ಕಾಂಗ್ರೆಸ್-ಜೆಡಿಎಸ್‍ಗೆ ಸೆಡ್ಡು ಹೊಡೆಯಲು ಬಿಜೆಪಿ ರಣತಂತ್ರ

Social Share

ಬೆಂಗಳೂರು, ಜ.11- ರಾಜ್ಯದಲ್ಲಿ ಶತಾಯಗತಾಯ ಅಧಿಕಾರ ಹಿಡಿಯಲೇಬೇಕೆಂದು ಮುಂದಾಗಿರುವ ಬಿಜೆಪಿ ಕಾಂಗ್ರೆಸ್ ಮತ್ತು ಜೆಡಿಎಸ್‍ಗೆ ಠಕ್ಕರ್ ಕೊಡುವ ರೀತಿಯಲ್ಲಿ ಸದ್ದಿಲ್ಲದೆ ಒಳಗೊಳಗೆ ಕಾರ್ಯತಂತ್ರ ಹೆಣೆಯಲು ಮುಂದಾಗಿದೆ.

ಒಂದು ಕಡೆ ಪ್ರಧಾನಿ ನರೇಂದ್ರಮೋದಿ ಅವರು ನಾಳೆ ರಾಜ್ಯಕ್ಕೆ ಭೇಟಿ ನೀಡುತ್ತಿದ್ದರೆ 19ರಂದು ಮತ್ತೆ ಕಲ್ಬುರ್ಗಿಗೆ ಆಗಮಿಸಲಿದ್ದಾರೆ. ಈ ತಿಂಗಳ ಅಂತ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಷಾ, ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ದಾಂಗುಡಿ ಇಡಲಿದ್ದಾರೆ.

ಫೆ.17ಕ್ಕೆ ಹಣಕಾಸು ಖಾತೆಯನ್ನ ಹೊಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಸರ್ಕಾರದ ಕೊನೆಯ ಹಾಗೂ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಿದ್ದಾರೆ. ಚುನಾವಣಾ ವರ್ಷ ಆಗಿರುವುದರಿಂದ ಸಹಜವಾಗಿ ಒಂದಿಷ್ಟು ಜನಪ್ರಿಯ ಯೋಜನೆಗಳನ್ನು ಘೋಷಣೆ ಮಾಡುವ ಸಾಧ್ಯತೆ ಇದೆ.

ದ್ವೇಷ ಹರಡುವ ರಾಜಕಾರಣದಿಂದ ಜನ ಬೇಸತ್ತಿದ್ದಾರೆ : ರಾಹುಲ್ ಗಾಂಧಿ

ಸಂಕ್ರಾಂತಿ ನಂತರ ಬಜೆಟ್ ತಯಾರಿಕೆಯಲ್ಲಿ ತೊಡಗಲಿದ್ದಾರೆ. ಮತದಾರರನ್ನು ಓಲೈಸಲು ಇದು ಅಂತಿಮ ಬಜೆಟ್ ಆಗಿರುವುದರಿಂದ ಪಕ್ಷದ ಸಾಧನೆಯನ್ನು ಎತ್ತಿ ತೋರಿಸುವುದು ಬಹಳ ಮುಖ್ಯ. ಈ ವರ್ಷ ಅಧಿಕಾರ ಉಳಿಸಿಕೊಂಡರೆ ಪಕ್ಷವು ಜನರಿಗೆ ಏನು ಮಾಡಲಿದೆ ಎಂಬುದನ್ನು ಜನರಿಗೆ ತಿಳಿಸಲು ಬೊಮ್ಮಾಯಿ ಕಸರತ್ತು ನಡೆಸಿದ್ದಾರೆ.

ಬಿಜೆಪಿ ಹಲವಾರು ಅಭ್ಯರ್ಥಿಗಳಿಗೆ ತಮ್ಮ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಮೌಖಿಕವಾಗಿ ನಿರ್ದೇಶಿಸಿದೆ. ಮೂಲಗಳ ಪ್ರಕಾರ ಸುಮಾರು 80-85 ಶೇಕಡಾ ಹಾಲಿ ಶಾಸಕರು ತಮ್ಮ ಟಿಕೆಟ್‍ಗಳನ್ನು ಮರಳಿ ಗಿಟ್ಟಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

