ಬೆಂಗಳೂರು,ಫೆ.28- ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಭೇಟಿ ಕೊಟ್ಟು ವಿಧಾನಸಭಾ ಚುನಾವಣೆಗೆ ರಣಕಹಳೆ ಮೊಳಗಿಸಿದ ಬೆನ್ನಲ್ಲೆ ಬಿಜೆಪಿಯ ವಿಜಯಸಂಕಲ್ಪ ಯಾತ್ರೆ ನಾಳೆಯಿಂದ ಆರಂಭವಾಗಲಿದೆ.
ರಾಜ್ಯ ವಿಧಾನಸಭಾ ಚುನಾವಣೆಗೆ ರಣಕಹಳೆ ಮೊಳಗಿಸಿರುವ ಬಿಜೆಪಿ ರಾಜ್ಯದ ನಾಲ್ಕು ದಿಕ್ಕಿನಿಂದ ರಥಯಾತ್ರೆಗೆ ಸಜ್ಜಾಗಿದೆ. ಅದಕ್ಕಾಗಿ ರಥಗಳು ಸನ್ನದ್ಧಗೊಂಡಿವೆ. ನಾಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಮಲೆ ಮಹದೇಶ್ವರ ಬೆಟ್ಟದಲ್ಲಿ ಪ್ರಚಾರದ ಯಾತ್ರೆಗೆ ಚಾಲನೆ ನೀಡಲಿದ್ದಾರೆ.
ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಾರ್ಚ್ 2ರಂದು ಬೆಳಗಾವಿ ಜಿಲ್ಲೆಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಹುಟ್ಟೂರು ನಂದಗಡದಲ್ಲಿ ಮತ್ತೊಂದು ಯಾತ್ರೆ ಉದ್ಘಾಟಿಸಲಿದ್ದಾರೆ.
ಮೂರು ಮತ್ತು ನಾಲ್ಕನೇ ಯಾತ್ರೆಗಳು ಮಾರ್ಚ್ 3 ರಂದು ಕಲ್ಯಾಣ ಕರ್ನಾಟಕ ಭಾಗದ ಬೀದರ್‍ನ ಬಸವಕಲ್ಯಾಣ ಮತ್ತು ಕೆಂಪೇಗೌಡರ ಜನ್ಮಸ್ಥಳ ದೇವನಹಳ್ಳಿಯ ಆವತಿಯಿಂದ ಪ್ರಾರಂಭವಾಗಲಿವೆ. ಇವುಗಳಿಗೆ ಕ್ರಮವಾಗಿ ಬೆಳಗ್ಗೆ ಹಾಗೂ ಮಧ್ಯಾಹ್ನದಂದು ಅಮಿತ್ ಶಾ ಅವರು ಧ್ವಜಾರೋಹಣ ನೆರವೇರಿಸಲಿದ್ದಾರೆ.
ಚಂದ್ರಯಾನ-3ರ ಮಿಷನ್‍ನಲ್ಲಿ ಇಸ್ರೋದ ಮತ್ತೊಂದು ಸಾಧನೆ
ಬಿಜೆಪಿ ಸರ್ಕಾರವು ಹೀಗೆ ನಾಲ್ಕು ಕಡೆಗಳಲ್ಲಿ ಯಾತ್ರೆ ನಡೆಸುವ ಮೂಲಕ ಲಿಂಗಾಯತರು, ಒಕ್ಕಲಿಗರು, ಕುರುಬರು ಮತ್ತು ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದ ಸಮುದಾಯಗಳಿಗೆ ಐತಿಹಾಸಿಕ ಮತ್ತು ಜಾತಿ ಪ್ರಾಮುಖ್ಯತೆಯನ್ನು ಆಧರಿಸಿ ಮತ ಬ್ಯಾಂಕ್ ಸೆಳೆಯಲು ಮುಂದಾಗಿದೆ.
