ಕೊಲ್ಕತ್ತಾ,ಡಿ.3- ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ ನಡುವೆ ಮತ್ತೆ ಜಿದ್ದಾಜಿದ್ದಿನ ರಾಜಕೀಯ ಸಂಘರ್ಷಗಳು ನಡೆಯುವ ಲಕ್ಷಣಗಳು ಗೋಚರವಾಗಿದ್ದು, ಖೇಲ್ ಹೊಬೆ (ಆಟ ಮುಂದುವರೆಯಲಿದೆ) ಘೋಷಣೆಯನ್ನು ಬಿಜೆಪಿ, ಟಿಎಂಸಿಗೆ ತಿರುಗೇಟು ನೀಡಲು ಬಳಸಲು ಮುಂದಾಗಿದೆ.
ಪಶ್ಚಿಮ ಬಂಗಾಳದ ಬಿಜೆಪಿ ರಾಜ್ಯಾಧ್ಯಕ್ಷ ಸುಕಂತ್ ಮಜುಂದಾರ್, 2024ರ ಲೋಕಸಭೆಯ ಜೊತೆಗೆ ಇಲ್ಲಿನ ವಿಧಾನಸಭೆಗೂ ಚುನಾವಣೆ ನಡೆದರೆ ಆಶ್ಚರ್ಯವಿಲ್ಲ ಎಂದು ಹೇಳುವ ಮೂಲಕ ಕುತೂಹಲ ಕೆರಳಿಸಿದ್ದಾರೆ. ಬಿಜೆಪಿ ಅಹಿಂಸಾ ತತ್ವದ ಮೇಲೆ ನಂಬಿಕೆ ಇಟ್ಟಿದೆ. ಅದರ ಅರ್ಥ, ನಮ್ಮನ್ನು ತಳ್ಳಲು ಬಂದರೆ ಪ್ರತಿಕ್ರಿಯಿಸುವುದಿಲ್ಲ ಎಂದಲ್ಲ. ಮುಂದಿನ ಎರಡು ಚುನಾವಣೆಗಳಲ್ಲೂ ಖೇಲ್ ಹೊಬೆಯಾಗಲಿದೆ ಎಂದಿದ್ದಾರೆ.
2021ರಲ್ಲಿ ವಿಧಾನಸಭೆಗೆ ಚುನಾವಣೆ ನಡೆದಾಗ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಖೇಲ್ ಹೊಬೆ ಘೋಷಣೆಯನ್ನು ಬಳಕೆ ಮಾಡಿದ್ದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿಯ ಅನೇಕ ರಾಷ್ಟ್ರೀಯ ನಾಯಕರು ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಸತತ ಪ್ರಯತ್ನ ನಡೆಸಿದ್ದರು.
ಪಿಎಸ್‍ಐ ನೇಮಕಾತಿ ಅಕ್ರಮ : ಅಮೃತ್‍ಪೌಲ್ ವಿರುದ್ಧ ಪ್ರಾಸಿಕ್ಯೂಷನ್‍ಗೆ ಅನುಮತಿ
ಆ ವೇಳೆ ಬಿಜೆಪಿ ರಾಷ್ಟ್ರೀಯ ನಾಯಕರು ಒಮ್ಮೆಲೇ ಮುಗಿ ಬಿದ್ದಾಗ ದೃತಿಗೇಡದ ಮಮತಾ ಬ್ಯಾನರ್ಜಿ, ಆಟ ಮುಂದುವರೆಯಲಿದೆ ಎಂದು ಘೋಷಿಸುವ ಮೂಲಕ ಸಂಚಲನ ಮೂಡಿದರು. ಈ ಘೋಷ ವಾಕ್ಯ ವ್ಯಾಪಕ ಪ್ರಚಾರ ಪಡೆದಿತ್ತು. ಬೇರೆ ಬೇರೆ ರಾಜ್ಯಗಳ ಚುನಾವಣೆಯಲ್ಲೂ ಅಲ್ಲಿನ ರಾಜಕೀಯ ಪಕ್ಷಗಳು ಇದನ್ನು ಬಳಕೆ ಮಾಡಿದ್ದವು. ಮಮತಾ ಅವರ ಹೇಳಿಕೆ ಬಿಜೆಪಿಗೆ ಸವಾಲೊಡ್ಡಿತ್ತು.
