ಸಂಸತ್‍ನಲ್ಲಿ ಇಂದೂ ಪ್ರತಿಧ್ವನಿಸಿದ ರಾಹುಲ್‍ ವಿವಾದಿತ ಹೇಳಿಕೆ

Social Share

ನವದೆಹಲಿ,ಮಾ.14- ಭಾರತದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ರಾಹುಲ್‍ಗಾಂಧಿ ಲಂಡನ್‍ನಲ್ಲಿ ನೀಡಿದ್ದ ಹೇಳಿಕೆಯನ್ನು ಮುಂದಿಟ್ಟುಕೊಂಡು ಸಂತ್‍ನ ಉಭಯ ಸದನಗಳಲ್ಲಿ ಆಡಳಿತ ಪಕ್ಷದ ಸದಸ್ಯರೇ ಗದ್ದಲ, ಕೋಲಾಹಲ ಸೃಷ್ಟಿಸಿದ್ದರಿಂದ ಇಂದೂ ಕೂಡ ಯಾವುದೇ ಕಲಾಪ ನಡೆಯದೆ ಬೋಜನ ವಿರಾಮಕ್ಕೆ ಅಧಿವೇಶನ ಮುಂದೂಡಿಕೆಯಾಗಿದೆ.

ರಾಜ್ಯಸಭೆ ಮತ್ತು ಲೋಕಸಭೆ ಎರಡರಲ್ಲೂ ನಿನ್ನೆಯಂತೆ ಇಂದೂ ಕೂಡ ಭಾರೀ ಕೋಲಾಹಲ ಸೃಷ್ಟಿಯಾಗಿದೆ. ಬಿಜೆಪಿ ರಾಹುಲ್‍ಗಾಂಧಿ ಸದನಕ್ಕೆ ಬರಬೇಕು ಮತ್ತು ತಮ್ಮ ಹೇಳಿಕೆಗಾಗಿ ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದಿದೆ.

ರಾಜ್ಯಸಭೆಯಲ್ಲಿ ಸಭಾನಾಯಕ ಮತ್ತು ಕೇಂದ್ರ ಸಚಿವ ಪಿಯೂಷ್ ಗೋಯಲ್ ಆರಂಭದಲ್ಲೇ ಮಾತನಾಡಿ, ಗಾಂಧಿಯವರ ಹೆಸರನ್ನು ಉಲ್ಲೇಖಿಸದೆ, ಕಾಂಗ್ರೆಸ್ ನಾಯಕರೊಬ್ಬರು ಸಂಸತ್ತು ಮತ್ತು ಸಾಂವಿಧಾನಿಕ ಸಂಸ್ಥೆಗಳನ್ನು ಅವಮಾನಿಸಿದ್ದಾರೆ. ಅವರು ಕ್ಷಮೆಯಾಚಿಸಲೇಬೇಕು ಎಂದು ಒತ್ತಾಯಿಸಿದರು.

ಒಕ್ಕಲಿಗ ಸಮುದಾಯಕ್ಕೆ ಶಾಶ್ವತ ಕಪ್ಪುಚುಕ್ಕೆ ಮೆತ್ತುವ ಷಡ್ಯಂತ್ರ : ಹೆಚ್‌ಡಿಕೆ

ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ನೇತೃತ್ವದಲ್ಲಿ ವಿರೋಧ ಪಕ್ಷದ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. ಇದರ ನಡುವೆ ತಮ್ಮ ಆರೋಪಗಳನ್ನು ಮುಂದುವರೆಸಿದ ಪಿಯೂಷ್ ಗೋಯಲ್, ನಿನ್ನೆ ನಾವು ಮುಖ್ಯವಾದ ವಿಷಯವನ್ನು ಪ್ರಸ್ತಾಪಿಸಿದ್ದೇವೆ. ಭಾರತವನ್ನು ಅವಮಾನಿಸುವ ಜೊತೆಗೆ, ಸಂಸತ್ತು ಹಾಗೂ ಇತರ ಸಾಂವಿಧಾನಿಕ ಸಂಸ್ಥೆಗಳನ್ನು ಅವಮಾನಿಸಲಾಗಿದೆ.

ಲೋಕಸಭೆ ಮತ್ತು ರಾಜ್ಯಸಭೆ ಎರಡೂ ಸಂಸತ್ತಿನ ಭಾಗವಾಗಿವೆ. ಇಡೀ ಸಂಸತ್ತಿಗೆ ಅವಮಾನ ಮಾಡಿರುವುದು ಇದೇ ಮೊದಲು ಎಂದು ನಾನು ಭಾವಿಸುತ್ತೇನೆ. ಭಾರತದ ಅಧ್ಯಕ್ಷರನ್ನು ಒಳಗೊಂಡಿರುವ ಸಂಸತ್ತಿನ ವಿರುದ್ಧ ವಿದೇಶಿ ನೆಲದಲ್ಲಿ ಸಂಸದರೊಬ್ಬರು ಅನಗತ್ಯ ಹೇಳಿಕೆಗಳನ್ನು ನೀಡಿ ಟೀಕಿಸಿದ್ದಾರೆ.

