ಅಮ್ಮ-ಮಕ್ಕಳ ಪಕ್ಷ ದೆಹಲಿ ಸೇರುತ್ತೆ, ಅಪ್ಪ-ಮಕ್ಕಳ ಪಕ್ಷ ಸಮುದ್ರಕ್ಕೆ ಬೀಳುತ್ತೆ, ಹುಲಿಯಾ ಕಾಡಿಗೆ, ಬಂಡೆ ಛಿದ್ರ

Social Share

ಮೈಸೂರು,ಅ.30-ಮುಂದಿನ 2023ಕ್ಕೆ ಅಮ್ಮ-ಮಕ್ಕಳ ಪಕ್ಷ ದೆಹಲಿಗೆ ಹೋಗುತ್ತೆ. ಅಪ್ಪ-ಮಕ್ಕಳ ಪಕ್ಷ ಸಮುದ್ರಕ್ಕೆ ಬೀಳುತ್ತದೆ. ಹುಲಿಯಾ ಕಾಡು ಸೇರಿದರೆ, ಬಂಡೆ ಒಡೆಯುತ್ತೇ ರಾಜ್ಯದಲ್ಲಿ ಮತ್ತೆ ಬಿಜೆಪಿ 150 ಕ್ಷೇತ್ರ ಗೆಲ್ಲುವ ಮೂಲಕ ಕಮಲ ಅರಳುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಹೇಳಿದರು.

ರಾಜ್ಯ ಭಾರತೀಯ ಜನತಾ ಪಕ್ಷದಿಂದ ಮೈಸೂರಿನ ಭೂತಾಳೆ ಮೈದಾನದಲ್ಲಿ ಆಯೋಜಿಸಿದ್ದ ಕೃಷ್ಣರಾಜ ವಿಧಾನ ಸಭಾ ಕ್ಷೇತ್ರದ ಕಾರ್ಯಕರ್ತರ ಸಂಕಲ್ಪ ಯಾತ್ರೆಯನ್ನು ಶಂಖ ಊದುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಪತ್ರಕರ್ತರಿಗೆ ಆಮಿಷವೊಡ್ಡುವ ಕೆಲಸ ಮಾಡಿಲ್ಲ : ಸಿಎಂ ಸ್ಪಷ್ಟನೆ

ರಾಜ್ಯದಲ್ಲೇ ಬಹಳ ಶ್ರೇಷ್ಠ ನಗರ ಮೈಸೂರಾಗಿದೆ. ತಾಯಿ ಚಾಮುಂಡೇಶ್ವರಿ ಪ್ರಾರ್ಥಿಸಿ 150ಸ್ಥಾನ ಗೆಲ್ಲಲ್ಲು ಶಂಖ ಊದುವ ಮೂಲಕ ಪಾಂಚಜನ್ಯ ಮೊಳಗಿಸಿದ್ದೇವೆ. ಪ್ರಧಾನಿ ನರೇಂದ್ರಮೋದಿ ಹಾಗೂ ಸಚಿವರಾದ ಪ್ರಹ್ಲಾದ್ ಜೋಷಿಯವರಿಗೆ ಅಭಿನಂದನೆ ಸಲ್ಲಿಸುತ್ತೇನೆ.

ಯಾಕೆಂದರೆ ಟಿಪ್ಪು ಹೆಸರು ತೆಗೆದು ಒಡೆಯರ ಹೆಸರಿಟ್ಟಿರುವುದು ಸ್ವಾಗತಾರ್ಹ. ಒಡೆಯರ ಆಡಳಿತದ ಪ್ರೇರಣೆಯೇ ಕೇಂದ್ರದ ನರೇಂದ್ರ ಮೋದಿಯವರ ಆಡಳಿತವಾಗಿದೆ ಎಂದ ಅವರು ಅಂತಹವರನ್ನು ಏಕವಚನದಲ್ಲಿ ಬೈಯುವ ಖಳನಾಯಕರು ಈ ರಾಜ್ಯದಲ್ಲಿ ಇದ್ದಾರೆ ಎಂದು ಕುಟುಕಿದರು.

