ಡ್ಯಾನ್ಸ್ ಬಾರ್ ಮೇಲೆ ದಾಳಿ : 53 ಮಂದಿ ಬಂಧನ

ಬೆಂಗಳೂರು,ಜೂ.29- ಕಾನೂನು ನಿಯಮಗಳನ್ನು ಉಲ್ಲಂಘಿಸಿ ನಡೆಸುತ್ತಿದ್ದ ಡ್ಯಾನ್ಸ್ ಬಾರ್ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿ 53 ಮಂದಿಯನ್ನು ಬಂಧಿಸಿ ಒಂದು ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ. ಬಾರ್ ಮ್ಯಾನೇಜರ್ ದಿನೇಶ್(42), ಕ್ಯಾಶಿಯರ್ ದಿನೇಶ್‍ಕುಮಾರ್(41), ರಿಯಾಜ್‍ವುದ್ದೀನ್(52), ಪ್ರಕಾಶ್ ದತ್ ಜೋಷಿ(23), ಹೆಗ್ಯಾರಾಜ್ ಜೋಷಿ(23) ಸೇರಿದಂತೆ 48 ಮಂದಿ ಗಿರಾಕಿಗಳನ್ನು ಬಂಧಿಸಿದ್ದಾರೆ.

ದಾಳಿ ಸಂದರ್ಭದಲ್ಲಿ ಸ್ಥಳೀಯ ಹಾಗೂ ಹೊರರಾಜ್ಯದ 74 ಮಹಿಳೆಯರನ್ನು ಸಿಸಿಬಿ ಪೊಲೀಸರು ರಕ್ಷಿಸಿದ್ದಾರೆ.  ಜೀವನ ಭೀಮಾನಗರ ವ್ಯಾಪ್ತಿಯ ದೊಮ್ಮಲೂರು ರಿಂಗ್‍ರಸ್ತೆಯಲ್ಲಿರುವ ಚ್ಫೆಫ್ ಇನ್ ರೆಜೆನ್ಸಿ ಎಂಬ ಡಾನ್ಸ್ ಬಾರ್‍ನಲ್ಲಿ ಕಾನೂನು ನಿಯಮ ಉಲ್ಲಂಘಿಸಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದಾರೆ.  ಈ ಸಂಬಂಧ ಜೀವನ್‍ಭೀಮಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.