ಬಂಡಾಯಕ್ಕೆ ಇತಿಶ್ರೀ ಹಾಡಲು ಬಿಜೆಪಿ ಕಾರ್ಯತಂತ್ರ

Social Share

ಬೆಂಗಳೂರು,ಫೆ.8- ರಾಜಕಾರಣದಲ್ಲಿ ಯಾರೂ ಶಾಶ್ವತ ಶತ್ರುಗಳಲ್ಲ, ಮಿತ್ರರೂ ಅಲ್ಲ. ಆಯಾ ಕಾಲಕ್ಕೆ ತಕ್ಕ ಹಾಗೆ ಬದಲಾವಣೆಗಳು ಆಗುತ್ತಲೇ ಇರುತ್ತದೆ. ಚುನಾವಣೆ ಸಮಯದಲ್ಲಿ ಯಾರು ಯಾವ ಪಕ್ಷಕ್ಕೆ ಹಾರಿದರು? ಯಾರು ಯಾರ ವಿರುದ್ಧ ಬಂಡಾಯ ಎದ್ದರು? ಎಂಬುದು ದೊಡ್ಡ ಸುದ್ದಿಯಾಗುತ್ತದೆ.

ಆದರೆ ಬಿಜೆಪಿಯಲ್ಲಿ ಯಾವುದೇ ಬಂಡಾಯ ಇರಬಾರದು ಎಂಬ ಆಶಯದೊಂದಿಗೆ ಕೇಸರಿ ನಾಯಕರು ಈಗಿನಿಂದಲೇ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಈ ತಂತ್ರ ಬಿಜೆಪಿಗೆ ಗೆಲುವು ತಂದು ಕೊಡುತ್ತಾ? ಎನ್ನುವುದೇ ಯಕ್ಷ ಪ್ರಶ್ನೆ.

ಚುನಾವಣೆಗೆ ಸಜ್ಜಾಗುತ್ತಿರುವ ಬಿಜೆಪಿಗೆ ಭಿನ್ನಮತೀಯರದ್ದೇ ತಲೆ ನೋವು. ವಲಸಿಗರಿಗೆ ಮಣೆ ಹಾಕಲು ಮೂಲ ಬಿಜೆಪಿಗರನ್ನು ಮೂಲೆ ಗುಂಪು ಮಾಡುತ್ತಿದ್ದಾರೆ ಎಂಬ ಕೂಗು ಇದ್ದೇ ಇದೆ. ಇದನ್ನು ತಡೆಯಲು ಬಿಜೆಪಿ ಮಾಸ್ಟರ್ ತಂತ್ರ ಹೆಣೆದಿದೆ.

“ರಷ್ಯಾ ತೈಲ ಖರೀದಿಸುವ ಭಾರತದ ಮೇಲೆ ನಿರ್ಬಂಧ ವಿಧಿಸಲ್ಲ”

ಇತ್ತೀಚೆಗಷ್ಟೇ ಬಿಜೆಪಿ ಒಂದು ಘೋಷಣೆ ಮಾಡಿತ್ತು. ಕೆ.ಆರ್.ಪುರಂ ಮಾಜಿ ಶಾಸಕ ನಂದೀಶ್ ರೆಡ್ಡಿ ಅವರನ್ನು ರಾಜ್ಯ ಬಿಜೆಪಿ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿತು. ನಟ ಜಗ್ಗೇಶ್ ಅವರು ಯಶವಂತಪುರ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಆಗಿದ್ದರು. ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಲಾಗಿತ್ತು. ಚುನಾವಣೆ ಹೊತ್ತಲ್ಲಿ ಈ ಬದಲಾವಣೆಗಳು ಆಗಿದ್ದೇಕೆ? ಇದಕ್ಕೆ ಕಾರಣ ಸ್ಪಷ್ಟವಾಗಿದೆ.

2019ರಲ್ಲಿ ಕಾಂಗ್ರೆಸ್ – ಜೆಡಿಎಸ್ ದೋಸ್ತಿ ಸರ್ಕಾರ ಉರುಳಿಸಿ ಬಿಜೆಪಿ ಸೇರಿದ ಶಾಸಕರ ತಂಡಕ್ಕೆ, ಈ ಬಾರಿಯೂ ಯಾವುದೇ ಅಡ್ಡಿ ಆತಂಕ ಬರದಂತೆ ತಡೆಯೋದು ಬಿಜೆಪಿಯ ಪ್ಲಾನ್..! ಏಕೆಂದರೆ ಸಚಿವ ಎಸ್.ಟಿ.ಸೋಮಶೇಖರ್ ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕ. ಈ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಜಗ್ಗೇಶ್ ಅವರಿಗೆ ರಾಜ್ಯಸಭಾ ಸದಸ್ಯ ಸ್ಥಾನ ಸಿಕ್ಕಿರುವ ಕಾರಣ, ಯಶವಂತಪುರದಲ್ಲಿ ಎಸ್.ಟಿ.ಸೋಮಶೇಖರ್ ಅವರಿಗೆ ಬಿಜೆಪಿ ಟಿಕೆಟ್ ಫಿಕ್ಸ್.