ರಾಜಾಜಿನಗರ ಶಾಸಕ ಮತ್ತು ಮಾಜಿ ಸಚಿವ ಎಸ್. ಸುರೇಶ್ ಕುಮಾರ್ ಅವರು ತಮ್ಮ ಕ್ಷೇತ್ರದಲ್ಲಿ ಒಂದು ಸುತ್ತಿನ ಪ್ರಚಾರವನ್ನು ಪೂರ್ಣಗೊಳಿಸಿದ್ದಾರೆ. ಪ್ರತ್ಯೇಕವಾಗಿ 10,000 ಮನೆಗಳನ್ನು ತಲುಪಿದ್ದಾರೆ. ಅಲ್ಲದೆ ಕಳೆದ ವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವಸತಿ ಸಚಿವ ವಿ. ಸೋಮಣ್ಣ ಅವರ ನಿವಾಸಕ್ಕೆ ತಡರಾತ್ರಿ ಭೇಟಿ ನೀಡಿದ್ದಾರೆ. ಪಕ್ಷವು ಗೆಲ್ಲುವ ಅಭ್ಯರ್ಥಿಗಳನ್ನು ಉಳಿಸಿಕೊಳ್ಳುವುದರ ಪರವಾಗಿದೆ. ಅಂತಹ ಯಾವುದೇ ಅಭ್ಯರ್ಥಿಗಳು ಪಕ್ಷ ತೊರೆಯಲು ಅವಕಾಶ ನೀಡುವುದಿಲ್ಲ ಎಂಬುದನ್ನು ಈ ಭೇಟಿ ಸೂಚಿಸುತ್ತದೆ ಎನ್ನುತ್ತಾರೆ ಪಕ್ಷದ ಮುಖಂಡರು.

ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ತೊರೆದು ಬಿಜೆಪಿ ಸೇರಿದ 16 ಶಾಸಕರಲ್ಲಿ ಬಹುತೇಕರಿಗೆ ಟಿಕೆಟ್ ಖಚಿತವಾಗಿದೆ. ಆದರೆ ಅಥಣಿ ಶಾಸಕ ಮಹೇಶ ಕುಮಟಹಳ್ಳಿ ಬದಲು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೆ ಅವಕಾಶ ಮಾಡುವ ಬಗ್ಗೆ ಚಿಂತನೆ ನಡೆದಿದೆ.

ಪಕ್ಷದಲ್ಲಿ ಜಯಗಳಿಸಬಹುದಾದ 60 ಶಾಸಕರಿದ್ದಾರೆ. ಅಂತಹ ಅಭ್ಯರ್ಥಿಗಳು ತಮ್ಮ ಕ್ಷೇತ್ರಗಳಲ್ಲಿ ಕೆಲಸ ಮಾಡುವಂತೆ ಪಕ್ಷ ಸೂಚಿಸಿದೆ. ಅಂತಹ ಅಭ್ಯರ್ಥಿಗಳಿಗೆ ಸರ್ಕಾರವು ಭಾರಿ ಅನುದಾನವನ್ನು ಬಿಡುಗಡೆ ಮಾಡಿದೆ. ಈ ಚುನಾವಣೆಯಲ್ಲಿ ಪಕ್ಷವು 60 ಅಭ್ಯರ್ಥಿಗಳನ್ನು ಬದಲಾಯಿಸುವುದಿಲ್ಲ ಎಂಬುದಂತೂ ಖಚಿತವಾಗಿದೆ.

ಹೊಸ ಮುಖಗಳಿಗೆ ಮಣೆ:
ಗುಜರಾತ್ ವಿಧಾನಸಭಾ ಚುನಾವಣೆಯ ಫಲಿತಾಂಶದ ನಂತರ, ಹೊಸ ವ್ಯಕ್ತಿಗಳನ್ನು ಕಣಕ್ಕಿಳಿಸುವ ಬಗ್ಗೆ ಯೋಚಿಸಲಾಗಿತ್ತು. ಹಲವಾರು ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಲಾಗುವುದು ಎಂದು ಬಿಜೆಪಿಯಲ್ಲಿ ಬಲವಾದ ಊಹೆಗಳಿಗದ್ದವು. ಆದರೆ ಪಕ್ಷದ ಹಲವು ಮುಖಂಡರು ಇದಕ್ಕೆ ವಿರುದ್ಧವಾಗಿ ವಾದಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ವಿಶ್ವದ ಅತಿ ಉದ್ದದ ನದಿ ವಿಹಾರಕ್ಕೆ ಗಂಗಾ ವಿಲಾಸ್ ಐಷಾರಾಮಿ ಕ್ರೂಸ್ ರೆಡಿ

ಕಾರ್ಮಿಕ ಸಚಿವ ಆರ್.ಅಶೋಕ (ಪದ್ಮನಾಭನಗರ), ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ (ಮಲ್ಲೇಶ್ವರಂ ) ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (ಚಿಕ್ಕಮಗಳೂರು) ಅವರ ಬದಲು ಪಕ್ಷದ ಕಾರ್ಯಕರ್ತರು ಕಣಕ್ಕಿಳಿಸಲು ಚಿಂತನೆ ನಡೆದಿದೆ ಎಂಬ ಮಾತುಗಳು ಕೇಳಿಬಂದಿವೆ. ಅವರು ಬೇರೆ ಕ್ಷೇತ್ರಗಳಿಗೆ ತೆರಳಬೇಕು ಎಂಬ ಬೇಡಿಕೆ ಪಕ್ಷದೊಳಗೆ ಇದೆ. ಇದು ಕೂಡ ಅಸಂಭವ ಎಂದು ಮೂಲಗಳು ತಿಳಿಸಿವೆ.

BJP, strategy, assembly election, Congress, JDS,

Articles You Might Like

Share This Article