ಬೆಂಗಳೂರು,ಫೆ.26- ಪ್ರತಿ ಪಕ್ಷ ಕಾಂಗ್ರೆಸ್ ಸರ್ಕಾರ ವಿರುದ್ಧ ರೂಪಿಸುತ್ತಿರುವ ಶೇ.40ರಷ್ಟು ಕಮೀಷನ್ ಹಾಗೂ ಭ್ರಷ್ಟಾಚಾರದ ಅಸ್ತ್ರಕ್ಕೆ ಪ್ರತಿಯಾಗಿ ಅರ್ಕಾವತಿ ಲೇಔಟ್ ಡಿನೋಟಿಫಿಕೇಷನ್ ರೀಡು ಹಗರಣವನ್ನು ಜನತೆಯ ಮುಂದಿಡಲು ಬಿಜೆಪಿ ಸಜ್ಜಾಗಿದೆ.
ಅದರಲ್ಲೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಸಿದ್ದರಾಮಯ್ಯ ಅವರನ್ನು ಗುರಿಯಾಗಿಟ್ಟುಕೊಂಡು ರೀಡು ಮತ್ತು ಕಾಂಗ್ರೆಸ್ ಕಾಲದ ಹಗರಣವನ್ನು ಒಂದೊಂದಾಗಿ ಹೊರಬಿಡಲು ಬಿಜೆಪಿ ತಯಾರಿ ನಡೆಸಿದೆ.
ನಿವೃತ್ತ ನ್ಯಾಯಮೂರ್ತಿ ಕೆಂಪಣ್ಣ ಆಯೋಗದ ವರದಿಯನ್ನ ಅಸ್ತ್ರವಾಗಿ ಮಾಡಿಕೊಳ್ಳುತ್ತಿರುವ ಬಿಜೆಪಿ ಪ್ರಚಾರದ ಸಂದರ್ಭದಲ್ಲಿ ಇದನ್ನು ಮತ್ತಷ್ಟು ಜನರಿಗೆ ಮನವರಿಕೆ ಮಾಡಿಕೊಟ್ಟು ಕಾಂಗ್ರೆಸ್ ಆಡಳಿತವೂ ಭ್ರಷ್ಟಾಚಾರಕ್ಕೆ ಹೊರತಾಗಿರಲಿಲ್ಲ ಎಂಬುದನ್ನು ಬಿಂಬಿಸಲಿದೆ.
ಇತ್ತೀಚೆಗೆ ವಿಧಾನಸಭೆಯಲ್ಲಿ ಬಜೆಟ್ ಮೇಲೆ ಉತ್ತರಿಸುವ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾಲ ಗರ್ಭದಲ್ಲಿ ಅಡಗಿಹೋಗಿದ್ದ ಅರ್ಕಾವತಿ ಪ್ರಕರಣಕ್ಕೆ ಮರು ಜನ್ಮ ಕೊಟ್ಟಿದ್ದರು.
ರೀಡು ಹೆಸರಿನಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ 800 ಕೋಟಿ ಹಗರಣವನ್ನು ನಡೆಸಿದ್ದರು ಎಂದು ಆರೋಪಿಸಿದ್ದರು. ಅಲ್ಲದೆ ಅವರ ಸುಳ್ಳಿನ ಒಂದೊಂದೇ ಹಗರಣಗಳು ಮತ್ತೆ ಬರಲಿವೆ ಎಂದು ಮುನ್ಸೂಚನೆ ನೀಡಿದರು.
ಅರ್ಕಾವತಿ ಬಡಾವಣೆಯಲ್ಲಿ ಸುಮಾರು 858 ಎಕರೆ ಭೂ ಪ್ರದೇಶವನ್ನು ಡಿನೋಟಿಫೈ ಮಾಡಿರುವ ಬಗ್ಗೆ ಕೆಂಪಣ್ಣ ಆಯೋಗದ ವರದಿಯ ಅಂಶವನ್ನು ಸಿದ್ದರಾಮಯ್ಯ ವಿರುದ್ಧ ಬಳಸಲು ಕಮಲ ಪಕ್ಷ ನಿರ್ಧರಿಸಿದೆ.