ಕಲ್ಯಾಣ ಕರ್ನಾಟಕದ ಭಾಗವಾದ ಬಸವಕಲ್ಯಾಣ ಲಿಂಗಾಯತ ಸಮುದಾಯಕ್ಕೆ ಪವಿತ್ರ ಸ್ಥಳ ಎಂದಾದರೆ, ನಂದಗಡ ಮತ್ತು ಅವತಿಯಲ್ಲಿ ಬಿಜೆಪಿ ಯಾತ್ರೆ ಪ್ರಾರಂಭಿಸುವುದರಿಂದ ಕುರುಬ ಸಮುದಾಯ ಹಾಗೂ ಒಕ್ಕಲಿಗರನ್ನು ಆಕರ್ಷಿಸಲು ಸಹಾಯವಾಗುತ್ತದೆ. ಚಾಮರಾಜನಗರದಲ್ಲಿರುವ ಎಂಎಂ ಹಿಲ್ಸ್ ದೇವಾಲಯವು ಎಸ್ಸಿ-ಎಸ್ಟಿ ಸಮುದಾಯಗಳಿಗೆ ಮಹತ್ವದ್ದಾಗಿದೆ.
ಈ 4 ಯಾತ್ರೆಗಳಿಂದ 224 ವಿಧಾನಸಭಾ ಕ್ಷೇತ್ರಗಳ ಮೂಲಕ ಸುಮಾರು 8,000 ಕಿ.ಮೀ. ಈ ಸಂದರ್ಭದಲ್ಲಿ ಪಕ್ಷವು 80 ಯಾತ್ರೆ ಮೆರವಣಿಗೆಗಳು, 75 ಸಾರ್ವಜನಿಕ ಸಭೆಗಳು ಮತ್ತು 150 ರೋಡ್ ಶೋಗಳನ್ನು ಯೋಜಿಸಿದ್ದು, ಇದರಿಂದ ರಾಜ್ಯದ ನಾಲ್ಕು ಕೋಟಿ ಜನರನ್ನು ತಲುಪುವುದು ಬಿಜೆಪಿ ಪ್ಲಾನ್ ಆಗಿದೆ. ಈ ಮೂಲಕ ಬಿಜೆಪಿ 150 ಸ್ಥಾನ ಗೆಲ್ಲುವ ಗುರಿ ಹೊಂದಿದೆ.
ಮಲೆ ಮಹದೇಶ್ವರ ಬೆಟ್ಟದಿಂದ ಆರಂಭವಾಗಲಿರುವ ಯಾತ್ರೆಗೆ ಬಿಜೆಪಿ ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪ ಹಾಗೂ ನಂದಗಡದಿಂದ ಜಲಸಂಪನ್ಮೂಲ ಸಚಿವ ಗೋವಿಂದ್ ಕಾರಜೋಳ ಚಾಲನೆ ನೀಡಲಿದ್ದಾರೆ. ಕಲ್ಯಾಣ-ಕರ್ನಾಟಕ ಪ್ರದೇಶದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮತ್ತು ಹಳೇ ಮೈಸೂರು ಭಾಗದಲ್ಲಿ ಕಂದಾಯ ಸಚಿವ ಆರ್.ಅಶೋಕ್ ಯಾತ್ರೆಗಳನ್ನು ಉದ್ಘಾಟಿಸಲಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳು, ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಚುನಾವಣೆ ಎದುರಿಸಲು ಸಿದ್ಧತೆ ನಡೆಸಿರುವ ಬಿಜೆಪಿ ನಾಲ್ಕು ತಂಡಗಳಲ್ಲಿ ರಥಯಾತ್ರೆ ನಡೆಸಲಿದೆ. ಇದಕ್ಕಾಗಿ ಸಿದ್ಧಪಡಿಸಿರುವ ರಥಗಳನ್ನು ರಾಷ್ಟ್ರೀಯ ನಾಯಕರು ಉದ್ಘಾಟಿಸಲಿದ್ದಾರೆ.