ಸಚಿವ ಬೈರತಿ ಬಸವರಾಜ್ ಅವರಿಗೆ ಬಿಜೆಪಿಯೊಳಗೆ ನಂದೀಶ್ ರೆಡ್ಡಿ ಪ್ರಬಲ ಪ್ರತಿಸ್ರ್ಪಧಿ ಆಗಿದ್ದರು. ಆದರೆ ನಂದೀಶ್ ರೆಡ್ಡಿಗೆ ಪಕ್ಷದಲ್ಲಿ ಸ್ಥಾನ ಸಿಕ್ಕಿದೆ.. ಇದರಿಂದ ನಂದೀಶ್ ರೆಡ್ಡಿ ತೃಪ್ತರಾದರೆ, ಬಸವರಾಜ್ ಅವರಿಗೆ ರಿಲೀ ಗ್ಯಾರಂಟಿ..
2021ರಲ್ಲಿ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸತತ ಮೂರು ಬಾರಿ ಗೆದ್ದು ಹ್ಯಾಟ್ರಿಕ್ ಸಾಧನೆ ಮಾಡಿದ್ದ ಪ್ರತಾಪ್ ಗೌಡ ಪಾಟೀಲ್, ನಂತರ ಬಿಜೆಪಿ ಸೇರಿದ್ದರು.

ಬಿಜೆಪಿ ಅಭ್ಯರ್ಥಿಯಾಗಿ 2021ರ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದರು. ಆದರೆ ಈ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಬಸನಗೌಡ ತುರುವಿಹಾಳ್ ಅವರು ಪಕ್ಷದ ವಿರುದ್ಧ ಬಂಡಾಯ ಎದ್ದು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ರ್ಪಧಿಸಿ ಪ್ರತಾಪ್ ಗೌಡರನ್ನ ಸೋಲಿಸಿದ್ದರು.

ಅಮೆರಿಕ ಭಾರತದ ಪ್ರಮುಖ ಪಾಲುದಾರ ದೇಶವಾಗಿರಲಿದೆ : ಪೆಂಟಗಾನ್

ಇತ್ತ ಹಿರೇಕೆರೂರಿನಲ್ಲೂ ಬಿಜೆಪಿ ಬಂಡಾಯದ ಬಿಸಿ ಎದುರಿಸಿತ್ತು. ಇಲ್ಲಿನ ಕಾಂಗ್ರೆಸ್ ಶಾಸಕರಾಗಿದ್ದ ಬಿ.ಸಿ.ಪಾಟೀಲ್, ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದರು. ಈ ಬೆಳವಣಿಗೆಯಿಂದ ಮಾಜಿ ಶಾಸಕ ಯು.ಬಿ. ಬಣಕಾರ್ ಸಿಟ್ಟಿಗೆದ್ದರು. ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರು. ಈ ಚುನಾವಣೆಯಲ್ಲಿ ಬಿ.ಸಿ.ಪಾಟೀಲ್ ಗೆಲುವು ಸಾಧಿಸಿ ಕೃಷಿ ಸಚಿವರಾದರೂ ಯು.ಬಿ.ಬಣಕಾರ್ ಬಂಡಾಯದಿಂದ ಬಿಜೆಪಿಗೆ ಕಿರಿಕಿರಿ ಆಗಿದ್ದಂತೂ ಸತ್ಯ..

ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಶಾಸಕರ ಟೀಂನಲ್ಲಿ ಮಹೇಶ್ ಕುಮಟಳ್ಳಿ ಕೂಡಾ ಒಬ್ಬರು. 2019ರ ಉಪ ಚುನಾವಣೆಯಲ್ಲಿ ಅವರು ಅಥಣಿ ಕ್ಷೇತ್ರದ ಶಾಸಕರಾಗಿ ಆಯ್ಕೆ ಆದರು. ಅವರಿಗೆ ಕ್ಷೇತ್ರ ಬಿಟ್ಟುಕೊಟ್ಟಿದ್ದು, ಲಕ್ಷ್ಮಣ ಸವದಿ. ಒಂದು ವೇಳೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರಿಗೆ ಮುಂದಿನ ಚುನಾವಣೆಯಲ್ಲಿ ಅಥಣಿಯಿಂದ ಟಿಕೆಟ್ ಕೊಡಬೇಕು ಎಂದು ಪಕ್ಷ ನಿರ್ಧಾರ ಮಾಡಿದರೆ, ಮಹೇಶ್ ಕುಮಟಳ್ಳಿ ಕ್ಷೇತ್ರ ಬಿಟ್ಟು ಕೊಡಲೇ ಬೇಕು.

ಸನ್ನಿವೇಶ ಹೀಗಿರುವಾಗ, ಟಿಕೆಟ್ ಕೊಡುವ ಹಂತದಲ್ಲಿ ಬಿಜೆಪಿ ಹೈಕಮಾಂಡ್ ಗೆಲ್ಲುವ ಸಾಮಥ್ರ್ಯವನ್ನ ಚೆಕ್ ಮಾಡುವ ಜೊತೆಯಲ್ಲೇ ಇನ್ನೂ ಹಲವು ಅಂಶಗಳನ್ನ ಗಮನಿಸುತ್ತೆ.. ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಹಲವು ಆಯಾಮಗಳನ್ನ ಪಕ್ಷ ನೋಡುತ್ತೆ ಎನ್ನುತಾರೆ ರಾಜ್ಯ ಬಿಜೆಪಿಯ ಪ್ರಮುಖರು.

BJP, strategy, Assembly election,

Articles You Might Like

Share This Article