ಹೈ ಕೋರ್ಟ್, ಸುಪ್ರೀಂಕೋರ್ಟ್ ಆದೇಶ ಉಲ್ಲಂಘಿಸಿ ಭೂ ಮಾಲೀಕರಿಗೆ ಲಾಭ ಮಾಡುವ ಉದ್ದೇಶದಿಂದ ಭೂ ಸ್ವಾೀನದಿಂದ ಭೂಮಿ ಕೈಬಿಡಲಾಗಿದೆ ಎಂಬ ವರದಿಯ ಅಂಶವನ್ನು ಜನರ ಮುಂದಿಡಲು ಮುಂದಾಗಿದೆ.
8,000 ಕೋಟಿ ರೂ. ಹಗರಣ ನಡೆದಿದೆ ಎಂಬ ಬ್ರಹ್ಮಾಸ್ತ್ರ ಹೂಡಲು ಸಜ್ಜಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿಯೂ ಸಿಎಂ ಬೊಮ್ಮಾಯಿ ಎಚ್ಚರಿಸಿದ್ದಾರೆ. ಭ್ರಷ್ಟಾಚಾರ ಆರೋಪ ಮಾಡುತ್ತಿರುವ ಕಾಂಗ್ರೆಸ್ ಹೇಗೆ ಲೋಕಾಯುಕ್ತ ಸಂಸ್ಥೆಯನ್ನು ಮುಚ್ಚಿ ಎಸಿಬಿ ರಚಿಸುವ ಮೂಲಕ ತಮ್ಮ ನಾಯಕರ ಮೇಲಿನ ಭ್ರಷ್ಟಾಚಾರ ಮುಚ್ಚುವ ಕೆಲಸ ಮಾಡಿತು ಎಂಬ ಬಗ್ಗೆ ಅಂಕಿಅಂಶ ಸಮೇತ ಪ್ರತ್ಯಾಮ್ಲೀಯ ಹೂಡಲು ಬಿಜೆಪಿ ಮುಂದಾಗಿದೆ.
ಲೋಕಾಯುಕ್ತ ಮುಚ್ಚುವ ಮೂಲಕ ಸಿದ್ದರಾಮಯ್ಯ ಸರ್ಕಾರ ಇಡೀ ವ್ಯವಸ್ಥೆಯನ್ನು ಭ್ರಷ್ಟಾಚಾರವನ್ನಾಗಿ ಬದಲಾವಣೆ ಮಾಡಿತು ಎಂಬ ಅಂಶದೊಂದಿಗೆ ಕೌಂಟರ್ ನೀಡುತ್ತಿದೆ. ಹೈ ಕೋರ್ಟ್ ಎಸಿಬಿ ರದ್ದುಗೊಳಿಸಿ ಲೋಕಾಯುಕ್ತ ಸಂಸ್ಥೆ ಮರುಸ್ಥಾಪನೆ ಮಾಡಿದ ಆದೇಶದಲ್ಲಿನ ಅಂಶವನ್ನು ಜನರಿಗೆ ಮನವರಿಕೆ ಮಾಡಲು ಮುಂದಾಗಿದೆ.
ಕಾಂಗ್ರೆಸ್ ಎಲ್ಲ ಅಕಾರವನ್ನು ಎಸಿಬಿಗೆ ಕೊಟ್ಟು, ತಮ್ಮ ಮೇಲಿನ ಆರೋಪಗಳನ್ನು ಮುಚ್ಚಿ ಹಾಕಿದೆ. ಎಸಿಬಿ ಮೂಲಕ ತನಿಖೆ ಮಾಡಿಸಿ ಕಾಂಗ್ರೆಸ್ ನಾಯಕರ ವಿರುದ್ಧದ 59 ಭ್ರಷ್ಟಾಚಾರ ಪ್ರಕರಣಗಳಿಗೆ ಎಸಿಬಿ ತನಿಖೆ ಬಿ ರಿಪೋರ್ಟ್ ನೀಡಿದೆ ಎಂಬ ಬಗ್ಗೆ ಕೌಂಟರ್ ಅಟ್ಯಾಕ್ ಮಾಡಲು ಮುಂದಾಗಿದೆ.
