ಒಡಿಶಾದಲ್ಲಿ ಘರ್ಷಣೆ ; ಬಿಜೆಪಿ ಕಾರ್ಯಕರ್ತರು, ಪೊಲೀಸರಿಗೆ ಗಾಯ

Social Share

ಭುವನೇಶ್ವರ.ಮಾ.1-ಸಚಿವ ನಬಾ ಕಿಶೋರ್ ದಾಸ್ ಹತ್ಯೆ ಖಂಡಿಸಿ ಒಡಿಶಾದಲ್ಲಿ ನಡೆಯುತ್ತಿದ್ದ ರಾಜಕೀಯ ಮೆರವಣಿಗೆಯಲ್ಲಿ ಸಂಭವಿಸಿದ ಹೊಡೆದಾಟದಿಂದ ಹಲವಾರು ಪೊಲೀಸರು ಮತ್ತು ಬಿಜೆಪಿ ಕಾರ್ಯಕರ್ತರು ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯಲ್ಲಿ ಅನೇಕ ಪೊಲೀಸ್ ವಾಹನಗಳಿಗೆ ಹಾನಿಯಾಗಿದೆ.

ಆರೋಗ್ಯ ಸಚಿವ ನಬಾ ಕಿಶೋರ್ ದಾಸ್ ಹತ್ಯೆ ಪ್ರಕರಣ ಹಾಗೂ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಆರೋಪದ ಮೇಲೆ ಸಿಬಿಐ ತನಿಖೆಗೆ ಆಗ್ರಹಿಸಿ ಬಿಜೆಪಿ ಯುವ ಮೋರ್ಚಾದ ವತಿಯಿಂದ ನೂರಾರು ಕಾರ್ಯಕರ್ತರು ನಡೆಸುತ್ತಿದ್ದ ಮೆರವಣಿಗೆಯಲ್ಲಿ ಸಂಭವಿಸಿದ ಘರ್ಷಣೆಯಲ್ಲಿ ಈ ಅವಘಡ ನಡೆದಿದೆ.

ಬಲವಂತವಾಗಿ ನಿರ್ಮಿಸಿದ್ದ ಬ್ಯಾರಿಕೇಡ್‍ಗಳನ್ನು ಮುರಿದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ತಡೆದಿದ್ದರಿಂದ ವಿಧಾನಸಭೆ ಭವನದ ಮುಂಭಾಗದ ಮಹಾತ್ಮ ಗಾಂ ಮಾರ್ಗ ರಣರಂಗವಾಗಿ ಮಾರ್ಪಟ್ಟಿತು. ಹಲವರು ಬ್ಯಾರಿಕೇಡ್‍ಗಳನ್ನು ಮೇಲಕ್ಕೆತ್ತಿ ಹೋಗುತ್ತಿರುವುದು ಕಂಡುಬಂದಿತು.

ಪ್ರತಿಭಟನಾಕಾರರು ಪೊಲೀಸರ ಮೇಲೆ ನೀರಿನ ಬಾಟಲಿಗಳು, ಮೊಟ್ಟೆಗಳು ಮತ್ತು ಕಲ್ಲುಗಳನ್ನು ಎಸೆದರು, ನಂತರ ಪೊಲೀಸರು ಗುಂಪು ಚದುರಿಸಲು ಲಾಠಿಗಳನ್ನು ಬಳಸಿದರು. ಘರ್ಷಣೆಯಲ್ಲಿ ಹಲವಾರು ಭದ್ರತಾ ಸಿಬ್ಬಂದಿ ಮತ್ತು ರಾಜಕೀಯ ಕಾರ್ಯಕರ್ತರು ಗಾಯಗೊಂಡಿದ್ದಾರೆ.

ಗಮನ ಸೆಳೆದ ಸಚಿನ್-ಬಿಲ್‍ಗೇಟ್ಸ್ ಭೇಟಿ

ಘರ್ಷಣೆಯಲ್ಲಿ ಎಸಿಪಿ ಅಮಿತವ್ ಮೊಹಾಪಾತ್ರ ಸೇರಿದಂತೆ ಸುಮಾರು 10 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಭುವನೇಶ್ವರ ಡಿಸಿಪಿ ಪ್ರತೀಕ್ ಸಿಂಗ್ ಹೇಳಿದ್ದಾರೆ. ಘರ್ಷಣೆಯಲ್ಲಿ ಕನಿಷ್ಠ ಐದು ಪೊಲೀಸ್ ವಾಹನಗಳಿಗೆ ಹಾನಿಯಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ.

100ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದರು.ಗಾಯಗೊಂಡ ಪೊಲೀಸ್ ಸಿಬ್ಬಂದಿಯನ್ನು ಭೇಟಿ ಮಾಡಲು ಡಿಜಿಪಿ ಸುನಿಲ್ ಬನ್ಸಾಲ್ ಕ್ಯಾಪಿಟಲ್ ಆಸ್ಪತ್ರೆಗೆ ಭೇಟಿ ನೀಡಿದರು.

ವಿಧಾನಸಭೆಯಲ್ಲಿ, ಬಿಜೆಪಿ ಶಾಸಕರು ಘಟನೆಯ ಕುರಿತು ಗದ್ದಲವನ್ನು ಸೃಷ್ಟಿಸಿದರು, ಪ್ರತಿಪಕ್ಷ ನಾಯಕ ಜಯನಾರಾಯಣ ಮಿಶ್ರಾ ಅವರು ಪಕ್ಷದ ಕಾರ್ಯಕರ್ತರ ಮೇಲೆ ಪೊಲಿಸ್ ದೌರ್ಜನ್ಯದ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ಸಮೀರ್ ಮೊಹಂತಿ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಇರಾಶಿ ಆಚಾರ್ಯ, ಪಕ್ಷದ ಶಾಸಕರು ಮತ್ತು ಇತರ ಹಿರಿಯ ಮುಖಂಡರು ಸಚಿವರ ಹತ್ಯೆಯನ್ನು ಸಿಬಿಐ ತನಿಖೆಗೆ ಒತ್ತಾಯಿಸಿ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.

#BJP, #protestmarch, #Odisha, #minister, #murder, #turnsviolent,

Articles You Might Like

Share This Article