ಉದ್ದೇಶ ಪೂರ್ವಕ ವರ್ಗಾವಣೆ ಖಂಡಿಸಿ ಬಿಬಿಎಂಪಿ ಸಿಬ್ಬಂದಿಗಳಿಂದ ಕರಾಳ ದಿನಾಚರಣೆ

Social Share

ಬೆಂಗಳೂರು, ಅ.31-ಅರ್ಹತೆ ಇಲ್ಲದ ಅಧಿಕಾರಿಗಳನ್ನು ಉದ್ದೇಶ ಪೂರಕವಾಗಿ ಬಿಬಿಎಂಪಿಗೆ ವರ್ಗಾವಣೆ ಮಾಡುತ್ತೀರುವ ಕ್ರಮ ಖಂಡಿಸಿ ಇಂದು ಬಿಬಿಎಂಪಿ ಸಿಬ್ಬಂದಿ ಕಪ್ಪು ಪಟ್ಟಿ ಧರಿಸಿ ಕೆಲಸ ಮಾಡುವ ಮೂಲಕ ಕರಾಳ
ದಿನ ಆಚರಿಸಿ ಆಕ್ರೋಶ ಹೊರಹಾಕಿದರು.

ಬಿಬಿಎಂಪಿ ಕೇಂದ್ರ ಕಚೇರಿ ಸೇರಿದಂತೆ ಎಂಟು ವಲಯಗಳಲ್ಲಿ ಸಿಬ್ಬಂದಿ ಕೈಗಳಿಗೆ ಕಪ್ಪು ಪಟ್ಟಿ ಧರಿಸಿ ಕೆಲಸ ನಿರ್ವಹಣೆ ಮಾಡುವ ಮೂಲಕ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಕರೆ ನೀಡಿದ್ದ ಹೋರಾಟಕ್ಕೆ ಬೆಂಬಲಿಸಿದರು.

ಇತ್ತೀಚಿಗೆ ಬಿಬಿಎಂಪಿ ದಕ್ಷಿಣ ವಲಯದ ಉಪ ಆಯುಕ್ತೆ ಲಕ್ಷ್ಮೀ ದೇವಿ ಅವರನ್ನು ದಿಢೀರ್ ವರ್ಗಾವಣೆ ಮಾಡಿ, ಈ ಕೆಎಎಸ್ ಅಲ್ಲದ ಸಮಾಜ ಕಲ್ಯಾಣ ಇಲಾಖೆಯ ಸಹಾಯ ನಿರ್ದೇಶಕ ರಾಜಶೇಖರ ಅವರನ್ನು ಈ ಸ್ಥಳಕ್ಕೆ ನಿಯೋಜಿಸಲಾಗಿದೆ. ಇಂತಹ ಕಾನೂನು ಬಾಹಿರ ವರ್ಗಾವಣೆ ಖಂಡಿಸಿ ಕರಾಳ ದಿನಾಚರಣೆ ನಡೆಸಲಾಯಿತು ಎಂದು ಧರಣಿ ನಿರತ ಸಿಬ್ಬಂದಿ ತಿಳಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ಸಂಘದ ಅಧ್ಯಕ್ಷ ಎ.ಅಮೃತ್ರಾಜ್ ಕರಾಳ ದಿನಾಚರಣೆಯಲ್ಲಿ ಪಾಲಿಕೆ ಅಧಿಕಾರಿಗಳು ಮತ್ತು ನೌಕರರು ಕಪ್ಪುಪಟ್ಟಿ ಧರಿಸಿ ಮುಷ್ಕರ ನಡೆಸಿದ್ದೇವೆ. ಪ್ರಮುಖವಾಗಿ ಬಿಬಿಎಂಪಿ ದಕ್ಷಿಣ ವಲಯದ ಉಪ ಆಯುಕ್ತೆ ಲಕ್ಷ್ಮೀ ದೇವಿ ಅವರನ್ನು ದಿರ್ಢೀ ವರ್ಗಾವಣೆ ಮಾಡಿ, ಈ ಕೆಎಎಸ್ ಅಲ್ಲದ ಸಮಾಜ ಕಲ್ಯಾಣ ಇಲಾಖೆಯ ಸಹಾಯ ನಿರ್ದೇಶಕ ರಾಜಶೇಖರ ಅವರನ್ನು ಈ ಸ್ಥಳಕ್ಕೆ ನಿಯೋಜಿಸಿರುವುದು ಸರಿಯಾದ ಕ್ರಮವಲ್ಲ ಎಂದರು.

ಅದೇ ರೀತಿ, ಪಾಲಿಕೆಯಲ್ಲಿ ಉತ್ತಮ ಸೇವೆ ಸಲ್ಲಿಸಿರುವ ಅಕಾರಿಗಳಿಗೆ ಕೆಂಪೇಗೌಡ ಪ್ರಶಸ್ತಿ ನೀಡಬೇಕು. ಪಾಲಿಕೆಯಲ್ಲಿ 5,219 ಹುದ್ದೆಗಳ ಮಂಜೂರಾತಿಗೆ 4 ವರ್ಷಗಳಿಂದ ವಿಳಂಬ ಮಾಡಲಾಗುತ್ತಿದೆ.