ಈಗ ಅದೇ ಹೇಳಿಕೆಯನ್ನು ಟಿಎಂಸಿಗೆ ತಿರುಗೇಟು ನೀಡಲು ಬಳಸಿಕೊಳ್ಳಲು ಬಿಜೆಪಿ ಮುಂದಾಗಿದೆ. ಪಶ್ಚಿಮ ಬಂಗಾಳ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಟಿಎಂಸಿ ರಾಜ್ಯದ ಆಸ್ತಿಗಳನ್ನು ಮಾರಾಟ ಮಾಡುತ್ತಿದೆ ಎಂದು ಮಜುಂದಾರ್ ಆರೋಪಿಸಿದ್ದಾರೆ.
ಜನತಾ ಪರಿವಾರದ ನಾಯಕ ಸಿಂ.ಲಿಂ.ನಾಗರಾಜು ವಿಧಿವಶ
ಚುನಾವಣೋತ್ತರ ಗಲಾಟೆಗಳ ಹಿನ್ನೆಲೆಯಲ್ಲಿ ಟಿಎಂಸಿಯ 300ಕ್ಕೂ ಹೆಚ್ಚು ಮಂದಿ ಜೈಲಿನಲ್ಲಿದ್ದಾರೆ. ಸಿಬಿಐ ತನಿಖೆಯಲ್ಲಿ ಮತ್ತಷ್ಟು ಮಂದಿ ಜೈಲು ಪಾಲಾಗುವ ನಿರೀಕ್ಷೆ ಇದೆ. ಮೋದಿ ಅವರು ಪ್ರಧಾನಿಯಾಗಿರುವವರೆಗೂ ಅಕ್ರಮ ಮಾಡುವವರು ಕೈ ಬೀಸಿಕೊಂಡು ತಿರುಗಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
ಚಿರತೆ ಸೆರೆಗೆ ವಿಶೇಷ ತಂಡ ರಚನೆ : ಮೃತರ ಕುಟುಂಬಕ್ಕೆ 15 ಲಕ್ಷ ಪರಿಹಾರ ಘೋಷಣೆ
ರಾಜ್ಯದ ಪೊಲೀಸರು ನಿಷ್ಪಕ್ಷಪಾತವಾಗಿ ವರ್ತಿಸಬೇಕು. ಅವರಿಗೆ ಜನರ ತೆರಿಗೆ ಹಣದಿಂದ ಸಂಬಂಳ ನೀಡಲಾಗುತ್ತಿದೆ. ಯಾವುದೇ ರಾಜಕೀಯ ಕೂಟ ಅವರಿಗೆ ವೇತನ ನೀಡುವುದಿಲ್ಲ ಎಂದು ಕಿಡಿಕಾರಿದ ಅವರು, ಶೀಘ್ರವೇ ಕೇಂದ್ರ ಸರ್ಕಾರ ಪೊಲೀಸ್ ವ್ಯವಸ್ಥೆ ನಿಷ್ಪಕ್ಷಪಾತವಾಗಿ ವರ್ತಿಸುವುದನ್ನು ಖಾತ್ರಿ ಪಡಿಸಲು ಲೋಕಸಭೆಯಲ್ಲಿ ಮಸೂದೆವೊಂದನ್ನು ರೂಪಿಸಲಿದೆ ಎಂದು ಸುಳಿವು ನೀಡಿದರು.
BJP, #TMC, #Khelahobe #slogan #MamataBanerjee