ವಾಷಿಂಗ್‍ಟನ್,ಫೆ.4- ಅಮೇರಿಕಾದಲ್ಲಿ ಚೀನಾದ ಮತ್ತೊಂದು ಬೇಹುಗಾರಿಕೆಯ ಬಲೂನ್ ಹಾರಾಟದ ಬೆನ್ನಲ್ಲೇ ಉಭಯ ರಾಷ್ಟ್ರಗಳ ನಡುವಣ ಸಂಬಂದ ಮತ್ತಷ್ಟು ಹಳಸಲಾರಂಭಿಸಿದ್ದು, ಅಮೇರಿಕಾದ ಕಾರ್ಯದರ್ಶಿ ಚೀನಾ ಪ್ರವಾಸವನ್ನು ಮುಂದೂಡಿದ್ದಾರೆ.
ಪೆಂಟಗಾನ್‍ನ ಪತ್ರಿಕಾ ಕಾರ್ಯದಶಿ ಬ್ರೀಗೆಡ್ ಜನರಲ್ ಪಟ್ ರೈಡರ್ ಹೇಳಿಕೆ ಈ ಬಗ್ಗೆ ನೀಡಿದ್ದು , ಲಾಟಿನ್ ಅಮೇರಿಕಾದಲ್ಲಿ ಮತ್ತೊಂದು ಬಲೂನ್ ಸಂಚರಿಸಿರುವ ವರದಿಗಳನ್ನು ನೋಡಿದ್ದು, ಅದು ಚೀನಾದ ಬಲೂನ್ ಎಂಬ ಅನುಮಾನವಿದೆ. ಸದ್ಯಕ್ಕೆ ತಮ್ಮ ಬಳಿ ಹೆಚ್ಚಿನ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ.
ಏಕಕಾಲಕ್ಕೆ 3 ಬಸ್‍ಗಳನ್ನು ಸಾಗಿಸಬಹುದಾದಷ್ಟು ದೊಡ್ಡದಾಗಿರುವ ಈ ಬಲೂನ್ ಅಮೇರಿಕಾದ ಆಕಾಶ ಮಾರ್ಗದಲ್ಲಿ ಕಾಣಿಸಿಕೊಂಡಿದೆ. ಮೇಲ್ನೂಟಕ್ಕೆ ಕರಾರುವಕ್ಕಾಗಿ ಯಾವ ದೇಶಕ್ಕೆ ಸೇರಿದ ಬಲೂನ್ ಎಂದು ಖಚಿತವಾಗಿಲ್ಲವಾದರೂ ಅಮೇರಿಕಾದ ನೆತ್ತಿಯ ಮೇಲೆ ಹಾರಾಡುತ್ತಿವೆ ಎಂಬ ಆಕ್ರೋಶ ವರದಿಯಾಗಿವೆ.
ಇದು ಮಾಲಿನ್ಯಗೊಂಡ ದೇಶದ ಹುನ್ನಾರ. ಮೋಟೋನ ಭಾಗದಲ್ಲಿ ಎರಡು ದಿನಗಳ ಹಿಂದೆ ಬಲೂನ್ ಕಾಣಿಸಿಕೊಂಡಿತ್ತು. ಅಮೇರಿಕಾದ ಪರಮಾಣು ಶಕ್ತಿ ಕೇಂದ್ರಗಳ ಮೇಲೆ ನಿಗಾ ಇಡಲು ಮತ್ತು ಮಾಹಿತಿ ಕಲೆ ಹಾಕಲು ಈ ಬಲೂನ್‍ಗಳು ಬೇಹುಗಾರಿಕೆ ನಡೆಸುತ್ತಿವೆ ಎಂದು ಹೇಳಲಾಗಿದೆ.
ಮರಣದಂಡನೆ ಆರೋಪದಿಂದ ಬಚಾವಾಗಿ ಕೊಲೆ ಕೇಸ್‍ನಲ್ಲಿ ಸಿಕ್ಕಿಬಿದ್ದ..!
ಅಮೇರಿಕಾದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬಿಕ್ಲೇನ್ ಶುಕ್ರವಾರ ರಾತ್ರಿ ಮೊದಲ ಬಾರಿಗೆ ಚೀನಾದೊಂದಿಗಿನ ರಾಜತಾಂತ್ರಿಕ ಮಾತುಕತೆ ಸಲುವಾಗಿ ಪ್ರಯಾಣ ಮಾಡಬೇಕಿತ್ತು. ಆದರೆ ಬಲೂನ್‍ಗಳ ಹಾರಾಟ ಈ ಸಂಬಂದವನ್ನು ಹದಗೆಡಿಸಿದೆ.
ಹೀಗಾಗಿ ಅವರು ತಮ್ಮ ಪ್ರವಾಸವನ್ನು ಅನಿರ್ದಿಷ್ಟ ಅವಧಿಯವರೆಗೆ ಮುಂದೂಡಿದ್ದಾರೆ. ಚೀನಾ ಭಾಗದಿಂದ ಈ ಕುರಿತಂತೆ ಯಾವುದೇ ಆಧಿಕೃತ ಹೇಳಿಕೆ ವರದಿಯಾಗಿಲ್ಲ.
ಮಗಳೊಂದಿಗೆ ಗೂಡ್ಸ್ ರೈಲಿಗೆ ತಲೆ ಕೊಟ್ಟ ತಾಯಿ
ಅಮೇರಿಕಾಕ್ಕೆ ಭೆಟಿ ನೀಡಿದ ಸೌತ್ ಕೊರಿಯಾದ ವಿದೇಶಾಂಗ ಸಚಿವ ಪಾರ್ಕ್ ಜಿಂಗ್ ಜೊತೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಕ್ಲೇನ್, ಬೇಹುಗಾರಿಕೆ ಬಲೂನ್‍ಗಳ ಹಾರಾಟ ಅಮೆರಿಕಾದ ಸಾರ್ವಭೌಮತ್ವ ಮತ್ತು ಅಂತಾರಾಷ್ಟ್ರೀಯ ಕಾನೂನುಗಳ ಸ್ಪಷ್ಟ ಉಲ್ಲಂಘನೆಯಾಗಿದ್ದು ಸ್ವೀಕಾರಾರ್ಹವಲ್ಲ. ಯಾವುದೇ ದೇಶ ಈ ರೀತಿಯ ಬಾಹ್ಯಕಾಶ ನಿಯಮಗಳ ಉಲ್ಲಂಘನೆಗೆ ಕ್ಷಿಪ್ರ ಪ್ರತಿಕ್ರಿಯೆ ನೀಡಲಿದೆ. ಮತ್ತೊಂದು ತುದಿಯಲ್ಲಿರುವ ಚೀನಾ ಯಾವ ರೀತಿ ಪ್ರತಿಕ್ರಿಯೆ ನೀಡಬಹುದು ಎಂಬ ಅಂದಾಜು ನನಗಿದೆ ಎಂದು ಹೇಳಿದ್ದಾರೆ.
ಚೀನಾ ಇದೇ ರೀತಿ ಅಮೆರಿಕಾದ ನೆಲದ ಮೇಲೆ ಬೇಹುಗಾರಿಕೆ ಬಲೂನ್‍ಗಳನ್ನು ಹಾರಿಸುವ ಪ್ರವೃತ್ತಿಯನ್ನು ಮುಂದುವರಿಸಿದರೆ. ಅದು ಸಂಪೂರ್ಣ ಬೇಜವಬ್ದಾರಿಯಿಂದ ಕೂಡಿದ ನಡೆಯಾಗಿದೆ ಮತ್ತು ಸ್ವೀಕಾರಾರ್ಹವಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
Blinken, postpones, China, trip, spy, balloon, incident,