ಬೆಂಗಳೂರು, ನ.29- ಶಾಂತಿ ಕದಡಲು ಬಿಜೆಪಿಯವರಿಗೆ ರೌಡಿಶೀಟರ್‍ಗಳೇ ಬೇಕು, ಅದಕ್ಕಾಗಿ ಕ್ರಿಮಿನಲ್‍ಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಹೆಲಿಪ್ಯಾಡ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೊತ್ತಿದ್ದು ಗೊತ್ತಿದ್ದು ರೌಡಿಗಳ ಜೊತೆ ವೇದಿಕೆ ಹಂಚಿಕೊಳ್ಳುವುದು ಸರಿಯಲ್ಲ ಎಂದರು.
ಸೈಲೆಂಟ್ ಸುನಿಲ್ ಒಬ್ಬ ಕುಖ್ಯಾತ ರೌಡಿ. ಇಬ್ಬರು ಎಂಪಿಗಳು, ಬಿಜೆಪಿ ನಾಯಕರು ಅವನ ಜೊತೆ ಇದ್ದಾರೆ. ಸುನಿಲ್ ಒಬ್ಬ ಸರ್ಚ್ ವಾರೆಂಟ್ ನಲ್ಲಿ ಇರೋ ರೌಡಿ. ಅಂತಹವನ ಜೊತೆ ವೇದಿಕೆ ಹಂಚಿಕೊಳ್ಳುವುದು ಸರಿನಾ ಎಂದು ಪ್ರಶ್ನಿಸಿದರು.
ರೌಡಿಯ ಜೊತೆ ವೇದಿಕೆ ಹಂಚಿಕೊಂಡು, ಅದಕ್ಕೆ ಬಿಜೆಪಿಗರು ಸಮರ್ಥನೆ ಬೇರೆ ನೀಡುತ್ತಿದ್ದಾರೆ. ಕಾಂಗ್ರೆಸ್ಸಿ ನಲ್ಲೂ ರೌಡಿಗಳಿದ್ದಾರೆ ನೋಡಿ ಎನ್ನುತ್ತಿದ್ದಾರೆ. ಬಿಜೆಪಿಯವರಿಗೆ ಇದೊಂದು ಅಂಟು ರೋಗವಾಗಿದೆ. ಅದರಲ್ಲೂ ಬಸವರಾಜ ಬೊಮ್ಮಾಯಿಗೆ ಆ ರೋಗ ಜಾಸ್ತಿಯಾಗಿದೆ. ಎಲ್ಲದಕ್ಕೂ ಹಿಂದಿನ ಸರ್ಕಾರ ಮತ್ತು ಕಾಂಗ್ರೆಸ್ಸಿನತ್ತ ಬೊಟ್ಟು ಮಾಡುತ್ತಾರೆ ಎಂದು ಅಸಮಧಾನ ವ್ಯಕ್ತ ಪಡಿಸಿದರು.
BIG NEWS: ಬೆಂಗಳೂರಿನಲ್ಲಿ ಸಾಮೂಹಿಕ ಅತ್ಯಾಚಾರ, ಮೂವರ ಬಂಧನ
ಮೊದಲು ನಿಮ್ಮ ತಪ್ಪುಗಳ ಬಗ್ಗೆ ಹೇಳಿ, ನೀವೇನು ಮಾಡಿದ್ದೀರಾ, ನಿಮ್ಮ ತಪ್ಪೇನು ಅಂತಾ ಹೇಳಿ. ನೀವು ಅನೈತಿಕವಾಗಿ ಅಧಿಕಾರಕ್ಕೆ ಬಂದಿದ್ದೀರ, ಏನು ಮಾಡುತ್ತಿದ್ದೀರಾ ಎಂದು ಹೇಳಬೇಕಲ್ವಾ ಎಂದು ಪ್ರಶ್ನಿಸಿದರು.
