ದಕ್ಷಿಣದಲ್ಲಿ ಕಮಲ ಅರಳಿಸಲು ಮೋದಿ, ಶಾ ಮಾಸ್ಟರ್ ಪ್ಲಾನ್

Social Share

ಬೆಂಗಳೂರು,ಜ.2-ರಾಜ್ಯದಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ತರಹೇವಾರಿ ತಂತ್ರಗಾರಿಕೆ ರೂಪಿಸಿರುವ ಬಿಜೆಪಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರಬಲ ಎದುರಾಳಿಯಾಗಿದ್ದು, ಇವೆರಡೂ ಪಕ್ಷಗಳ ಮತ ಬ್ಯಾಂಕ್ ಕಬಳಿಸಲು ಪ್ರಧಾನಿ ನರೇಂದ್ರ ಮೋದಿ – ಅಮಿತ್ ಶಾ ಜೋಡಿ ಹಲವು ಯೋಜನೆ ಸಿದ್ಧಪಡಿಸಿಟ್ಟುಕೊಂಡಿದೆ.

ವಿಧಾನಸಭೆ ಚುನಾವಣೆ ವೇಳಾಪಟ್ಟಿ ಘೋಷಣೆಗೆ ಮುನ್ನವೇ ಹಲವಾರು ಸರ್ಕಾರಿ ಕಾರ್ಯಕ್ರಮಗಳಿಗೆ ಅನುಮೋದನೆ ನೀಡಿ ಮತದಾರರ ಮನಗೆಲ್ಲುವುದು, ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ ಅದರ ಪ್ರಯೋಜನಗಳನ್ನು ಜನತೆಗೆ ತಲುಪಿಸುವುದು.

ರಾಜ್ಯದ ಹಲವೆಡೆ ಪಕ್ಷದಿಂದ ರ್ಯಾಲಿಗಳನ್ನು ನಡೆಸಿ ಬಿಜೆಪಿ ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬುವುದು, ಬಿಜೆಪಿ ದುರ್ಬಲವಾಗಿರುವ ಪ್ರದೇಶಗಳಲ್ಲಿ ಹೆಚ್ಚಿನ ಶ್ರಮ ಹಾಕಿ ಪಕ್ಷಕ್ಕೆ ಶಕ್ತಿ ತುಂಬುವುದು ಸೇರಿದಂತೆ ಹತ್ತಾರು ಚುನಾವಣೆ ಪೂರ್ವ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಈ ಜೋಡಿ ಮುಂದಾಗಿದೆ.

ನೋಟು ಅಮಾನೀಕರಣ ಮಾನ್ಯ ಮಾಡಿದ ಸುಪ್ರೀಂ

ದಕ್ಷಿಣ ಕರ್ನಾಟಕದಲ್ಲಿ ಅಮಿತ್ ಶಾ ಶಾಕ್:
ಹಳೇ ಮೈಸೂರು ಭಾಗದಲ್ಲಿ ಬಿಜೆಪಿಗಿಂತ ಜೆಡಿಎಸ್ ಮತ್ತು ಕಾಂಗ್ರೆಸ್ ಉತ್ತಮ ಸ್ಥಿತಿಯಲ್ಲಿವೆ. ಈ ಎರಡೂ ಪಕ್ಷಗಳ ಮತಬ್ಯಾಂಕ್‍ನ್ನು ಭಾರತೀಯ ಜನತಾ ಪಕ್ಷದ ಕಡೆ ಆಕರ್ಷಿಸಲು ಬಿಜೆಪಿ ಚಾಣಕ್ಯ ಅಮಿತ್ ಶಾ ರಾಜ್ಯ ಬಿಜೆಪಿ ಮುಖಂಡರಿಗೆ ಕೆಲವು ಟಾಸ್ಕ್ ನೀಡಿ ಒಂದು ತಿಂಗಳ ಗಡುವು ನೀಡಿದ್ದಾರೆ.

ರಾಜ್ಯದಲ್ಲಿ ಪ್ರಬಲ ಸಮುದಾಯಗಳಲ್ಲಿ ಒಂದಾದ ಹಾಗೂ ಒಕ್ಕಲಿಗ ಮತದಾರರೇ ನಿರ್ಣಾಯಕರಾಗಿರುವ ದಕ್ಷಿಣ ಕರ್ನಾಟಕದಲ್ಲಿ ಒಕ್ಕಲಿಗ ಮತಗಳನ್ನು ಬಿಜೆಪಿಗೆ ಸೆಳೆಯುವ ಯತ್ನ ನಡೆದಿದೆ. ಹೆಚ್ಚಿನ ಸ್ಥಾನ ಗೆದ್ದು ಸ್ವಂತ ಶಕ್ತಿ ಮೇಲೆ ವಿಧಾನಸಭೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆನ್ನುವ ಸಂಕಲ್ಪ ಅಮಿತ್ ಶಾ ಅವರದ್ದಾಗಿದೆ.