ಇಂತಹ ನಡವಳಿಕೆಯನ್ನು ನಾವೇಲ್ಲರೂ ಖಂಡಿಸಬೇಕು, ಸಂಬಂಧಪಟ್ಟ ವ್ಯಕ್ತಿ ಕ್ಷಮೆಯಾಚಿಸಬೇಕು. ವಿರೋಧ ಪಕ್ಷದ ಸಂಸದರು ಲಂಡನ್‍ನಲ್ಲಿ ಆರೋಪಿಸಿದಂತೆ ಸಂಸತ್ತಿನಲ್ಲಿ ಎಂದಿಗೂ ಮೈಕ್‍ಗಳನ್ನು ಸ್ವಿಚ್ ಆಫ್ ಮಾಡುವುದಿಲ್ಲ ಎಂದು ಗೋಯಲ್ ಸಮರ್ಥಿಸಿಕೊಂಡರು.

ಭೂಪಾಲ್ ಅನಿಲ ದುರಂತ : ಹೆಚ್ಚುವರಿ ಪರಿಹಾರಕ್ಕೆ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿ ವಜಾ

ಪ್ರತಿಪಕ್ಷಗಳ ಸದಸ್ಯರ ಗದ್ದಲದ ನಡುವೆ ಸಭಾಪತಿ ಜಗದೀಪ್ ಧನಕರ್ ಅವರು ಸದನವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಿದರು. ಇದಕ್ಕೂ ಮೊದಲು, ತ್ರಿಪುರಾದಲ್ಲಿನ ಚುನಾವಣೋತ್ತರ ಹಿಂಸಾಚಾರ, ಅದಾನಿ ಕಂಪೆನಿಯ ಷೇರು ಮೌಲ್ಯ ಏರಿಕೆ ಸೇರಿದಂತೆ ಅನೇಕ ವಿಷಯಗಳ ಚರ್ಚೆ ವಿರೋಧ ಪಕ್ಷದ ಸದಸ್ಯರು ನೀಡಿದ್ದ ನೋಟಿಸ್‍ಗಳನ್ನು ಸಭಾಪತಿ ಜಗದೀಪ್ ಧನಖರ್ ತಿರಸ್ಕರಿಸಿದರು.

ಇನ್ನೂ ಲೋಕಸಭೆಯಲ್ಲಿ ಸದನ ಸಮಾವೇಶಗೊಳ್ಳುತ್ತಿದ್ದಂತೆ ಅಧ್ಯಕ್ಷ ಓಂ ಬಿರ್ಲಾ, ಸದಸ್ಯರು ಸುಗಮ ಕಲಾಪಕ್ಕೆ ಅವಕಾಶ ನೀಡುವಂತೆ ಮನವಿ ಮಾಡಿ, ಪ್ರಶ್ನೋತ್ತರವನ್ನು ಕೈಗೆತ್ತಿಕೊಂಡರು.

ಕಾಂಗ್ರೆಸ್ ಸದಸ್ಯರು ಧರಣಿಯನ್ನು ಕೈಬಿಡಬೇಕು, ಭಿತ್ತಿಪತ್ರಗಳನ್ನು ಪ್ರದರ್ಶಿಸುವುದು ಉಚಿತವಲ್ಲ. ಸದನದ ಸಜ್ಜನಿಕೆಯನ್ನು ಪಾಲನೆ ಮಾಡಬೇಕು. ಕಲಾಪ ನಡೆಸಲು ಅವಕಾಶ ನೀಡಬೇಕು ಎಂದು ಓಂ ಬಿರ್ಲಾ ತಾಕೀತು ಮಾಡಿದರು. ಆದರೆ, ಕಾಂಗ್ರೆಸ್ ಸದಸ್ಯರು ಧರಣಿ ಮುಂದುವರಿಸಿದಾಗ ಸದನವನ್ನು ಮಧ್ಯಾಹ್ನ 2 ಗಂಟೆಗೆ ಸ್ಪೀಕರ್ ಮುಂದೂಡಿದರು.

“ಅದಾನಿ ಹಗರಣ ಮರೆ ಮಾಚಲು ಆಡಳಿತ ಪಕ್ಷದಿಂದ ಸಂಸತ್‍ನಲ್ಲಿ ಗದ್ದಲ”

ಇದಕ್ಕೂ ಮುನ್ನಾ ಆಡಳಿತ ಪಕ್ಷದ ಸದಸ್ಯರು ರಾಹುಲ್‍ಗಾಂ ಲಂಡನ್ ನಲ್ಲಿ ನೀಡಿರುವ ಆಕ್ಷೇಪಾರ್ಹ ಹೇಳಿಕೆಗೆ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿ. ಗದ್ದಲವೆಬ್ಬಿಸಿದ್ದರು. ಗಾಂಯವರ ಹೇಳಿಕೆಯ ಮೇಲೆ ಬಿಜೆಪಿ-ಕಾಂಗ್ರೆಸ್ ಗದ್ದಲ ತೀವ್ರಗೊಂಡಿತ್ತು.

BJP, Attack, Rahul Gandhi, Parliament, Congress, Pushback,

Articles You Might Like

Share This Article