ರಾಜ್ಯದಲ್ಲಿ ಅಭಿವೃದ್ಧಿ ಎಂಬುದು ಸಿದ್ದರಾಮಯ್ಯ, ಕುಮಾರಸ್ವಾಮಿಯಿಂದಲ್ಲ. ಬಿ.ಎಸ್.ಯಡಿಯೂರಪ್ಪ ಹಾಗೂ ಬಿಜೆಪಿ ಪಕ್ಷದಿಂದ ಮಾತ್ರ ಅದು ಸಾಧ್ಯ. ಅದೇ ಕಾರಣಕ್ಕಾಗಿ ಬಳಿಕ ನಡೆದ ಉಪಚುನಾವಣೆಯ 17 ಕ್ಷೇತ್ರದಲ್ಲಿ 15ಚುನುವಾಣೆ ಗೆದ್ದವು ಎಂದರು.

ಸೋಮಾಲಿಯಾ : ಕಾರ್ ಬಾಂಬ್‍ ಸ್ಪೋಟಕ್ಕೆ 100ಕ್ಕೂ ಹೆಚ್ಚು ಮಂದಿ ಬಲಿ

ಯಡಿಯೂರಪ್ಪ ಸಿಎಂ ಆದಾಗ ಒಂದು ಕಡೆ ನೆರೆ-ಬರ ಎರಡನ್ನು ಎದುರಿಸಬೇಕಾಯಿತು. ನೆರೆಯಲ್ಲಿ ಬಿದ್ದ ಮನೆಗೆ 5ಲಕ್ಷ ಕೊಟ್ಟ ಏಕೈಕ ಮುಖ್ಯಮಂತ್ರಿ ಬಿಎಸ್ ವೈ ಆಗಿದ್ದಾರೆ. ಅಂದಿನಿಂದ ಇಂದಿನವರೆಗೆ ನಾನಾ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಾ ಬರಲಾಗಿದೆ. ಕಾಂಗ್ರೆಸ್ ಮುಳುಗುತ್ತಿರುವ ಹಡಗಾಗಿದೆ. ರಾಜ್ಯದ ವಿವಿಧ ಕಡೆಗಳಿಂದ ಬಸ್ಸುಗಳಲ್ಲಿ ಜನರನ್ನು ಕರೆತಂದು ಜೋಡೋ ಯಾತ್ರೆ ನಡೆಸಿದ್ದಾರೆಂದರು.

ದಕ್ಷಿಣ ಕೊರಿಯಾ : ಹ್ಯಾಲೋವೀನ್ ಹಬ್ಬದ ವೇಳೆ ಕಾಲ್ತುಳಿತದಿಂದ 151 ಮಂದಿ ಸಾವು..!

ವಿಧಾನ ಪರಿಷತ್ ಮಾಜಿ ಸದಸ್ಯ ತೋಂಟದಾರ್ಯ, ಮಹಾಪೌರ ಶಿವಕುಮಾರ್, ಎಂಎಲ್ಸಿ ತುಳಸಿ ಮುನಿರಾಜುಗೌಡ, ವಿಭಾಗೀಯ ಪ್ರಭಾರಿ ಮೈ.ವಿ.ರವಿಶಂಕರ್, ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ, ವಸ್ತುಪ್ರದರ್ಶನ ಪ್ರಾಕಾರದ ಮಾಜಿ ಅಧ್ಯಕ್ಷ ಹೇಮಂತ್‍ಕುಮಾರ್‍ಗೌಡ, ಉಪಮಹಾಪೌರ ರೂಪ, ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ, ಕೃಷ್ಣರಾಜ ಕ್ಷೇತ್ರದ ಅಧ್ಯಕ್ಷ ವಡಿವೇಲು, ನಗರಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್, ಮಾ.ವಿ.ರಾಮಪ್ರಸಾದ್ ಇನ್ನಿತರರು ಉಪಸ್ಥಿತರಿದ್ದರು.

Articles You Might Like

Share This Article