ಬಿಜೆಪಿ ಚಿಂತನ-ಮಂಥನ ಕಾರ್ಯಕ್ರಮದ ಮೇಲೆ ಕೋವಿಡ್ ಕರಿನೆರಳು

Social Share

ಬೆಂಗಳೂರು,ಜ.5- ರಾಜ್ಯದಲ್ಲಿ ಕೋವಿಡ್ ನಿಯಂತ್ರಿಸಲು ಸರ್ಕಾರ ಇಂದಿನಿಂದಲೇ ಅನ್ವಯವಾಗುವಂತೆ ಹೊಸ ಕಠಿಣ ನಿಯಮಗಳನ್ನು ರೂಪಿಸಿರುವುದರಿಂದ ಬಿಜೆಪಿಯ ಬಹುನಿರೀಕ್ಷಿತ ಚಿಂತನಮಂಥನ ಕಾರ್ಯಕ್ರಮದ ಮೇಲೆ ಕರಿನೆರಳು ಆವರಿಸಿದೆ. ಇದೇ 8 ಮತ್ತು 9ರಂದು ಚಿಕ್ಕಬಳ್ಳಾಪುರದ ನಂದಿಬೆಟ್ಟದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರು, ಶಾಸಕರು, ವಿಧಾನಪರಿಷತ್ ಸದಸ್ಯರನ್ನೊಳಗೊಂಡ ಚಿಂತನ ಬೈಠಕ್ ಎರಡು ದಿನಗಳ ಆಯೋಜಿಸಲಾಗಿತ್ತು.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಷಾ, ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳೀನ್‍ಕುಮಾರ್ ಕಟೀಲ್, ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಸೇರಿದಂತೆ ಪಕ್ಷದ ಪ್ರಮುಖ ಪದಾಕಾರಿಗಳು ಕೂಡ ಭಾಗವಹಿಸಲಿದ್ದರು.
ಮುಂಬರುವ ಬಿಬಿಎಂಪಿ, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಮತ್ತು 2023ರ ವಿಧಾನಸಭೆ ಚುನಾವಣೆಗೆ ಪಕ್ಷವನ್ನು ಸಂಘಟಿಸುವುದು, ಸಚಿವರು ತಮ್ಮ ತಮ್ಮ ಇಲಾಖೆಗಳಲ್ಲಿ ಮಾಡಿರುವ ಸಾಧಾನೆಗಳ ಪರಾಮರ್ಶೆ , ಶಾಸಕರ ಕಾರ್ಯ ವೈಖರಿ, ಮತದಾರರೊಂದಿಗೆ ಹೊಂದಿರುವ ಸಂಪರ್ಕ, ಕ್ಷೇತ್ರದಲ್ಲಿ ಶಾಸಕರ ಬಗ್ಗೆ ಹೊಂದಿರುವ ಅಭಿಪ್ರಾಯ ಹೀಗೆ ಹತ್ತು ಹಲವು ವಿಚಾರಗಳನ್ನು ಚರ್ಚೆ ಮಾಡಲು ನಂದಿಬೆಟ್ಟದಲ್ಲಿ ಈ ವಿಶೇಷ ಬೈಠಕ್ ನಿಯೋಜಿಸಲಾಗಿತ್ತು.
ಒಂದು ಕಡೆ ಕೋವಿಡ್ ಪ್ರಕರಣಗಳು, ಮತ್ತೊಂದೆಡೆ ಓಮಿಕ್ರಾನ್ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ ರಾಜ್ಯ ಸರ್ಕಾರ ನಿನ್ನೆ ಕೆಲವು ಬಿಗಿಯಾದ ಕ್ರಮಗಳನ್ನು ತೆಗೆದುಕೊಂಡಿದೆ. ವಾರಂತ್ಯದಲ್ಲಿ ಎರಡು ದಿನ ಕಫ್ರ್ಯೂ, 1ರಿಂದ 10ರ ತರಗತಿಗಳು ಬಂದ್, ಮದುವೆ ಧಾರ್ಮಿಕ ಸಮಾರಂಭಗಳು, ಔತಣಕೂಟ, ಹಬ್ಬಹರಿದಿನ ಆಚರಣೆ, ಗುಂಪುಗೂಡಿಕೆ ಸೇರಿದಂತೆ ಮತ್ತಿತರ ಕಡೆ ಜನರು ಸೇರಿದಂತೆ ಕೆಲವು ಬಿಗಿಯಾದ ಕ್ರಮಗಳನ್ನು ತೆಗೆದುಕೊಂಡಿದೆ.
ಒಂದು ವೇಳೆ ಕಾಂಗ್ರೆಸ್‍ನವರು ನಡೆಸಲು ಉದ್ದಶಿಸಿರುವ ಮೇಕೆದಾಟು ಪಾದಯಾತ್ರಗೆ ರಾಜ್ಯ ಸರ್ಕಾರ ಅನುಮತಿ ಕೊಡದಿದ್ದರೆ ಬಿಜೆಪಿಯ ಚಿಂತನ ಮಂಥನ ಬೈಠಕ್ ಕೂಡ ರದ್ದುಗೊಂಡರೆ ಅಚ್ಚರಿ ಇಲ್ಲ. ಹೆಚ್ಚು ಜನರು ಸೇರಿದಂತೆ ಸರ್ಕಾರವೇ ಮಾರ್ಗಸೂಚಿಗಳನ್ನು ಪ್ರಕಟಿಸಿರುವುದರಿಂದ ಆಡಳಿತಾರೂಢ ಬಿಜೆಪಿ ಚಿಂತನ ಬೈಠಕ್ ನಡೆಸುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆಗಳು ಎದುರಾಗಿದೆ.
ಇನ್ನೊಂದು ಮೂಲದ ಪ್ರಕಾರ ಚಿಂತನ ಬೈಠಕ್ ನಡೆಸಿದರೂ ಪ್ರಮುಖ ನಾಯಕರು ವಚ್ರ್ಯುವಲ್ ಮೂಲಕ ಸಭೆ ನಡೆಸಲಿದ್ದಾರೆ ಎಂದು ಗೊತ್ತಾಗಿದೆ. ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್ ಮುಂತಾದ ನಾಯಕರು ಕೆಪಿಸಿಸಿ ಕಚೇರಿಯಲ್ಲಿ ಸಭೆ ನಡೆಸಿದ್ದರು. ಒಂದು ವೇಳೆ ಕಠಿಣ ನಿಯಮಗಳು ಜಾರಿಯಾದರೆ ಮುಂದೆ ಏನು ಮಾಡಬೇಕು ಎಂದು ಚರ್ಚೆ ಮಾಡಿದ್ದರು. ಕಾಂಗ್ರೆಸ್ ನಾಯಕರು ಪಾದಯಾತ್ರೆ ಮುಂದೂಡಿಕೆ ಬಗ್ಗೆ ಅಕೃತವಾದ ಹೇಳಿಕೆ ನೀಡಿಲ್ಲ.

Articles You Might Like

Share This Article