ಕಾಂಗ್ರೆಸ್ ವಿರುದ್ಧದ ಲಂಚದ ಆರೋಪಗಳ ಬಗ್ಗೆ ಎಸಿಬಿ ನೀಡಿದ ಬಿ ರಿಪೋರ್ಟ್ ಬಗ್ಗೆ ಅಂಕಿಅಂಶ ಸಮೇತ ತಿರುಗೇಟು ನೀಡಲು ವೇದಿಕೆ ಸಜ್ಜುಗೊಳಿಸಿದೆ. ಕಾಂಗ್ರೆಸ್ ಪಕ್ಷವು ಬಿಜೆಪಿ ಸರ್ಕಾರದ ವಿರುದ್ಧ ಮಾಡಿರುವ ತರಾತುರಿಯಲ್ಲಿನ ಟೆಂಡರ್ ಪ್ರಕ್ರಿಯೆ ಆರೋಪಕ್ಕೆ ತಿರುಗೇಟು ನೀಡಲು ಸಿದ್ದರಾಮಯ್ಯ ಸರ್ಕಾರದ ಅವಯಲ್ಲಿನ ತರಾತುರಿ ಟೆಂಡರ್ ಬಗ್ಗೆ ತಿರುಗೇಟು ನೀಡಲು ಮುಂದಾಗಿದೆ.
ಸಿದ್ದರಾಮಯ್ಯ ಸರ್ಕಾರದ ಕೊನೆ ಅವ 2017 ಮಾರ್ಚ್‍ನಲ್ಲಿ 11,832 ಕೋಟಿ ಮËಲ್ಯದ ಟೆಂಡರ್ ಕೊಟ್ಟಿರುವ ಅಂಕಿಅಂಶವನ್ನು ಬಹಿರಂಗಪಡಿಸಿ ಟಕ್ಕರ್ ನೀಡಲು ನಿರ್ಧರಿಸಿದೆ. ಕಾಂಗ್ರೆಸ್ ಸರ್ಕಾರದ ಕೊನೆಯ ಮೂರು ತಿಂಗಳಲ್ಲಿ ದೊಡ್ಡ ಪ್ರಮಾಣದ ಟೆಂಡರ್ ಕರೆದಿದ್ದರೆ, ಬಿಜೆಪಿ ಬರೇ 4,000 ಕೋಟಿ ರೂ. ಟೆಂಡರ್ ಕರೆದಿರುವ ಅಂಶವನ್ನು ಛೂ ಬಿಡಲು ಮುಂದಾಗಿದೆ.
ಅವರ ಕಾಲದಲ್ಲಿ ತರಾತುರಿಯಲ್ಲಿ ಟೆಂಡರ್ ಕರೆದು ಹೇಗೆ ಅಕ್ರಮ ಮಾಡಲಾಗಿದೆ ಎಂಬ ಆರೋಪದೊಂದಿಗೆ ಕಾಂಗ್ರೆಸ್‍ಗೆ ತಿರುಗೇಟು ನೀಡಲಿದ್ದಾರೆ.
ಇದರ ಜೊತೆಗೆ ಸಿದ್ದರಾಮಯ್ಯ ಅಕಾರಾವಯಲ್ಲಿನ ದೊಡ್ಡ ಹಗರಣಗಳನ್ನು ಪ್ರಸ್ತಾಪಿಸಿ ಕಾಂಗ್ರೆಸ್?ಗೆ ಬಲವಾದ ಟಾಂಗ್ ಕೊಡಲು ಈಗಾಗಲೇ ಬಿಜೆಪಿ ಸಭೆಯಲ್ಲಿ ಸೂಚಿಸಲಾಗಿದೆ. ಆ ಮೂಲಕ ಕಾಂಗ್ರೆಸ್‍ನ ಭ್ರಷ್ಟಾಚಾರ ಆರೋಪವನ್ನು ಅವರ ವಿರುದ್ಧವೇ ಬಳಸಲು ಬಿಜೆಪಿ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.