ರೌಡಿ ಶೀಟರ್ ಫೈಟರ್ ರವಿ ಬಿಜೆಪಿ ಸೇರ್ಪಡೆ ಕುರಿತು ಪ್ರತಿಕ್ರಿಯಿಸಿದ ಅವರು, ಹೆಸರಲ್ಲೇ ಅವನ ಬಗ್ಗೆ ಗೊತ್ತಾಗುತ್ತದೆ. ಬಿಜೆಪಿಯವರಿಗೆ ಅಶಾಂತಿ ನಿರ್ಮಾಣ ಮಾಡಲು ಇಂತಹವರು ಬೇಕಲ್ಲ ಎಂದು ತಿರುಗೇಟು ನೀಡಿದರು.
ಪ್ರೀತಿಸಿದ ಯುವತಿಯನ್ನು ಮದುವೆಯಾಗಲು ಎಟಿಎಂ ದೋಚಿದ್ದ ಸೆಕ್ಯುರಿಟಿ ಗಾರ್ಡ್
ಕಾಂಗ್ರೆಸ್ಸಿಗರು ಜೈಲಿಗೆ ಹೋಗಿ ಬಂದವರು ಎಂದು ಬಿಜೆಪಿ ಹೇಳುತ್ತಿದೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಎಲ್ಲಿ ಹೋಗಿದ್ದರು. ಅವರೇನು ಮಾವನ ಮನೆಗೆ ಹೋಗಿದ್ರ? ಗಡಿಪಾರು ಶಿಕ್ಷೆಗೆ ಗುರಿಯಾಗಿದ್ದರು. 3 ವರ್ಷಕ್ಕೂ ಹೆಚ್ಚು ಕಾಲ ಜೈಲಾಗಿದ್ದ ವ್ಯಕ್ತಿ ಇಂದು ಈ ದೇಶದ ಗೃಹ ಸಚಿವರು. ಈ ಹಿಂದೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೂ ಆಗಿದ್ದರು ಎಂದು ಲೇವಡಿ ಮಾಡಿದರು.
ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಮೇಲೆ ಕ್ರಿಮಿನಲ್ ಕೇಸ್ ಆಗಿತ್ತಷ್ಟೆ, ನಲಪಾಡ್ ರೌಡಿ ಅಲ್ಲ, ರೌಡಿ ಶೀಟರ್ ಕೂಡ ಅಲ್ಲ. ಆರೋಪ ಸಾಬೀತಾಗಿ ಶಿಕ್ಷೆ ಆಗಿದ್ರೆ ಆರೋಪವನ್ನು ಪರಿಗಣಿಸಬಹುದು ಎಂದರು.
ಬಿಜೆಪಿಯವರದ್ದು ಮೊಂಡತನ, ಭಂಡತನ. ಮಾನ ಮರ್ಯಾದೆ ಇಲ್ದೆ ಇರೋರಿಗೆ ಹಿಂಗೇ ಆಗೋದು ಎಂದು ಸಿದ್ದರಾಮಯ್ಯ ಕಿಡಿಕಾರಿದರು.
ಕಾಶ್ಮೀರಿ ಫೈಲ್ಸ್ 2.0 ಚಿತ್ರ ಮಾಡಿ: ಸಂಜಯ್ ರಾವತ್ ಸವಾಲು
ಇದಕ್ಕೂ ಮೊದಲು ಶಿವಮೊಗ್ಗದಲ್ಲಿ ಮಾತನಾಡಿದ ಅವರು, ನನ್ನ ಜೀವನವನ್ನು ಸಿನಿಮಾ ಮಾಡುತ್ತೇವೆ ಎಂದು ಕನಕಗಿರಿ ಕ್ಷೇತ್ರದವರು ಬಂದಿದ್ದರು. ನಾನು ಚಿತ್ರದಲ್ಲಿ ನಟಿಸಲ್ಲ, ನನಗೆ ನಟನೆ ಬರಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
BJP, party, rowdy, sheeters, siddaramaiah,