ಗುಜರಾತ್‍ ಚುನಾವಣೆ : ಬಿಜೆಪಿ 160 ಅಭ್ಯರ್ಥಿಗಳ ಪಟ್ಟಿ ಪ್ರಕಟ

Social Share

ನವದೆಹಲಿ,ನ.10- ತೀವ್ರ ಕುತೂಹಲ ಕೆರಳಿಸಿರುವ ಗುಜರಾತ್‍ನ ವಿಧಾನಸಭೆಗೆ ಬಿಜೆಪಿ ತನ್ನ ಮೊದಲ ಪಟ್ಟಿಯನ್ನು ಪ್ರಕಟಿಸಿದ್ದು, ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಸೇರಿದಂತೆ 160 ಮಂದಿಗೆ ಬಿ ಫಾರಂ ಘೋಷಿಸಿದೆ.

ಕೇಂದ್ರ ಸಚಿವರಾದ ಮನುಸ್ಕ್ ಮಾಂಡವೀಯ, ಭೂಪೇಂದ್ರಯಾದವ್, ಬಿಜೆಪಿ ರಾಜ್ಯಾಧ್ಯಕ್ಷ ಸಿ.ಆರ್.ಪಟೇಲ್ ಅವರು ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ್ದಾರೆ. ಅದರ ಪ್ರಕಾರ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಗಟ್ಲೋಡಿಯಾ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ಕ್ರಿಕೆಟಿಗ ರವೀಂದ್ರ ಜಡೇಜ ಅವರ ಪತ್ನಿ ರೈವಾಬ ಜಡೇಜ ಅವರಿಗೆ ಜಾಮ್ನಾನಗರ್ ಉತ್ತರ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ.

ಇತ್ತೀಚೆಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಹಾರ್ದಿಕ್ ಪಟೇಲ್‍ಗೂ ಟಿಕೆಟ್ ಖಾತ್ರಿಪಡಿಸಲಾಗಿದ್ದು, ವೀರ್ಮಗಂ ಕ್ಷೇತ್ರದಿಂದ ಬಿ ಫಾರಂ ನೀಡಲಾಗಿದೆ. ಗುಜರಾತ್‍ನ ಗೃಹ ಸಚಿವ ಹರ್ಷಸಾಂಗ್ಲಿ ಮಜುರಾ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ.

ನಾಳೆ ಬೆಂಗಳೂರಲ್ಲಿ ಮೋದಿ ಮೇನಿಯಾ, ಇಲ್ಲಿದೆ ಕಾರ್ಯಕ್ರಮಗಳ ಕಂಪ್ಲೀಟ್ ಡೀಟೇಲ್ಸ್

ದೆಹಲಿಯಲ್ಲಿ ನಿನ್ನೆ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಪಡ್ನವಿಸ್, ಕೇಂದ್ರ ಸಚಿವ ಭೂಪೇಂದ್ರ ಯಾದವ್, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತಿತರರು ಚರ್ಚೆ ನಡೆಸಿ ಪಟ್ಟಿಗೆ ಅಂಗೀಕಾರ ನೀಡಿದ್ದಾರೆ.

ಟಿಕೆಟ್ ಹಂಚಿಕೆ ವಿಚಾರದಲ್ಲಿ ಗೊಂದಲ, ಕಳವಳಕ್ಕೀಡಾದ ಮೂಲ ಕಾಂಗ್ರೆಸ್ಸಿಗರು

ಗುಜರಾತ್‍ನ ಮಾಜಿ ಮುಖ್ಯಮಂತ್ರಿ ವಿಜಯ್‍ರೂಪಾನಿ ಸೇರಿದಂತೆ ಮೂವರು ಹಿರಿಯ ನಾಯಕರು ಈ ಬಾರಿ ಸ್ರ್ಪಸುತ್ತಿಲ್ಲ ಎಂದು ಬಿಜೆಪಿ ಪ್ರಕಟಿಸಿದೆ.

ಗುಜರಾತ್ ವಿಧಾನಸಭೆಗೆ ಡಿ.1ಮತ್ತು 5ರಂದು ಎರಡು ಹಂತದಲ್ಲಿ ಚುನಾವಣೆ ಘೋಷಣೆಯಾಗಿದ್ದು, ಈ ಬಾರಿ ಕಾಂಗ್ರೆಸ್ ಮತ್ತು ಎಎಪಿ ಪಕ್ಷಗಳು ಬಿಜೆಪಿಗೆ ಪೈಪೆÇೀಟಿ ನೀಡುತ್ತಿವೆ.

Articles You Might Like

Share This Article