ಬೆಂಗಳೂರು,ಫೆ.25- ನಿರ್ಮಾಣ ಹಂತದ ಪಿಲ್ಲರ್ ಕುಸಿದು ತಾಯಿ-ಮಗು ಬಲಿಯಾಗಿದ್ದರೂ ಮೆಟ್ರೋ ಮಾತ್ರ ಬುದ್ದಿ ಕಲಿತಂತೆ ಕಾಣುತ್ತಿಲ್ಲ.ನಮ್ಮ ಮೆಟ್ರೋ ಸಂಸ್ಥೆಯ ಮತ್ತೊಮ್ಮೆ ಎಡವಟ್ಟಿನಿಂದ ಸಂಭವಿಸಬೇಕಿದ್ದ ದುರಂತ ಕೂದಲೆಳೆ ಅಂತರದಿಂದ ಪಾರಾಗಿದೆ.
ಯಶವಂತಪುರದ ಸಮೀಪದ ಸೋಪ್ ಕಾರ್ಖಾನೆ ಸಮೀಪದ ಮೆಟ್ರೋ ನಿಲ್ದಾಣದ ಮುಂಭಾಗ ಚಲಿಸುತ್ತಿದ್ದ ಕಾರಿನ ಮೇಲೆ ಬಾರಿಪ್ರಮಾಣದ ಕಬ್ಬಿಣದ ತುಂಡು ಬಿದ್ದಿದೆ.
ಮೆಟ್ರೋ ನಿಲ್ದಾಣದ ಮೇಲ್ಬಾಗದಿಂದ ಬಿದ್ದ ಕಬ್ಬಿಣ ಬಿದ್ದ ರಭಸಕ್ಕೆ ಕಾರು ಜಖಂಗೊಂಡಿದೆ. ಒಂದು ವೇಳೆ ಕಬ್ಬಿಣ ಬೈಕ್ ಸವಾರನ ಮೇಲೆ ಬಿದ್ದಿದರೆ ಸ್ಥಳದಲ್ಲೇ ಪ್ರಾಣ ಪಕ್ಷಿ ಹಾರಿಹೋಗುತ್ತಿತ್ತು.
ಒಂದೇ ಕುಟುಂಬದ ನಾಲ್ವರ ಕಗ್ಗೊಲೆ, ಬೆಚ್ಚಿಬಿದ್ದ ಭಟ್ಕಳ
ಅದೃಷ್ಟವಶಾತ್ ಕಬ್ಬಿಣದ ರಾಡು ಕಾರಿನ ಮೇಲೆ ಬಿದ್ದಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮೆಟ್ರೋ ಸಿಬ್ಬಂದಿಗಳ ಬೇಜವಬ್ದಾರಿಯಿಂದ ಬೆಸತ್ತಿರುವ ಕಾರು ಮಾಲೀಕ ಇದೀಗ ಸುಬ್ರಹ್ಮಣ್ಯನಗರ ಪೊಲೀಸರಿಗೆ ದೂರು ನೀಡಿದ್ದಾರೆ.
ದೂರಿನಲ್ಲಿ ಮೆಟ್ರೋ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಹಾಗೂ ಕಬ್ಬಿಣದ ರಾಡು ಬಿದ್ದು ಹಾಳಾಗಿರುವ ಕಾರಿನ ನಷ್ಟವನ್ನು ಭರಿಸಿಕೊಡುವಂತೆ ಕಾರು ಮಾಲೀಕರು ದೂರಿನಲ್ಲಿ ಮನವಿ ಮಾಡಿಕೊಂಡಿದ್ದಾರೆ.
BMRCL, Namma Metro, Yashwantapur, Sandal Sofa Factory, car, crushed,