ಬಿಜೆಪಿಯ ಒಂದು ನಾಯಿಯೂ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿಲ್ಲ : ಖರ್ಗೆ

Social Share

ನವದೆಹಲಿ,ಡಿ.20- ಬ್ರಿಟಿಷರಿಂದ ದೇಶ ಸ್ವಾತಂತ್ರ್ಯ ಪಡೆಯಲು ಕಾಂಗ್ರೆಸ್‍ನ ಅನೇಕ ನಾಯಕರು ಬಲಿದಾನ ಮಾಡಿದ್ದಾರೆ. ಆದರೆ, ಬಿಜೆಪಿಯ ಒಂದು ನಾಯಿಯೂ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆ ಸಂಸತ್‍ನಲ್ಲಿಂದು ಕೋಲಾಹಲ ಸೃಷ್ಟಿಸಿದ್ದು, ಗದ್ದಲದಿಂದಾಗಿ ಕೆಲ ಕಾಲ ಕಲಾಪ ಮುಂದೂಡಿಕೆಯಾಗಬೇಕಾಯಿತು.

ಇಂದು ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಆಡಳಿತ ಪಕ್ಷ ಬಿಜೆಪಿಯ ಟ್ರಜರಿ ಬೆಂಚ್‍ನಲ್ಲಿದ್ದ ಪ್ರಮುಖ ನಾಯಕರು ಖರ್ಗೆ ಅವರ ಹೇಳಿಕೆಯನ್ನು ವಿರೋಧಿಸಿ, ಘೋಷಣೆಗಳನ್ನು ಕೂಗಿದ್ದಲ್ಲದೆ, ತೀವ್ರ ಪ್ರತಿಭಟನೆ ವ್ಯಕ್ತ ಪಡಿಸಿದರು. ಇದಕ್ಕೆ ಪ್ರತಿಯಾಗಿ ಪ್ರತಿಪಕ್ಷಗಳ ಸದಸ್ಯರು ಪ್ರತಿ ವಾಗ್ದಾಳಿ ನಡೆಸಿದರು. ಪ್ರತಿಭಟನೆ ವ್ಯಕ್ತವಾಯಿತು. ಬಿಜೆಪಿ ವಿರುದ್ಧ ಘೋಷಣೆಗಳು ಮೊಳಗಿಸಿದರು.

ಆರಂಭದಲ್ಲೇ ಸಭಾಧ್ಯಕ್ಷ ಓಂ ಬಿರ್ಲಾ ಪ್ರಶ್ನೋತ್ತರವನ್ನು ಕೈಗೆತ್ತಿಕೊಂಡರು. ಒಂದು ಪ್ರಶ್ನೆ ಮತ್ತು ಅದಕ್ಕೆ ಪೂರಕವಾದ ಉಪ ಪ್ರಶ್ನೆಯ ಕುರಿತು 10 ನಿಮಿಷಗಳ ಕಲಾಪ ನಡೆದಿತ್ತು. ಆದರೆ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಮಾತಿನಚಕಮಕಿ, ವಾಗ್ವಾದ ಜೋರಾಗಿತ್ತು.

ರೈಲ್ವೆದಲ್ಲಿ ಉದ್ಯೋಗದ ಕೊಡಿಸುವುದಾಗಿ 28 ಮಂದಿಗೆ 2.67 ಕೋಟಿ ಪಂಗನಾಮ

ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕ ಅರ್ ರಂಜನ್ ಚೌದರಿ ಮತ್ತು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಅರ್ಜುನ್ ಮೆಘ್ವಾಲ್ ಅವರ ನಡುವೆ ವಾಕ್ಸಮರವೇ ನಡೆಯಿತು. ಗದ್ದಲ ಕೋಲಾಹಲದಿಂದ ಏನು ಕೇಳಿಸದ ಪರಿಸ್ಥಿತಿ ನಿರ್ಮಾಣವಾದಾಗ ಓಂ ಬಿರ್ಲಾ ಅವರು 11.30ವರೆಗೆ ಕಲಾಪವನ್ನು ಮುಂದೂಡಿದರು.

ನಿನ್ನೆ ರಾಜಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು, ದೇಶಕ್ಕಾಗಿ ಕಾಂಗ್ರೆಸ್ ಸದಾ ತನ್ನನ್ನು ಅರ್ಪಿಸಿಕೊಂಡಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದೆ. ಸಾಕಷ್ಟು ನಾಯಕರ ಪ್ರಾಣ ತ್ಯಾಗ ಮಾಡಿದ್ದಾರೆ. ಬಿಜೆಪಿಯ ಒಂದು ನಾಯಿಯೂ ಜೀವ ಕಳೆದುಕೊಂಡಿಲ್ಲ ಎಂದು ವಾಗ್ದಾಳಿ ನಡೆಸಿದರು.

#BJPDogs #SacrificeForCountry, #MallikarjunKharge,

Articles You Might Like

Share This Article