ಬಿಎಂಟಿಸಿಯಲ್ಲಿ ಡ್ಯೂಟಿ-ರಜೆಗೆ ಲಂಚ : 8 ಭ್ರಷ್ಟ ಅಧಿಕಾರಿಗಳ ಅಮಾನತು

Social Share

ಬೆಂಗಳೂರು, ಡಿ.13- ಬಿಎಂಟಿಸಿಯಲ್ಲಿ ಡ್ಯೂಟಿ, ರಜೆ ಬೇಕೆಂದರೆ ಚಾಲಕರು ಹಾಗೂ ನಿರ್ವಾಹಕರು ಅಧಿಕಾರಿಗಳ ಅಕೌಂಟ್ ತುಂಬಬೇಕಂತೆ. ಬಿಎಂಟಿಸಿ ಅಧಿಕಾರಿಗಳ ಅಕೌಂಟ್‍ನಲ್ಲಿ ಲಕ್ಷ ಲಕ್ಷ ಹಣ ಪತ್ತೆಯಾದ ಹಿನ್ನೆಲೆಯಲ್ಲಿ 8 ಭ್ರಷ್ಟ ಅಧಿಕಾರಿಗಳನ್ನು ಅಮಾನತ್ತು ಮಾಡಲಾಗಿದೆ.

ಫೋನ್ ಪೇ ಮತ್ತು ಗೂಗಲ್ ಪೇ ಮುಖಾಂತರ ಚಾಲಕರ ಹಾಗೂ ನಿರ್ವಾಹಕರಿಂದ ಹಣ ವರ್ಗಾವಣೆ ಆಗಿರುವುದು ಕಂಡು ಬಂದಿದ್ದು, ಮೇಲಾಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿರುವುದು ಬೆಳಕಿಗೆ ಬಂದಿದೆ. ವಾರಕ್ಕೆ 500 ರೂ. ತಿಂಗಳಿಗೆ 2000 ಹಣ ನೀಡುವಂತೆ ಬೇಡಿಕೆ ಇಡಲಾಗುತ್ತಿತ್ತು. ಇತ್ತೀಚೆಗೆ ಆರ್‍ಆರ್ ನಗರ ಡಿಪೋದ ಚಾಲಕ ಕಂ ನಿವಾರ್ಹಕ ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಡ್ಯೂಟಿ ನೀಡಲಿಲ್ಲ.

5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆ

ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಆತನ ಜೇಬಿನಲ್ಲಿ ದೊರೆತ ಡೆತ್‍ನೋಟ್‍ನಲ್ಲಿ ಲಂಚದ ಬಗ್ಗೆ ಬರೆದುಕೊಂಡಿದ್ದರು. ಅಂದು ಈ ಪ್ರಕರಣ ಕುರಿತಂತೆ ವ್ಯವಸ್ಥಾಪಕ ನಿರ್ದೇಶಕರು ತನಿಖೆಗೆ ಆದೇಶ ಮಾಡಿದ್ದರು.

ಇದರನ್ವಯ ನಿರಂತರವಾಗಿ ತನಿಖೆ ನಡೆಸಿದ ಭದ್ರತಾ ಮತ್ತು ಜಾಗೃತ ದಳದ ಅಧಿಕಾರಿಗಳು ಭ್ರಷ್ಟಾ ಅಧಿಕಾರಿಗಳಿಗೆ ಎಡಮುರಿ ಕಟ್ಟುತ್ತಿದ್ದಾರೆ.

ಸಸ್ಪೆಂಡ್ ಆದ ಅಧಿಕಾರಿಗಳು:
ಡಿಪೋ 8ರ ಕಾನ್‍ಸ್ಟೇಬಲ್ ರಮೇಶ್ ಕೆ., ಸಿಬ್ಬಂದಿ ಮೇಲ್ವಿಚಾರಕ ಮಹಮ್ಮದ್ ರಫಿ, ಕಿರಿಯ ಸಹಾಯಕ ಕೆ.ಎಸ್. ಚಂದನ್, ಕಾನ್‍ಸ್ಟೇಬಲ್ ಇಬ್ರಾಹಿಂ ಜಬಿವುಲ್ಲಾ, ಅಂಕಿ-ಅಂಶ ಸಹಾಯಕ ಶರವಣ ಹಾಗೂ ವಿಭಾಗೀಯ ಭದ್ರತಾ ಅೀಧಿಕ್ಷಕ ಶ್ರವಣ್ ಕುಮಾರ್ ಸಾತಪತಿ, ಚಾಲಕ ಗೋವರ್ಧನ್, ಸಹಾಯಕ ಸಂಚಾರ ಅಕ್ಷಕಿ ಪಂಕಜಾ, ಹಣ ಪಡೆದ ಆರೋಪದ ಮೇಲೆ ಅಮಾನತ್ತಾದ ಅಧಿಕಾರಿಗಳು ಎಂದು ತಿಳಿದುಬಂದಿದೆ.

ಕಳ್ಳನ ಮೇಲೆ ಗುಂಡು ಹಾರಿಸಿದ ಮನೆ ಮಾಲೀಕ

ವರ್ಗಾವಣೆಯಾದ ಅಧಿಕಾರಿಗಳು: ಫೋನ್ ಪೇ ಮತ್ತು ಗೂಗಲ್ ಪೇ ಮೂಲಕ ಹಣ ಪಡೆದ ಆರೋಪದ ಹಿನ್ನೆಲೆಯಲ್ಲಿ ಚಂದ್ರಶೇಖರ್ ಅವರನ್ನು ಕಲಬುರಗಿ ಕಲ್ಯಾಣ ಕರ್ನಾಟಕ ಸಾರಿಗೆ ವಿಭಾಗಗಕ್ಕೆ ಹಾಗೂ ಜಗದೀಶ್ ಅವರನ್ನು ರಾಮನಗರ ಕೆಎಸ್‍ಆರ್‍ಟಿಸಿ ವಿಭಾಗಗಕ್ಕೆ ವರ್ಗಾವಣೆ ಮಾಡಲಾಗಿದೆ.

BMTC, 8 corrupt, officers, Suspension,

Articles You Might Like

Share This Article