ಪಾಟ್ನ, ಆ.1- ಮುಂದಿನ 2024ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯನ್ನು ಪ್ರಧಾನಿ ನರೇಂದ್ರ ಮೋದಿಯವರ ಸಾರಥ್ಯದಲ್ಲೇ ಎದುರಿಸುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್‍ಷಾ ಹೇಳಿದ್ದಾರೆ.
ಎನ್‍ಡಿಯಲ್ಲಿರುವ ಮಿತ್ರ ಪಕ್ಷಗಳು ಹಾಗೂ ಬಿಹಾರದಲ್ಲಿ ನಮ್ಮ ಮಿತ್ರರಾಗಿರುವ ಜೆಡಿಯು ನಮ್ಮೊಂದಿಗೇ ಇರುತ್ತಾರೆ ಎಂದು ಇಲ್ಲಿ ನಡೆದ ಜಂಟಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ನಂತರ ಸುದ್ದಿಗಾರರೊಂದಿಗೆ ಅಮಿತ್ ಷಾ
ತಿಳಿಸಿದ್ದಾರೆ.
ಮೂರನೇ ಬಾರಿಗೂ ಮೋದಿ ಅವರು ಪ್ರಧಾನಿಯಾಗಿ ಮುಂದುವರೆಯಲಿದ್ದಾರೆ ಎಂದು ಹೇಳಿರುವ ಅವರು ಕಳೆದ ಭಾರಿಗಿಂತ ಹೆಚ್ಚಿನ ಸ್ಥಾನವನ್ನು ಗೆಲ್ಲಲು ಪಕ್ಷದ ಕಾರ್ಯಕರ್ತರು ಸಜ್ಜಾಗಬೇಕು ಎಂದು ಹೇಳಿದ್ದಾರೆ. ನಿತೀಶ್ ಕುಮಾರ್ ಜೊತೆ ಒಳ್ಳೆಯ ಕೆಲಸಗಳಾಗುತ್ತಿದೆ. ಮುಂದೆ ಅವರು ಬಿಹಾರದ ಎನ್‍ಡಿಎ ನಾಯಕರಾಗಬಹುದು ಎಂದರು.
ಬಿಹಾರದಲ್ಲಿ 2025ರಲ್ಲಿ ನಡೆಯಲಿರುವ ವಿಧಾನ ಸಭಾ ಚುನಾವಣೆಯಲ್ಲೂ ಜೆಡಿಯು ನೊಂದಿಗೆ ಬಿಜೆಪಿ ಮೈತ್ರಿ ಮುಂದುವರೆಯಲಿದೆ ಎಂದು ತಿಳಿಸಿದ ಅವರು ಭಿನ್ನಾಭಿಪ್ರಾಯಗಳಿವೆ ಎಂಬ ಮಾತುಗಳು ಕೇವಲ ಊಹಾ-ಪೋಹಾಗಳೆಂದು ತಿಳಿಸಿದ್ದಾರೆ.
ಇದಕ್ಕೂ ಮುನ್ನ ಮಾತನಾಡಿದ ಬಿಹಾರ ಡಿಸಿಎಂ ಸುಶೀಲ್ ಕುಮಾರ್ ಮೋಡಿ ಕೂಡ ಜೆಡಿಯು ಜೊತೆಗಿನ ಮೈತ್ರಿ ಮುಂದುವರೆಯಲಿದೆ. ಸಿಎಂ ನಿತೀಶ್ ಕುಮಾರ್ ಅವರು ಲಾಲು ಜೊತೆ ಸ್ನೇಹ ಹೊಂದಿದ್ದಾರೆ ಮತ್ತೆ ಮುಂದೆ ಅವರೊಂದಿಗೆ ಹೋಗುತ್ತಾರೆ ಎಂಬುದು ಸುಳ್ಳು ಮುಂದೆ ನಿಮಗೆ ಅದು ಗೊತ್ತಾಗಲಿದೆ ಎಂದು ತಿಳಿಸಿದರು.
ಈಗಾಗಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡ ಅವರು ಬಿಜೆಪಿಯ ಸಂಸದರು ಹಾಗೂ ಶಾಸಕರ ಜೊತೆ ಮಾತುಕತೆ ನಡೆಸಿ ಪಕ್ಷದ ಸಂಘಟನೆ ಬಗ್ಗೆ ಮತ್ತು ಮೈತ್ರಿ ಜೆಡಿಯು ಜೊತೆಗಿನ ಸ್ನೇಹಿ ವಾತಾವರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸೂಚಿಸಿದ್ದಾರೆ ಎಂದು ಅವರು ತಿಳಿಸಿದರು.