನಕ್ಕೆ ತನ್ನಿ. ಅವರು ನಿರ್ಧರಿಸಿದ ಮೇಲೆ ಸೇರ್ಪಡೆ ಮಾಡಿಕೊಳ್ಳಿ ಎಂದು ಹೇಳಿದೆ.

ಸಲಿಂಗ ವಿವಾಹ ಮಸೂದೆಗೆ ಅಮೆರಿಕ ಸೆನೆಟ್ ಅಂಗೀಕಾರ

ಪ್ರತಿ ಚುನಾವಣೆಯಲ್ಲಿ ನಾವು ಕ್ರಿಮಿನಲ್ ಹಿನ್ನಲೆಯುಳ್ಳವರನ್ನು ಗುರಿಯಾಗಿಟ್ಟುಕೊಂಡು ಪ್ರತಿಪಕ್ಷಗಳ ಮೇಲೆ ವಾಗ್ದಾಳಿ ನಡೆಸುತ್ತೇವೆ. ಆದರೆ ನಮ್ಮ ಪಕ್ಷದಲ್ಲೇ ಇಂಥವರು ಇರುವಾಗ ನಮಗೆ ಇನ್ನೊಬ್ಬರ ಮೇಲೆ ಟೀಕೆ ಮಾಡುವ ನೈತಿಕತೆಯೂ ಇರುವುದಿಲ್ಲ.

ಜೆಡಿಎಸ್ ಪಂಚರತ್ನ ರಥಯಾತ್ರೆಗೆ ವ್ಯಾಪಕ ಜನಬೆಂಬಲ

ಇವೆಲ್ಲವನ್ನೂ ಗಮನದಲ್ಲಿಟ್ಟುಕೊಳ್ಳಬೇಕು. ಇನ್ನು ಮುಂದೆ ಅಪರಾಧ ಹಿನ್ನಲೆಯುಳ್ಳವರು, ರೌಡಿಶೀಟರ್‍ನಲ್ಲಿರುವವರು, ಸಮಾಜಘಾತುಕರನ್ನು ಪಕ್ಷದ ವೇದಿಕೆಯತ್ತ ಸುಳಿಯಲೂ ಅವಕಾಶ ಮಾಡಿಕೊಡಬೇಡಿ ಎಂದು ಹೈಕಮಾಂಡ್ ಸೂಚನೆ ಕೊಟ್ಟಿದೆ.

BJP, party, New, join, high command, permission,

Articles You Might Like

Share This Article