ಬ್ಲೂ ಆ್ಯಪ್ ಬಳಸಿ ಬ್ಲಾಕ್‍ಮೇಲ್ ಮಾಡಿದ್ದ ಮಹಿಳೆ ಸೇರಿ ಇಬ್ಬರ ಬಂಧನ

Social Share

ಬೆಂಗಳೂರು, ಜ. 7- ಬ್ಲೂ ಆ್ಯಪ್ ಮೂಲಕ ತಾನು ಯುವತಿಯೆಂದು ಪರಿಚಯಿಸಿಕೊಂಡು ವ್ಯಕ್ತಿಯೊಬ್ಬರಿಗೆ ಬ್ಲಾಕ್ ಮೇಲ್ ಮಾಡಿ ಹಣ, ಆಭರಣವನ್ನು ಸುಲಿಗೆ ಮಾಡಿ ಪರಾರಿಯಾಗಿದ್ದ ಆರೋಪಿ ಹಾಗೂ ಆತನ ಸ್ನೇಹಿತೆಯನ್ನು ಸೋಲದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಪ್ರಮುಖ ಆರೋಪಿ ಸುನೀಲ್ ಕುಮಾರ್ ಮತ್ತು ಈತನ ಸ್ನೇಹಿತೆ ಲಕ್ಷ್ಮೀಪ್ರಿಯ ಬಂಧಿತರು. ಇವರಿಂದ 2.2 ಲಕ್ಷ ರೂ. ಮೌಲ್ಯದ 45 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ಮೊಬೈಲ್, ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿ ಸುನೀಲ್ ಕುಮಾರ್ ಬ್ಲೂ ಆ್ಯಪ್ ನಲ್ಲಿ ತಾನು ಹುಡುಗಿಯೆಂದು ಪರಿಚಯಿಸಿಕೊಂಡು ಯುವಕರಿಗೆ ಸಂದೇಶವನ್ನು ಕಳುಹಿಸುತ್ತಿದ್ದನು. ಈತನ ಮಾತಿನ ಮೋಡಿಗೆ ಮರುಳಾಗಿ ತಮ್ಮನ್ನು ಭೇಟಿಯಾಗಬೇಕೆಂದಾಗ ತನಗೆ ಸ್ವಲ್ಪ ಕೆಲಸವಿದೆ, ತನಗೆ ಪರಿಚಯವಿರುವ ಹುಡುಗಿಯನ್ನು ಕಳುಹಿಸುವುದಾಗಿ ಹೇಳಿದ್ದಾನೆ.

ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದ್ದ LET ಅಂಗ ಸಂಸ್ಥೆ PAFF ನಿಷೇಧ

ಬ್ಲೂ ಆ್ಯಪ್ ಉಪಯೋಗಿಸುತ್ತಿದ್ದ ವ್ಯಕ್ತಿಯೊಬ್ಬರ ಮನೆಗೆ ಬಂದ ಲಕ್ಷ್ಮೀಪ್ರಿಯ ಜೊತೆ ಮಾತನಾಡಿ, ವಿಡಿಯೋ ಮಾಡಿಕೊಂಡು ಹೋದ ಹತ್ತೇ ನಿಮಿಷದಲ್ಲಿ ಆಕೆ ಮತ್ತೊಬ್ಬನೊಂದಿಗೆ ಬಂದು ವ್ಯಕ್ತಿಗೆ ಎದುರಿಸಿ ಕೈಗಳಿಂದ ಮುಖಕ್ಕೆ ಹೊಡೆದು ಮನೆಯ ಬೀರುವಿನಲ್ಲಿದ್ದ 35 ಗ್ರಾಂ ನೆಕ್ಲೆಸ್, 10 ಗ್ರಾಂ ಓಲೆ ಹಾಗೂ ಹಣವನ್ನು ಕಿತ್ತುಕೊಂಡು ಇಬ್ಬರು ಪರಾರಿಯಾಗಿದ್ದರು.

ಈ ಬಗ್ಗೆ ಪಿರ್ಯಾದಿ ಸೋಲದೇವನಹಳ್ಳಿ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಮಹಿಳೆ ಸೇರಿದಂತೆ ಇಬ್ಬರನ್ನು ಬಂಧಿಸಿ ಆಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.

ಸ್ಯಾಂಟ್ರೋ ರವಿ ಬಂಧನಕ್ಕೆ ತೀವ್ರಗೊಂಡ ಶೋಧ

ಯಶವಂತಪುರ ಉಪವಿಭಾಗದ ಎಸಿಪಿ ಅರುಣ್ ನಾಗೇಗೌಡ ಅವರ ಮಾರ್ಗದರ್ಶನದಲ್ಲಿ ಇನ್ಸ್‍ಪೆಕ್ಟರ್ ಗೌತಮ್ ಅವರನ್ನೊಳಗೊಂಡ ತಂಡ ಈ ಕಾರ್ಯಾಚರಣೆ ಕೈಗೊಂಡಿತ್ತು.

Blue App, blackmailed, woman, friend, arrested,

Articles You Might Like

Share This Article