ನಾಳೆ ಬಳ್ಳಾರಿಯಲ್ಲಿ ರಾಜ್ಯಮಟ್ಟದ ಬಿಜೆಪಿ ST ಸಮಾವೇಶ

Social Share

ಬೆಂಗಳೂರು, ನ.19- ಎಸ್‍ಸಿ, ಎಸ್‍ಟಿ ಮೀಸಲಾತಿ ಹೆಚ್ಚಳದ ಸಂಪೂರ್ಣ ಶ್ರೇಯಸ್ಸನ್ನು ರಾಜ್ಯ ಬಿಜೆಪಿ ಸರ್ಕಾರ ತನ್ನದಾಗಿಸಿಕೊಳ್ಳಲು ಮುಂದಾಗಿದೆ. ಇದೇ ಭಾಗವಾಗಿ ನಾಳೆ ಬಳ್ಳಾರಿಯಲ್ಲಿ ರಾಜ್ಯಮಟ್ಟದ ಬಿಜೆಪಿ ಎಸ್‍ಟಿ ಸಮಾವೇಶ ನಡೆಯಲಿದೆ.

ಬಳ್ಳಾರಿಯ ಕುವೆಂಪುನಗರದಲ್ಲಿರುವ ಜಿ-ಸ್ಕ್ವೇರ್ ಮೈದಾನದಲ್ಲಿ ಈ ಸಮಾವೇಶ ನಡೆಯಲಿದ್ದು, ಅಂದಾಜು 5 ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆ ಇದೆ. ಸಾರಿಗೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಬಿ.ಶ್ರೀರಾಮುಲು ನೇತೃತ್ವದಲ್ಲಿ ನಡೆಯುತ್ತಿರುವ ಈ ಸಮಾವೇಶ ಮುಂಬರುವ ವಿಧಾನಸಭೆ ಚುನಾವಣೆಗೆ ಆಡಳಿತಾರೂಢ ಬಿಜೆಪಿಗೆ ಭಾರೀ ಬಲ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.

ಸಮಾವೇಶವನ್ನು ಯಶಸ್ವಿಗೊಳಿಸಲು ರಾಮುಲು, ಶಾಸಕರಾದ ರಾಜುಗೌಡ ನಾಯಕ್, ಶಿವನಗೌಡ ನಾಯಕ್, ಸಂಸದ ದೇವೇಂದ್ರಪ್ಪ ಸೇರಿದಂತೆ ಸಮುದಾಯದ ಅನೇಕರು ಶ್ರಮಿಸುತ್ತಿದ್ದಾರೆ. ಅತಿ ಹೆಚ್ಚು ಎಸ್‍ಟಿ ಮೀಸಲು ಕ್ಷೇತ್ರಗಳನ್ನು ಹೊಂದಿರುವ ಬಳ್ಳಾರಿ ಜಿಲ್ಲೆಯಲ್ಲಿ ಎಸ್‍ಟಿ ಸಮಾವೇಶ ಮಾಡುವ ಮೂಲಕ ಮತಗಳನ್ನು ಕಬಳಿಸಲು ಬಿಜೆಪಿ ಸರ್ಕಾರ ಮುಂದಾಗಿದೆ.

“ಮೋದಿಯಂತಹ ನಾಯಕನಿಲ್ಲದಿದ್ದರೆ ನಗರಕ್ಕೊಬ್ಬ ಅಫ್ತಾಬ್ ಹುಟ್ಟುತ್ತಾನೆ”

ಸಮಾವೇಶದಲ್ಲಿ ಅಂದಾಜು 10 ಲಕ್ಷ ಜನ ಸೇರುವ ನಿರೀಕ್ಷೆಯಿದ್ದು ಇದೊಂದು ಐತಿಹಾಸಿಕ ಎಸ್‍ಟಿ ಸಮಾವೇಶ ಆಗಲಿದೆ ಎಂದು ಅಂದಾಜಿಸಲಾಗಿದೆ.

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಭಾಗವಹಿಸಲಿದ್ದಾರೆ. ಸಮಾವೇಶದಲ್ಲಿ ಸುಮಾರು 10 ಲಕ್ಷ ಜನ ಬಿಜೆಪಿ ಕಾರ್ಯಕರ್ತರು, ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆ ಇದೆ. ಕೊಪ್ಪಳ, ರಾಯಚೂರು, ಚಿತ್ರದುರ್ಗ, ಬಳ್ಳಾರಿ ಸುತ್ತಲಿನ ಪ್ರದೇಶಗಳಿಂದ ಅತಿ ಹೆಚ್ಚು ಜನರು ಬರುವ ನಿರೀಕ್ಷೆ ಇದೆ. ರಾಜ್ಯದ ಎಲ್ಲ ಜಿಲ್ಲೆಗಳಿಂದ ಸಮಾವೇಶಕ್ಕೆ ಜನರು ಬರಲಿದ್ದಾರೆ.

ಈ ಸಮಾವೇಶದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ನಳೀನ್‍ಕುಮಾರ್ ಕಟೀಲ್, ಕೇಂದ್ರ, ರಾಜ್ಯ ಸಚಿವರು, ಕೋರ್‍ಕಮಿಟಿ ಸದಸ್ಯರು ಭಾಗವಹಿಸಲಿದ್ದಾರೆ.

ಸಮಾವೇಶಕ್ಕಾಗಿ ಸುಮಾರು 130ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶವನ್ನು ಬಳಕೆ ಮಾಡಲಾಗಿದೆ. 2040 ಅಡಿಗಳ ನಡುವೆ ಎರಡು ಮುಖ್ಯ ವೇದಿಕೆ ನಿರ್ಮಾಣ ಆಗಲಿದೆ. 4060 ಅಡಿಯ ಗಣ್ಯರ ವೇದಿಕೆ ಇರಲಿದೆ. 3,20,000 ಚದರ ಅಡಿ ಪೆಂಡಲ್ ವ್ಯವಸ್ಥೆ ಇದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ವಿಶೇಷ ವೇದಿಕೆ ನಿರ್ಮಾಣ ಮಾಡಲಾಗಿದೆ.

ಇದೇ ಮೊದಲ ಬಾರಿಗೆ ಹೊರಜಗತ್ತಿಗೆ ಕಾಣಿಸಿಕೊಂಡ ಕಿಮ್ ಪುತ್ರಿ

ಕಾರ್ಯಕ್ರಮದ ವಿವರ ಸುಮಾರು 10,000 ಚದುರ ಅಡಿಯಲ್ಲಿ ಅಡುಗೆ ತಯಾರಿಕೆಗಾಗಿ ಬಳಕೆ ಮಾಡಲಾಗಿದ್ದು, ಬೆಳಗ್ಗೆ 10 ಗಂಟೆಯಿಂದ ಸಂಜೆ 4ರವರೆಗೆ ಊಟದ ವ್ಯವಸ್ಥೆ ಇರುತ್ತದೆ. ಸುಮಾರು 300ಕ್ಕೂ ಹೆಚ್ಚು ಕೌಂಟರ್‍ಗಳಲ್ಲಿ ಬಫೆ ಸಿಸ್ಟಮ್‍ನಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ.

ಸಮಾವೇಶಕ್ಕಾಗಿ ಸುಮಾರು 41 ಸಮಿತಿಗಳಲ್ಲಿ 3000ಕ್ಕೂ ಹೆಚ್ಚು ಕಾರ್ಯಕರ್ತರನ್ನು ನೇಮಿಸಲಾಗಿದೆ. ಸಮಾವೇಶಕ್ಕಾಗಿ ಸುಮಾರು 8,000 ರಿಂದ 10,000 ಬಸ್‍ಗಳು, 20,000 ಕ್ರೂಸರ್, 10,000 ಕಾರು, 25,000 ಬೈಕ್‍ಗಳು ಆಗಮಿಸಲಿವೆ.

ಇದೇ ಮೊದಲ ಬಾರಿಗೆ ಹೊರಜಗತ್ತಿಗೆ ಕಾಣಿಸಿಕೊಂಡ ಕಿಮ್ ಪುತ್ರಿ

ಜೊತೆಗೆ 10,0000 ಮಹಿಳಾ ಕಾರ್ಯಕರ್ತರಿಂದ ಬಳ್ಳಾರಿ ನಗರದಿಂದ ಸಮಾವೇಶಕ್ಕೆ ಬೃಹತ್ ಕಾಲ್ನಡಿಗೆ ಜಾಥಾ ನಡೆಸಲಾಗುತ್ತದೆ. ಎರಡು ಹೆಲಿಕಾಪ್ಟರ್‍ಗಳನ್ನು ವ್ಯವಸ್ಥೆ ಮಾಡಲಾಗಿದೆ. ವಿಮ್ಸ್ ನೇತೃತ್ವದಲ್ಲಿ ಆರೋಗ್ಯ ಸಮಸ್ಯೆ ಎದುರಿಸಲು ವೈದ್ಯಕೀಯ ವ್ಯವಸ್ಥೆ ಕೂಡ ಇರುತ್ತದೆ.

BJP, ST, convention, Bellary, tomorrow,

Articles You Might Like

Share This Article