ಹಿಂದೂ ದೇವರುಗಳ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದವನಿಗೆ ಬಿತ್ತು ಗೂಸಾ
ಬಿಜೆಪಿಯಿಂದ ಮುಂದಿನ ಮಾರ್ಚ್ 1ರಿಂದ ಎಲ್ಲ ಸಮುದಾಯ ಮತಗಳನ್ನು ಹಿಡಿದಿಟ್ಟುಕೊಳ್ಳಲು ಅನುಕೂಲವಾಗುವಂತೆ ರಾಜ್ಯ ನಾಲ್ಕು ಮೂಲೆಗಳಿಂದ ವಿಜಯ ಸಂಕಲ್ಪ ಯಾತ್ರೆಗಳನ್ನು ಆರಂಭಿಸಲಿದೆ. ಕೇಂದ್ರದ ಬಿಜೆಪಿ ವರಿಷ್ಠರು ಈ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಮಾರ್ಚ್ 1 ಮತ್ತು 3ರ ನಡುವೆ ಪಕ್ಷದ ರಾಷ್ಟ್ರೀಯ ನಾಯಕರಾದ ಅಮಿತ್ ಶಾ, ರಾಜನಾಥ್ ಸಿಂಗ್ ಮತ್ತು ಜೆಪಿ ನಡ್ಡಾ ಅವರು ಕರ್ನಾಟಕದ ನಾಲ್ಕು ಮೂಲೆಗಳಿಂದ ಪ್ರಚಾರ ಕಾರ್ಯ ಆರಂಭಿಸಲಿದ್ದಾರೆ. ಮುಖ್ಯವಾಗಿ ಚಾಮರಾಜನಗರ, ಬೀದರ್ ಬೆಳಗಾವಿ ಮತ್ತು ಬೆಂಗಳೂರು ಈ ನಾಲ್ಕು ಕಡೆಗಳಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ ನೀಡಲಿದ್ದಾರೆ.
ಈ ಯಾತ್ರೆಗಳು ಮಾರ್ಚ್ ಅಂತ್ಯಕ್ಕೆ (ಮಾ.25) ದಾವಣಗೆರೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕ ರ್ಯಾಲಿಯೊಂದಿಗೆ ಮುಕ್ತಾಯವಾಗಲಿವೆ ಎಂದು ಕರ್ನಾಟಕದ ಬಿಜೆಪಿ ಮೂಲಗಳು ತಿಳಿಸಿವೆ.
ರಥದ ವಿಶೇಷತೆ: ಪರಿವರ್ತನಾ ಯಾತ್ರೆ, ಏಕತಾ ಯಾತ್ರೆ ಹಾಗು ರಥಯಾತ್ರೆ ನಂತರ ಈಗ ಕರ್ನಾಟಕದಲ್ಲಿ ಬಹುಮತದ ಸರ್ಕಾರ ತರಲು ನಾಲ್ಕು ರಥಯಾತ್ರೆ ಮಾಡಲಿದ್ದೇವೆ. ನಾಲ್ಕೂ ರಥಗಳಿಗಾಗಿ ಅಶೋಕ್ ಲೇಲ್ಯಾಂಡ್ ವಾಹನವನ್ನು ಪರಿವರ್ತಿಸಲಾಗಿದೆ. 30 ಅಡಿ ಉದ್ದ 8 ಅಡಿ ಅಗಲದ ವಾಹನ ಇದಾಗಿದೆ.
