ಬೆಂಗಳೂರು,ಡಿ.6- ಗುಜರಾತ್ ಮತ್ತು ಹಿಮಾಚಲಪ್ರದೇಶ ಚುನಾವಣಾ ಫಲಿತಾಂಶ ಕರ್ನಾಟಕದ ಮೇಲೂ ಬೀರಲಿದ್ದು, 2023ರ ಚುನಾವಣೆಯಲ್ಲೂ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಎರಡೂ ರಾಜ್ಯಗಳ ಫಲಿತಾಂಶ ರಾಜ್ಯದ ಮೇಲೆ ಪರಿಣಾಮ ಬೀರುವುದರಲ್ಲೂ ಯಾವುದೇ ಅನುಮಾನವಿಲ್ಲ. 2023ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 100ಕ್ಕೂ 100ರಷ್ಟು ಅಧಿಕಾರಕ್ಕೆ ಬಂದೇ ಬರುತ್ತದೆ ಎಂಬ ದೃಢ ವಿಶ್ವಾಸವನ್ನು ವ್ಯಕ್ತಪಡಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನ ಅಭಿವೃದ್ಧಿ ಕಾರ್ಯವನ್ನು ಬೆಂಬಲಿಸಲಿದ್ದಾರೆ ಎಂಬುದಕ್ಕೆ ಚುನಾವಣೋತ್ತರ ಮತಗಟ್ಟೆ ಫಲಿತಾಂಶವೇ ಸಾಕ್ಷಿ.
ಸುಳ್ಳು ಮತ್ತು ರಾಜಕೀಯ ಪ್ರೇರಿತ ಆರೋಪಗಳಿಗೆ ಜನರು ಮಣೆ ಹಾಕುವುದಿಲ್ಲ ಎಂದು ಪರೋಕ್ಷವಾಗಿ ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದರು. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಇಡೀ ದೇಶವೇ ಬೆಂಬಲಿಸುತ್ತದೆ. ಜತೆಗೆ ಗೌರವಿಸುತ್ತದೆ. ಗುಜರಾತ್ನಲ್ಲಿ 7ನೇ ಬಾರಿ ಅಧಿಕಾರಕ್ಕೆ ಬರುತ್ತದೆ ಎಂಬುದು ಸುಮ್ಮನೆ ಮಾತಲ್ಲ. ಜನರು ಅಭಿವೃದ್ಧಿಗೆ ಹೊತ್ತು ಕೊಡುತ್ತಾರೆ. ಕರ್ನಾಟಕದಲ್ಲೂ ನಮಗೆ ಮತದಾರರು ಕೈ ಹಿಡಿಯಲಿದ್ದಾರೆ ಎಂದು ತಿಳಿಸಿದರು.
ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಹೊಸತೇನು ಅಲ್ಲ. ಚುನಾವಣೆಗೋಸ್ಕರ ನಾವು ಈ ವಿವಾದವನ್ನು ಕೆದಕುತ್ತಿಲ್ಲ. ಮುಗಿದು ಹೋಗಿರುವ ಅಧ್ಯಾಯವನ್ನು ಕೆದಕುತ್ತಲೇ ಇದೆ. ಖಂಡಿತವಾಗಿಯೂ ಇದರಲ್ಲಿ ಅವರು ಯಶಸ್ವಿಯಾಗುವುದಿಲ್ಲ ಎಂದರು.
ಮಹಾರಾಷ್ಟ್ರವೇ ಗಡಿ ವಿವಾದವನ್ನು ಮುಂದಿಟ್ಟುಕೊಂಡು ಸುಪ್ರೀಂಕೋರ್ಟ್ಗೆ ಹೋಗಿದೆ. ನಾವು ಯಾವ ರೀತಿ ಕಾನೂನು ಹೋರಾಟ ನಡೆಸಬೇಕು ಎಂಬುದಕ್ಕೆ ಸಿದ್ಧವಾಗಿದ್ದೇವೆ. ಖಂಡಿತವಾಗಿಯೂ ನಮಗೆ ನ್ಯಾಯಾಲಯದಲ್ಲಿ ಜಯ ಸಿಕ್ಕೇ ಸಿಗುತ್ತದೆ ಎಂಬ ವಿಶ್ವಾಸವನ್ನು ಸಿಎಂ ವ್ಯಕ್ತಪಡಿಸಿದರು.
ಕರ್ನಾಟಕ ಮತ್ತು ಮಹಾರಾಷ್ಟ್ರ ಜನತೆ ನಡುವೆ ಸಾಕಷ್ಟು ಸಾಮರಸ್ಯ ಇದೆ. ನಾವು ಚುನಾವಣಾ ದೃಷ್ಟಿಯಿಂದ ವಿವಾದ ಹೆಬ್ಬಿಸುವುದಿಲ್ಲ. ಕರ್ನಾಟಕ ಮತ್ತು ಕನ್ನಡಿಗರ ರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ. ಮಹಾರಾಷ್ಟ್ರ, ಕೇರಳ ಸೇರಿದಂತೆ ಹೊರ ರಾಜ್ಯಗಳಲ್ಲಿರುವ ಕನ್ನಡಿಗರನ್ನು ರಕ್ಷಣೆ ಮಾಡುತ್ತೇವೆ ಎಂದು ಆಶ್ವಾಸನೆ ನೀಡಿದರು.
ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಮುಕ್ತ ಕಂಠದಿಂದ ಶ್ಲಾಘಿಸಿದ ಸಿಎಂ, ಸಂವಿಧಾನ ಇಲ್ಲದಿದ್ದರೆ ನಾವ್ಯಾರೂ ಇರುತ್ತಿರಲಲ್ಲ. ನಾವು ಅವರು ತೋರಿಕೊಟ್ಟ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಎಸಿ-ಎಸ್ಟಿ, ಹಿಂದುಳಿದವರ ಕಲ್ಯಾಣಕ್ಕೆ ನಮ್ಮ ಸರ್ಕಾರ ಶಕ್ತಿ ಮೀರಿ ಪ್ರಯತ್ನಿಸಿದೆ. ಎಸ್ಇಪಿಟಿಎಸ್ ಯೋಜನೆಗೆ 29 ಸಾವಿರ ಕೋಟಿ ಅನುದಾನ ನೀಡಿದ್ದೆವೆ, ರಾಜ್ಯಾದ್ಯಂತ ಬಾಬಾಸಾಹೇಬ್ ಅಂಬೇಡ್ಕರ್ ಹೆಸರಿನಲ್ಲಿ ನೂರು ವಸತಿ ಶಾಲೆಗಳು, 55 ಕನಕದಾಸ ವಸತಿ ಶಾಲೆಗಳು, ಬೆಂಗಳೂರು, ಮೈಸೂರು, ಮಂಗಳವಾರ ಮತ್ತು ಕಲಬುರಗಿಯಲ್ಲಿ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗಾಗಿಯೇ ಐದು ಬೃಹತ್ ಹಾಸ್ಟೆಲ್ಗಳನ್ನು ನಿರ್ಮಾಣ ಮಾಡುತ್ತೇವೆ ಎಂದು ಹೇಳಿದರು.
ವಿಧಾನಸೌದದಲ್ಲಿ ಅಂಬೇಡ್ಕರ್ ಸೂರ್ತಿ ಭವನದಲ್ಲಿ 55 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವುದು. ಉದ್ಯೋಗ, ಶಿಕ್ಷಣ ಸೇರಿದಂತೆ ಪ್ರತಿಯೊಂದರಲ್ಲೂ ಸ್ವಾವಲಂಬಿಯಾಗಿ ಜೀವನ ನಡೆಸಲು ಅನುಕೂಲವಾಗುವಂತೆ ಯೋಜನೆಗಳನ್ನು ಜಾರಿ ಮಾಡಿದ್ದೇವೆ ಎಂದರು.
ಟೆರರ್ ಫಂಡಿಂಗ್ ಗೆ ಕಡಿವಾಣ ಹಾಕಬೇಕು : ಅಜಿತ್ ದೇವೊಲ್
ದೀರ್ಘ ಕಾಲ ಸಂವಿಧಾನ ಹೋರಾಟ ಮಾಡಿದವರು ಡಾ.ಬಿ.ಆರ್. ಅಂಬೇಡ್ಕರ್. ಸಂವಿಧಾನ ಇಲ್ಲದಿದ್ದರೆ ಇವತ್ತು ನಾವು ಇತ್ತಿರಲಿಲ್ಲ. ಸಂವಿಧಾನದಲ್ಲಿ ಮಾನವೀಯ ಮೌಲ್ಯಗಳನ್ನು ಅಳವಡಿಸಿದ್ದಾರೆ. ಅವರ ಅನುಭವಿಸಿರುವಂತ ನೋವು ಸಂವಿಧಾನದಲ್ಲಿ ಅಳವಡಿಸಿದ್ದಾರೆ ಎಂದರು. ಹಿಂದುಳಿದ ವರ್ಗದವರು ಅದನ್ನ ಅನುಭವಿಸಬಾರದು ಎಂಬ ಭಾವನೆಯಿಂದ ಸಂವಿಧಾನ ತತ್ವಗಳನ್ನ ನಾವು ಅಳವಡಿಸಿಕೊಳ್ಳಬೇಕು.
ಸಂಕಲ್ಪ ಅದರ ಮೌಲ್ಯಗಳನ್ನು ನಾವು ಅಳಿಸವಡಿಸಿಕೊಳ್ಳಬೇಕು. ಎಸ್ಸಿ-ಎಸ್ಟಿ ಮಕ್ಕಳಿಗೆ ಹಚ್ಚಿನ ಮೀಸಲಾತಿ ನೀಡುವಂತ ಕೆಲಸ ಸರ್ಕಾರ ಮಾಡ್ತೇವೆ. ಎಸ್ಸಿ-ಎಸ್ಟಿ ಹೆಣ್ಣುಮಕ್ಕಳಿಗೆ ಹೆಚ್ಚಿನ ಹಾಸ್ಟೆಲ್ಗಳನ್ನು ನಿರ್ಮಾಣ ಮಾಡಲಾಗ್ತಿದೆ. ಅವರ ಶಿಕ್ಷಣಕ್ಕೂ ಅನುದಾನ ನೀಡಲಾಗುತ್ತೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.