ಬೆಂಗಳೂರು,ಜ.5-ನಗರದಲ್ಲಿ ಕೊರೊನಾ ಸ್ಪೋಟವಾಗಿರುವುದು ಮೆಟ್ರೋ ರೈಲು ಸಂಚಾರದ ಮೇಲೂ ಪರಿಣಾಮ ಬೀರುವ ಸಾಧ್ಯತೆಗಳಿವೆ.ಮೆಟ್ರೋ ಸಂಚಾರಕ್ಕೆ ಹೊಸ ಮಾರ್ಗಸೂಚಿ ರಚನೆಯಾಗಲಿದ್ದು, ಇಂದು ಸಂಜೆ ಮೆಟ್ರೋ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ನೇತೃತ್ವದಲ್ಲಿ ಅಕಾರಿಗಳ ಸಭೆ ನಡೆಯಲಿದೆ.
ಪ್ರತಿನಿತ್ಯ ಮೆಟ್ರೋ ರೈಲಿನಲ್ಲಿ 1900 ಪ್ರಯಾಣಿಕರು ಪ್ರಯಾಣಿಸಲು ಅವಕಾಶವಿದ್ದು, ಇದರ ಸಂಖ್ಯೆಯನ್ನು 900ಕ್ಕೆ ಕಡಿತಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ. ಇದರ ಜೊತೆಗೆ ಟೋಕನ್ ಪಡೆದು ಮೆಟ್ರೋ ರೈಲು ಸಂಚಾರ ಮಾಡುವ ಅವಕಾಶ ಕೈ ಬಿಟ್ಟು ಕೇವಲ ಸ್ಮಾರ್ಟ್ ಕಾರ್ಡ್ ಹೊಂದಿರುವವರಿಗೆ ಮಾತ್ರ ಮೆಟ್ರೋ ರೈಲು ಸಂಚಾರಕ್ಕೆ ಅವಕಾಶ ನೀಡುವ ಸಾಧ್ಯತೆಗಳಿವೆ.
ಸ್ಮಾರ್ಟ್ ಕಾರ್ಡ್ ಹೊಂದಿರುವ ಪ್ರಯಾಣಿಕರು ಕಡ್ಡಾಯವಾಗಿ 2 ಡೋಸ್ ಲಸಿಕೆ ಪಡೆದುಕೊಂಡಿರಬೇಕು ಎಂಬ ನಿಯಮವೂ ಜಾರಿಗೆ ಬರಲಿದೆ. ವಿಕೇಂಡ್ ಕಫ್ರ್ಯೂ ಸಂದರ್ಭದಲ್ಲಿ ಮೆಟ್ರೋ ರೈಲು ಸಂಚಾರ ಆರಂಭಿಸಬೇಕೆ ಬೇಡವೇ ಎಂಬುದನ್ನು ಇಂದು ಸಂಜೆ ನಡೆಯಲಿರುವ ಸಭೆಯಲ್ಲಿ ಅಂತಿಮಗೊಳಿಸುವ ಸಾಧ್ಯತೆಗಳಿವೆ ಎಂದು ಮೆಟ್ರೋ ಮೂಲಗಳು ತಿಳಿಸಿವೆ.
