ಬೆಂಗಳೂರು,ನ.28- ಚುನಾವಣೆಯಲ್ಲಿ ಟಿಕೆಟ್ ಸಿಗುತ್ತದೆ ಇಲ್ಲವೇ ಎಂಬ ಚಿಂತೆ ಬೇಡ. ಮೊದಲು ಪಕ್ಷಕ್ಕಾಗಿ ದುಡಿಯಲು ಮುಂದಾಗಿ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೇಳಿರುವುದು ಹಲವು ಶಾಸಕರಿಗೆ ಟಿಕೆಟ್ ಕೈತಪ್ಪುವ ಭೀತಿ ಎದುರಾಗಿದೆ.
ಶಿವಮೊಗ್ಗದಲ್ಲಿ ನಡೆದ ಬಿಜೆಪಿ ಪ್ರಶಿಕ್ಷಣ ಶಿಬಿರದಲ್ಲಿ ಸಂತೋಷ್ ಆಡಿರುವ ಈ ಮಾತು, ಕೆಲವು ಸಚಿವರು ಮತ್ತು ಶಾಸಕರಿಗೆ ಟಿಕೆಟ್ ಕೈ ತಪ್ಪಲಿದೆಯೇ ಎಂಬ ಸಂದೇಶವನ್ನು ಪರೋಕ್ಷವಾಗಿ ರವಾನಿಸಿದ್ದಾರೆ ಎಂದೇ ಹೇಳಲಾಗುತ್ತಿದೆ.
ಸಂತೋಷ್ ಅವರು ಏನೇ ಮಾತನಾಡಿದರೂ ಸಾಕಷ್ಟು ಅಳೆದುತೂಗಿ ಮಾತನಾಡುತ್ತಾರೆ. ಭವಿಷ್ಯದಲ್ಲಿ ಆಗಬಹುದಾದ ಮತ್ತು ಅದು ನಡೆದೇ ತೀರುತ್ತದೆ ಎಂಬ ಮುಂದಾಲೋಚನೆ ಇಟ್ಟುಕೊಂಡು ಆಡುವ ಒಂದೊಂದು ಮಾತುಗಳಿಗೂ ಸಾಕಷ್ಟು ತೂಕ ಇರುತ್ತದೆ.
ಇದೀಗ ಯಾರಿಗೆ ಟಿಕೆಟ್ ಸಿಗುತ್ತದೆ ಎಂಬುದು ಮುಖ್ಯವಲ್ಲ. ಮೊದಲು ಪಕ್ಷ ತರುವ ಕೆಲಸ ಮಾಡಿ ಎಂದು ಸಚಿವರು ಮತ್ತು ಶಾಸಕರಿಗೆ ನೀತಿ ಪಾಠ ಹೇಳಿರುವುದು ಹಿರಿಯರಿಗೆ ಗೇಟ್‍ಪಾಸ್ ಎಂಬ ಪ್ರಶ್ನೆ ಉದ್ಭವಾಗಿದೆ.
ಕೆಲ ದಿನಗಳ ಹಿಂದೆ ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಅವರು ಮಾಡಿದ್ದ ಒಂದು ಟ್ವೀಟ್ ಬಿಜೆಪಿಯಲ್ಲಿ ಅನೇಕ ಹಿರಿಯ ತಲೆಗಳಿಗೆ ಕಬ್ಬಿಣದ ಕಡಲೆಯಾಗಿ ಪರಿಣಮಿಸಿತ್ತು.
ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಅನೇಕ ಹಿರಿಯರು ಸೇರಿದಂತೆ ಸುಮಾರು 30ಕ್ಕೂ ಹೆಚ್ಚು ಶಾಸಕರಿಗೆ ಟಿಕೆಟ್ ಕೊಡದೆ ಹೊಸ ಮುಖಗಳಿಗೆ ಮಣೆ ಹಾಕಲಾಗಿತ್ತು.ಇದೇ ಮಾದರಿಯನ್ನು ಕರ್ನಾಟಕದಲ್ಲೂ ಅಳವಡಿಸಬೇಕೆಂದು ಲೆಹರ್ ಸಿಂಗ್ ಮಾಡಿದ್ದ ಅದೊಂದು ಟ್ವೀಟ್ ಅನೇಕ ಹಿರಿಯರಿಗೆ ಕಸಿವಿಸಿ ಉಂಟು ಮಾಡಿದ್ದು ಸುಳ್ಳಲ್ಲ.
