ಮುಂದಿನ ವಾರ ಭಾರತಕ್ಕೆ ಭೇಟಿ ನೀಡಲಿದ್ದಾರೆ ಬ್ಲಿಂಕೆನ್

Social Share

ವಾಷಿಂಗ್ಟನ್,ಫೆ.24- ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಅವರು ಮುಂದಿನ ವಾರ ಭಾರತಕ್ಕೆ ಆಗಮಿಸುತ್ತಿದ್ದಾರೆ.

ಈ ಸಂದರ್ಭದಲ್ಲಿ ಅಮೆರಿಕ-ಭಾರತದ ಬಾಂಧವ್ಯ ವೃದ್ಧಿ ಕುರಿತಂತೆ ಇಲ್ಲಿನ ಹಿರಿಯ ಅಕಾರಿಗಳೊಂದಿಗೆ ಅವರು ಮಹತ್ವದ ಮಾತುಕತೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಮಿಳುನಾಡು ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟು ವಿವಾದ ಸೃಷ್ಟಿಸಿದ ಮಾಜಿ ಯೋಧ

ಮಾ.1 ರಂದು ಭಾರತಕ್ಕೆ ಆಗಮಿಸುವ ಬ್ಲಿಂಕೆನ್ ಅವರು ಜಿ20 ವಿದೇಶಾಂಗ ಸಚಿವರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ನಂತರ ಅವರು ಆಹಾರ ಮತ್ತು ಇಂಧನ ಭದ್ರತೆ, ಸುಸ್ಥಿರ ಅಭಿವೃದ್ಧಿ, ಮಾದಕ ದ್ರವ್ಯ ವಿರೋ, ಜಾಗತಿಕ ಆರೋಗ್ಯ, ಮಾನವೀಯ ನೆರವು ಮತ್ತು ವಿಪತ್ತು ಪರಿಹಾರದ ಮೇಲೆ ಸಹಕಾರ ಕುರಿತಂತೆ ಮಹತ್ವದ ಮಾತುಕತೆ ನಡೆಸಲಿದ್ದಾರೆ.

ಇದರ ಜತೆಗೆ ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣದ ಬಗ್ಗೆಯೂ ಉಭಯ ರಾಷ್ಟ್ರಗಳ ಮುಖಂಡರು ಸಭೆ ನಡೆಸಲಿದ್ದಾರೆ ಹಾಗೂ ಭಾರತೀಯ ಸರ್ಕಾರಿ ಅಕಾರಿಗಳು ಮತ್ತು ನಾಗರಿಕ ಸಮಾಜವನ್ನು ಭೇಟಿ ಮಾಡಲಿದ್ದಾರೆ.

ಫೆ.28ರಂದು ಕಜಕಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ದೇಶಗಳಿಗೆ ಪ್ರಯಾಣ ಬೆಳೆಸಲಿರುವ ಬ್ಲಿಂಕೆನ್ ಅವರು ಅಲ್ಲಿಂದಲೆ ಮಾ.1ರಂದು ಭಾರತಕ್ಕೆ ಭೇಟಿ ನೀಡಿ ಮಾ.3 ರವರೆಗೆ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

#AntonyBlinken, #visit, #India, #Kazakhstan, #Uzbekistan, #nextweek,

Articles You Might Like

Share This Article