ಸಂಕಷ್ಟದಲ್ಲಿರುವ ಶ್ರೀಲಂಕಾ ನೆರವಿಗೆ ಭಾರತ ಬದ್ಧ ; ಜೈಶಂಕರ್

Social Share

ನವದೆಹಲಿ,ಮಾ.18-ಸಂಕಷ್ಟದಲ್ಲಿರುವ ನೆರೆಹೊರೆ ದೇಶಗಳ ನೆರವಿಗೆ ಭಾರತ ಸದಾ ಮುಂದಿರುತ್ತದೆ ಎಂದು ವಿದೇಶಾಂಗ ಸಚಿವ ಜೈ ಶಂಕರ್ ಅಭಿಪ್ರಾಯಪಟ್ಟಿದ್ದಾರೆ.

ನವದೆಹಲಿಯಲ್ಲಿ ನಡೆದ ದಿ ಎಕ್ಸಿಬಿಷನ್ ಆಫ್ ಶ್ರೀಲಂಕಾದ ಆರ್ಕಿಟೆಕ್ಟ್ ‘ಜೆಫ್ರಿ ಬಾವಾ’ದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಕ್ತವು ನೀರಿಗಿಂತ ದಪ್ಪಗಿರುತ್ತದೆ ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸುತ್ತಿರುವ ಶ್ರೀಲಂಕಾಕ್ಕೆ ನಾವು ಎಲ್ಲಾ ರೀತಿಯ ಸಹಕಾರ ನೀಡಲು ಸಿದ್ದರಿದ್ದೇವೆ ಎಂದು ಜೈಶಂಕರ್ ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದಾರೆ.

ಭಾರತವು ತನ್ನ ನೈಬರ್‍ಹುಡ್ ಫಸ್ಟ್ ನೀತಿಯಡಿಯಲ್ಲಿ, ಸಾಲದ ಸುಳಿಯಲ್ಲಿ ಸಿಲುಕಿರುವ ಶ್ರೀಲಂಕಾಕ್ಕೆ ಸಹಾಯ ಮಾಡಲು ಯಾವಾಗಲೂ ಸಿದ್ದ ಮತ್ತು ಇತ್ತೀಚಿನ ನಿದರ್ಶನದಲ್ಲಿ, ನವದೆಹಲಿ ಮಾರ್ಚ್ 16 ರಂದು ಕಲ್ಮುನೈನಲ್ಲಿ ಪಡಿತರವನ್ನು ವಿತರಿಸಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಒಂದೇ ಮಳೆಗೆ ಮುಳುಗಿದ ದಶಪಥ ಹೆದ್ದಾರಿ, ಸರಣಿ ಅಪಘಾತ, ರೊಚ್ಚಿಗೆದ್ದ ಜನ

ರಕ್ತವು ನೀರಿಗಿಂತ ದಪ್ಪವಾಗಿರುತ್ತದೆ ಎಂಬ ಮಾತನ್ನು ನಾನು ಅವರಿಗೆ ನೆನಪಿಸಿದೆ. ನಮಗೆ ಕಷ್ಟದ ಕ್ಷಣದಲ್ಲಿ ಅದು ಸಹಜವಾಗಿತ್ತು. ಈ ಕಷ್ಟದ ಸಮಯದಲ್ಲಿ ಶ್ರೀಲಂಕಾದ ಪರವಾಗಿ ನಿಲ್ಲಲು ನಮ್ಮ ಸಂಪನ್ಮೂಲಗಳು, ಸಾಮಥ್ರ್ಯಗಳು ಮತ್ತು ಪ್ರಯತ್ನಗಳಲ್ಲಿ ನಾವು ಏನು ಮಾಡಬಹುದು ಎಂಬುದನ್ನು ನೋಡಬೇಕು ಎಂದು ಅವರು ಹೇಳಿದ್ದಾರೆ.

ಸಿದ್ದರಾಮಯ್ಯ ದಮ್ಮು, ತಾಕತ್ತಿಗೆ ವರ್ತೂರು ಪ್ರಕಾಶ್ ಸವಾಲ್

ಶ್ರೀಲಂಕಾದಲ್ಲಿನ ಆರ್ಥಿಕ ಬಿಕ್ಕಟ್ಟಿನ ಕುರಿತು ಮಾತನಾಡಿದ ಅವರು, ಭಾರತವು ಮುಂದೆ ಹೆಜ್ಜೆ ಇಡುವುದು ತುಂಬಾ ಸಹಜ. ರಕ್ತವು ನೀರಿಗಿಂತ ದಪ್ಪವಾಗಿರುತ್ತದೆ. ಕಷ್ಟದ ಕ್ಷಣದಲ್ಲಿ ಅದು ಸಹಜ. ನೀವು ಈ ಸವಾಲನ್ನು ಎದುರಿಸುತ್ತೀರಿ ಎಂದು ನಾನು ಯಾವಾಗಲೂ ನಂಬಿದ್ದೇನೆ. ಆದರೆ ನಿಮ್ಮೊಂದಿಗೆ ನಿಜವಾದ ಸ್ನೇಹಿತರಾದ ಭಾರತೀಯರು ಇರುತ್ತಾರೆ ಎನ್ನುವುದನ್ನು ಮರೆಯಬೇಡಿ ಎಂದಿದ್ದಾರೆ.

Blood, ,thicker, than, water, EAM, Jaishankar, India, Sri Lanka, relations,

Articles You Might Like

Share This Article