ಭಾಷಣ ಮಾಡಲು ಕೆನೋಪಿ ರಚನೆ ಮಾಡಿದ್ದು, ನಾಲ್ಕು ಮೊಬೈಲ್ ಚಾರ್ಜರ್ ಅಳವಡಿಸಲಾಗಿದೆ. ರೋಡ್ ಶೋ ಮಾಡಲು ಪೂರಕವಾಗಿ ಮೈಕ್ ಇದೆ. ಒಂದು ಕಿಲೋಮೀಟರ್ ದೂರದವರೆಗೆ ಧ್ವನಿ ಕೇಳಲಿದೆ. ನಾಲ್ಕು ಹಾರನ್‍ಗಳನ್ನು ಕೆನೋಪಿ ಮೇಲೆ ಅಳವಡಿಸಲಾಗಿದೆ.
ಬಸ್ಸಿನ ಒಳಗಡೆ ಏಳು ಆಸನ ವ್ಯವಸ್ಥೆ ಮಾಡಲಾಗಿದೆ. ಚಿಕ್ಕ ಸಭೆಗೆ ವ್ಯವಸ್ಥೆ ಕಲ್ಪಿಸಿದ್ದು, ಯಾತ್ರೆ ವೇಳೆ ಸಣ್ಣಪುಟ್ಟ ಸಭೆಗಳನ್ನು ನಡೆಸಲಾಗುತ್ತದೆ. ಒಳಗಡೆಯೇ ಹೋಂ ಥಿಯೇಟರ್ ಇದೆ. 32 ಇಂಚು ಟಿವಿ ಇದೆ. ಚಾಲಕನ ಜೊತೆ ಮಾತನಾಡಲು ಇಂಟರ್ ಕಾಮ್ ವ್ಯವಸ್ಥೆ, ಜನರೇಟರ್, ಆಡಿಯೋ ಸಿಸ್ಟಂ, ಕ್ಯಾಮರಾಗಳು, ಎಲ್‍ಇಡಿ ಡಿಸ್ಲ್ಪೇ ಇದೆ.
ಪಕ್ಷದ ಪರವಾಗಿ ಗೀತೆಗಳ ರಚನೆ ಮಾಡಿದ್ದು, ರಥಯಾತ್ರೆ ವೇಳೆ ಗೀತೆಗಳ ಪ್ರಸ್ತುತಪಡಿಸಲಾಗುತ್ತದೆ. ರಥಯಾತ್ರೆ ವಾಹನ ಹೋಗುವ 15-30 ನಿಮಿಷ ಮೊದಲು ಒಂದು ವಾಹನ ಹೋಗಿ ರಥಯಾತ್ರೆ ಆಗಮಿಸುತ್ತಿರುವ ಮಾಹಿತಿ ನೀಡಲಿದೆ.
ದೇಶದ ಸಮಗ್ರ ಅಭಿವೃದ್ಧಿಗೆ ತಂತ್ರಜ್ಞಾನ ನೆರವು ನೀಡಲಿದೆ; ಮೋದಿ
ಒಟ್ಟು 8000 ಕಿಲೋಮೀಟರ್ ದೂರವನ್ನು ರಥಯಾತ್ರೆಯ ಬಸ್ ಗಳು ಸಂಚರಿಸಲಿವೆ. ಈ ವೇಳೆ 80 ರ್ಯಾಲಿಗಳನ್ನು ಆಯೋಜನೆ ಮಾಡಲಿದ್ದು, 75 ಸಭೆಗಳಿಗೆ ಸಿದ್ದತೆ ಮಾಡಿಕೊಳ್ಳಲಾಗಿದೆ. 150 ರೋಡ್ ಶೋಗಳನ್ನು ಆಯೋಜನೆ ಮಾಡಲಾಗುತ್ತದೆ. ಈ ರಥದಲ್ಲಿ ವಾಹನದಿಂದಲೇ ಭಾಷಣ ಮಾಡಲು ಹೈಡ್ರಾಲಿಕ್ ಸ್ಟೇಜ್ ವ್ಯವಸ್ಥೆ ಕಲ್ಪಿಸಲಾಗಿದೆ.
BJP, launch, ‘Vijay Sankalp Yatra, Karnataka,