ಕೂಡಲೇ, ಹುದ್ದೆಗಳ ಭರ್ತಿಗೆ ಸರ್ಕಾರ ಆದೇಶ ಹೊರಡಿಸಬೇಕು. 707 ಹುದ್ದೆಗಳನ್ನು ನೇರ ನೇಮಕಾತಿಗಾಗಿ ಈಗಾಗಲೇ ಸರ್ಕಾರ ಅನುಮೋದನೆ ನೀಡಿದೆ. ಆದರೂ, ಈವರೆಗೆ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ನಾಳಿದ್ದು ಮತ್ತೆ ಪ್ರತಿಭಟನೆ: ಬಿಬಿಎಂಪಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಕಾರಿಗಳಿಗೆ ಹಾಗೂ ನೌಕರರಿಗೆ ಆರೋಗ್ಯ ಕಾರ್ಡ್ ನೀಡಿಕೆ ಮತ್ತು ಪಾಲಿಕೆಯ ಹಲವು ಹುದ್ದೆಗಳಿಗೆ ಅನ್ಯ ಇಲಾಖೆಗಳ ಅಧಿಕಾರಿಗಳ ನಿಯೋಜಿಸುವ ಪ್ರಕ್ರಿಯೆ ರದ್ದು ಸೇರಿ 18 ಬೇಡಿಕೆಗಳ ಈಡೇರಿಕೆಗಾಗಿ ಬುಧವಾರ (ನ.2) ಪಾಲಿಕೆ ಕೇಂದ್ರ ಕಚೇರಿಯಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ.

ಕರ್ನಾಟಕ ರತ್ನ ಮೂಲಕವೂ ಹಲವು ದಾಖಲೆ ಬರೆಯಲಿದ್ದಾರೆ ಅಪ್ಪು

ಪಾಲಿಕೆಯ ವೃಂದ ಮತ್ತು ನೇಮಕಾತಿ (ಸಿ ಆಂಡ್ ಆರ್) ನಿಯಮಾವಳಿ ಅಧಿಸೂಚನೆಯಂತೆ ಗ್ರೂಪ್ ಎ ಮುಂಬಡ್ತಿ ಪ್ರಾಧಿಕಾರವನ್ನು ಸರ್ಕಾರವು ನಗರಾಭಿವೃದ್ಧಿ ಇಲಾಖೆಗೆ ವಹಿಸಿದೆ. ಇದರಿಂದ ಹಲವು ಅಧಿಕಾರಿಗಳು ಮುಂಬಡ್ತಿಯಿಂದ ವಂಚಿತರಾಗಲಿದ್ದಾರೆ.

ಇಂಜಿನಿಯರ್ಗಳಿಗೆ ಘನತ್ಯಾಜ್ಯ ವಿಲೇವಾರಿ ಕೆಲಸದಿಂದ ವಿಮುಕ್ತಿಗೊಳಿಸಿ ಕಸ ವಿಲೇವಾರಿ ವ್ಯವಸ್ಥೆಗೆ ಪ್ರತ್ಯೇಕ ಪರಿಸರ ಅಭಿಯಂತರ ಮತ್ತು ಆರೋಗ್ಯ ಪರಿವೀಕ್ಷಕರನ್ನು ನೇಮಿಸಬೇಕು. ಎರವಲು ಸೇವೆ ಮೇರೆಗೆ ಬೇರೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಕಾರಿಗಳನ್ನು ಮಾತೃ ಇಲಾಖೆಗೆ ಹಿಂದಿರುಗಿಸಬೇಕು.

ಕಾನೂನು ಬಾಹಿರವಾಗಿ ನೇಮಿಸಿರುವ ಮಾರ್ಷಲ್ಗಳನ್ನು ಹಿಂಪಡೆಯಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ಆಧಾರದ ಮೇಲೆ ಕೆಲಸ ಮಾಡುತ್ತಿರುವ ನೌಕರರನ್ನು ಸಕ್ರಮಗೊಳಿಸಬೇಕು. ಈ ಎಲ್ಲ ಬೇಡಿಕೆಗಳನ್ನು ನ್ಯಾಯಯುತವಾಗಿ ಈಡೇರಿಸುವಂತೆ ಸರ್ಕಾರದ ಗಮನ ಸೆಳೆಯಲು ಈ ಪ್ರತಿಭಟನೆ ನಡೆಸಲಾಗುವುದು ಎಂದು ಎ.ಅಮೃತರಾಜ್ ವಿವರಿಸಿದರು.

Articles You Might Like

Share This Article