ದಕ್ಷಿಣ ಕರ್ನಾಟಕದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್‍ಗೆ ಸ್ಪರ್ಧೆಯೊಡ್ಡುವ ನಿಟ್ಟಿನಲ್ಲಿ ಹೆಚ್ಚಿನ ಕ್ಷೇತ್ರಗಳನ್ನು ಗೆಲ್ಲುವ ಸಂಬಂಧ ಕೇಂದ್ರ ಸಚಿವ ಅಮಿತ್ ಶಾ, ದಕ್ಷಿಣ ಕರ್ನಾಟಕದವರಾದ ಬಿಜೆಪಿ ಸರ್ಕಾರದ ಸಚಿವರು ಮತ್ತು ಪ್ರಮುಖ ನಾಯಕರುಗಳ ಸಭೆ ನಡೆಸಿ ಚುನಾವಣೆ ಗೆಲ್ಲಲು ಅಮೂಲ್ಯ ಸಲಹೆ ನೀಡಿದ್ದಾರೆ.

ಹಿಂದೂ ಅಜೆಂಡಾ ಮತ್ತು ಅಭಿವೃದ್ಧಿ ಹೆಸರಿನ ರಾಜಕೀಯ ಚಟಟುವಟಿಕೆಗಳ ಬಗ್ಗೆ ಮಾರ್ಗದರ್ಶನ ಮಾಡಿದ್ದಾರೆಂದು ಬಿಜೆಪಿಯ ಉನ್ನತ ಮೂಲಗಳು ತಿಳಿಸಿವೆ.ರಾಜ್ಯಕ್ಕೆ ಭೇಟಿ ನೀಡಿದ 3 ದಿನಗಳ ಪ್ರವಾಸ ಸಂದರ್ಭದಲ್ಲಿ ಅಮಿತ್ ಶಾ ಬಿಡುವಿಲ್ಲದೇ ಬಿಜೆಪಿ ಮುಖಂಡರ ಸಭೆ, ಸರ್ಕಾರಿ ಕಾರ್ಯಕ್ರಮಗಳಿಗೆ ಚಾಲನೆ, ಪಕ್ಷದ ಸಮಾವೇಶಗಳಲ್ಲಿ ಭಾಗವಹಿಸಿದ್ದಾರೆ.

ಈ ಮೂಲಕ ಪಕ್ಷದ ಕಾರ್ಯಕರ್ತರು, ಮುಖಂಡರುಗಳಲ್ಲಿ ಚುನಾವಣಾ ಹುಮ್ಮಸ್ಸು ತುಂಬಿದ್ದಾರೆ. ಅಷ್ಟೇ ಅಲ್ಲ, ಪ್ರತಿ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ನಿದ್ದೆಗೆಡಿಸಿದ್ದಾರೆ.

ಕಳೆದ ವರ್ಷ ಜುಲೈನಲ್ಲೇ ರಾಜ್ಯದಲ್ಲಿ BF.7 ವೈರಸ್ ಪತ್ತೆಯಾಗಿತ್ತು..!

ಉತ್ತರ ಕರ್ನಾಟಕದಲ್ಲಿ ಮೋದಿ ಮೋಡಿ: ದಕ್ಷಿಣ ಕರ್ನಾಟಕ ಭಾಗದಲ್ಲಿ ಅಮಿತ್ ಶಾ ಪ್ರವಾಸ ಮಾಡಿದ ಕೇವಲ 12 ದಿನಗಳ ಅಂತರದಲ್ಲಿಯೇ ಪ್ರಧಾನಿ ನರೆಂದ್ರ ಮೋದಿ ಉತ್ತರ ಕರ್ನಾಟಕಕ್ಕೆ ಭೇಟಿ ನೀಡುತ್ತಿದ್ದಾರೆ. ಜನವರಿ 12ರಂದು ಧಾರವಾಡದಲ್ಲಿ ರಾಷ್ಟ್ರೀಯ ಯುವ ಜನೋತ್ಸವಕ್ಕೆ ಪ್ರದಾನಿಯವರು ಚಾಲನೆ ನೀಡಲಿದ್ದಾರೆ.

ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಯುವಜನತೆ ಆಕರ್ಷಿಸುವ ಉದ್ದೇಶದಿಂದಲೇ ಧಾರವಾಡದಲ್ಲಿ ಯುವ ಜನೋತ್ಸವ ಸಮಾರಂಭ ಆಯೋಜಿಸಲಾಗಿದೆ ಎಂದು ಹೇಳಲಾಗುತ್ತಿದೆ.ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಇರುವ ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸರ್ಕಾರದ ಯೋಜನೆಗಳ ನೆಪದಲ್ಲಿ ರಾಜ್ಯಕ್ಕೆ ಭೇಟಿ ನೀಡಿ ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಜೊತೆಗೆ ಚುನಾವಣೆಗೆ ಸಂಬಂಸಿದ ಸಭೆ, ಸಮಾವೇಶಗಳ್ಲಿ ಪಾಲ್ಗೊಂಡು ವಿಧಾನಸಭೆ ಅಖಾಡಕ್ಕೆ ಭೂಮಿಕೆ ಸಿದ್ಧಪಡಿಸತೊಡಗಿದ್ದಾರೆ.

BJP, strategy, Narendra Modi, Amit Shah, Karnataka, assembly election,

Articles You Might Like

Share This Article