ಚಾಕೊಲೇಟ್ ತಿಂದ 9 ವರ್ಷದ ಬಾಲಕ ಉಸಿರುಗಟ್ಟಿ ಸಾವು
ಇದೀಗ ಇದಕ್ಕೆ ಪುಷ್ಟಿ ನೀಡುವಂತೆ ಸಂತೋಷ್ ಕೂಡ ಟಿಕೆಟ್ ಬಗ್ಗೆ ಚಿಂತೆ ಬೇಡ ಎಂದಿರುವುದು ಐದಾರು ಬಾರಿ ಗೆದ್ದಿರುವವರಿಗೆ ಟಿಕೆಟ್ ಖಾತ್ರಿ ಇಲ್ಲ ಎಂಬ ಗುಸುಗುಸು ಹಬ್ಬಿದೆ.
ಸತತವಾಗಿ 6 ಬಾರಿ, ಐದು ಬಾರಿ, ನಾಲ್ಕು ಬಾರಿ ಗೆದ್ದಿರುವವರನ್ನು ಕೈಬಿಟ್ಟು ಹೊಸ ಮುಖಗಳಿಗೆ ಅಂದರೆ ಎರಡು ಮತ್ತು 3ನೇ ಹಂತದ ಕಾರ್ಯಕರ್ತರನ್ನು ಕಣಕ್ಕಿಳಿಸಬೇಕೆಂಬ ಬೇಡಿಕೆ ಹೆಚ್ಚಾಗುತ್ತಲೇ ಇದೆ.
ಈ ಹಿಂದೆ ದೆಹಲಿಯ ಪಾಲಿಕೆ ಚುನಾವಣೆಯಲ್ಲಿ ಬಹುತೇಕ ಹಾಲಿ ಎಲ್ಲ ಸದಸ್ಯರನ್ನು ಕೈಬಿಟ್ಟು ಹೊಸ ಮುಖಗಳಿಗೆ ಮಣೆ ಹಾಕಲಾಗಿತ್ತು. ಪರಿಣಾಮ ಯಾರೂ ಕೂಡ ಊಹೆ ಮಾಡದ ರೀತಿಯಲ್ಲಿ ಬಿಜೆಪಿ ಗೆದ್ದು ಅಕಾರ ಹಿಡಿದಿತ್ತು.
ಈ ಪ್ರಯೋಗವನ್ನು ಕರ್ನಾಟಕದಲ್ಲೂ ಅನುಷ್ಠಾನ ಮಾಡಬೇಕೆಂದು ಬಿಜೆಪಿಯ ಒಂದು ಗುಂಪು ಬೇಡಿಕೆಯನ್ನು ಮುಂದಿಟ್ಟಿದೆ. ಹಾಗೇನಾದರೂ ವರಿಷ್ಠರು ನಿರ್ಧಾರ ತೆಗೆದುಕೊಂಡರೆ ಅವೇಶನ ನಡೆಯುವ ವೇಳೆ ಮೊದಲ ಸಾಲಿನಲ್ಲಿ ಕೂರುವ ಬಹುತೇಕ ನಾಯಕರಿಗೆ ಮೊದಲನೇ ಮತ್ತು 2ನೇ ಸಾಲಿನಲ್ಲಿ ಕೂರುವವರಿಗೆ ಟಿಕೆಟ್ ಕೈ ತಪ್ಪುವ ಭೀತಿ ಎದುರಾಗಿದೆ.
ಒಂದಿಷ್ಟು ಹಳಬರಿಗೆ ಟಿಕೆಟ್ ಕೈ ತಪ್ಪಿಸಲು ದೆಹಲಿಯ ಪ್ರಭಾವಿ ನಾಯಕರು ಕೂಡ ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಆಡಳಿತ ವಿರೋ ಅಲೆಯನ್ನು ಮೆಟ್ಟಬೇಕಾದರೆ ಹಳಬರಿಗೆ ಕೋಕ್ ನೀಡುವುದು ಅನಿವಾರ್ಯ ಎಂಬ ಮಾತು ಕೇಳಿಬರುತ್ತಿದೆ.ಪ್ರತಿ ಚುನಾವಣೆಯಲ್ಲೂ ಹೊಸತನವನ್ನೇ ಪ್ರಯೋಗ ಮಾಡುವ ಬಿಜೆಪಿ ಕರ್ನಾಟಕದಲ್ಲಿ ಯಾವ ಮಾದರಿ ಅನುಸರಿಸುತ್ತದೆ ಎಂಬುದು ಈಗ ಕುತೂಹಲಕ್ಕೆ ಕಾರಣವಾಗಿದೆ.
#BLSantosh, #statement, #ticket, #worried, #MLAs, #BJP, #AssemblyElection2023,