ಸಂಸದ ಡಿ.ಕೆ.ಸುರೇಶ್ ವಿರುದ್ದ ಬಿಜೆಪಿ ಪ್ರತಿಭಟನೆ

Social Share

ಬೆಂಗಳೂರು,ಜ.4- ರಾಮನಗರದಲ್ಲಿ ನಿನ್ನೆ ನಡೆದ ಸಮಾರಂಭದಲ್ಲಿ, ಮುಖ್ಯಮಂತ್ರಿಗಳ ಎದುರೇ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರ ಮೇಲೆ ಸಂಸದ ಡಿ.ಕೆ.ಸುರೇಶ್ ತಳ್ಳಾಟ ನಡೆಸಿ ಅಮಾನವೀಯವಾಗಿ ವರ್ತಿಸಿದ್ದಾರೆ. ಇದೇ ವೇಳೆ ಸಂಸದರ ಅಸಭ್ಯ ಹಾಗೂ ಗೂಂಡಾ ವರ್ತನೆಗೆ ಬೆಂಬಲ ನೀಡಿದ ವಿಧಾನ ಪರಿಷತ್ ಸದಸ್ಯ ಎಸ್.ರವಿ ಅವರು ಮೈಕ್ ಕಿತ್ತೆಸೆದಿದ್ದದನ್ನು ಖಂಡಿಸಿ ಬೆಂಗಳೂರು ಬಿಜೆಪಿ ನಗರ ಯುವ ಮೋರ್ಚಾ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಇವರ ಮೇಲೂ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಮಲ್ಲೇಶ್ವರದ ಡಾ.ಟಿ.ಪಾರ್ಥಸಾರಥಿ ವೃತ್ತದಲ್ಲಿ ರಾಷ್ಟ್ರಕವಿ ಕುವೆಂಪು ಪುತ್ಥಳಿ ಎದುರು ಬಿಜೆಪಿಯ ಮಲ್ಲೇಶ್ವರಂ ಮಂಡಲ, ರಾಜ್ಯ ಯುವ ಮೋರ್ಚಾ, ಮಹಿಳಾ ಮೋರ್ಚಾ ಸದಸ್ಯರ ವತಿಯಿಂದ ಪ್ರತಿಭಟಿಸಲಾಯಿತು.
ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಡಾ.ಮಲ್ಲಿಕಾರ್ಜುನ್ ಸಿ.ಬಾಳಿಕಾಯಿ, ಮಾಜಿ ಪಾಲಿಕೆ ಸದಸ್ಯರಾದ ಜಯಪ್ರಕಾಶ್ ಎಂ.ಸಿ., ಎಂ.ವಿಜಯಕುಮಾರಿ, ಬೆಂಗಳೂರು ಉತ್ತರ ಜಿಲ್ಲಾ ಕಾರ್ಯಕಾರಣಿ ಸದಸ್ಯರುಗಳಾದ ಡಾ.ಜಿ.ಎಸ್.ಚೌಧರಿ, ಎನ್.ಆರ್.ಪರಮೇಶ್ವರಯ್ಯ, ವಾರ್ಡ್ 66 ಉಪಾಧ್ಯಕ್ಷ ಎನ್.ನಾಗರಾಜು, ರವಿಕುಮಾರ್, ಸಂತೋಷ್ ಜಿ., ಛಲವಾದಿ ನಾರಾಯಣಸ್ವಾಮಿ, ಕಾವೇರಿ, ವಾರ್ಡ್ 45 ಕಾರ್ಯದರ್ಶಿ ಸುಂದರೇಶ್ ಮೆನನ್ ಹಾಗೂ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Articles You Might Like

Share This Article