ಬಿಎಂಟಿಸಿಯ ಮತ್ತೊಂದು ಬ್ರಹ್ಮಾಂಡ ಭ್ರಷ್ಟಾಚಾರ ಬಯಲಿಗೆ

Social Share

ಬೆಂಗಳೂರು,ಫೆ.6- ಬಿಎಂಟಿಸಿ ಅಧಿಕಾರಿಗಳ ಮತ್ತೊಂದು ಬ್ರಹ್ಮಾಂಡ ಭ್ರಷ್ಟಾಚಾರ ಬಯಲಿಗೆ ಬಂದಿದೆ. ಬೇಲಿಯೇ ಎದ್ದು ಹೊಲ ಮೇಯ್ದಂತೆ ಅಧಿಕಾರಿಗಳೇ ನಿಗಮದ ಗುಜರಿ ವಸ್ತುಗಳ ಮಾರಾಟದಲ್ಲಿ ಭಾರಿ ಅಕ್ರಮ ನಡೆಸಿರುವುದು ಬೆಳಕಿಗೆ ಬಂದಿದೆ.

ಬಿಎಂಟಿಸಿಯ ಕಂಡಕ್ಟರ್, ಡ್ರೈವರ್‍ಗಳು ಸಣ್ಣ ತಪ್ಪು ಮಾಡಿದರೂ ಶಿಕ್ಷಿಸುವ ಅಧಿಕಾರಿಗಳೇ ಈಗ ತಪ್ಪು ಮಾಡಿದ್ದು ಅವರ ಮೇಲೆ ಯಾವುದೇ ಕ್ರಮ ಕೈಗೊಳ್ಳದೆ ಕೇವಲ ನೋಟೀಸ್ ನೀಡಿರುವುದು ಯಾವ ಪುರಷಾರ್ಥಕ್ಕೆ ಎಂಬ ಪ್ರಶ್ನೆ ಎದುರಾಗಿದೆ.

ನಿಗಮದಲ್ಲಿ ಗುಜರಿ ವಸ್ತುಗಳ ಮಾರಾಟದ ವೇಳೆ ವೀಡಿಯೋ ಚಿತ್ರೀಕರಣ ಕಡ್ಡಾಯ. ಆದ್ರೆ ಗುಜರಿ ವಸ್ತುಗಳ ತೂಕದ ವೇಳೆ ಅರ್ಧ ವೀಡಿಯೋ ಚಿತ್ರೀಕರಣ ಮಾಡಿರೋ ಅಧಿಕಾರಿಗಳು ಸಿ.ಸಿ.ಕ್ಯಾಮರಾಗಳನ್ನು ಆಫ್ ಮಾಡಿ ಲಕ್ಷಾಂತರ ಮೌಲ್ಯದ ಗುಜರಿ ವಸ್ತು ಕಳುವು ಮಾಡಿರುವ ಆರೋಪ ಕೇಳಿ ಬಂದಿದೆ.

ಬೃಹತ್ ಪ್ರತಿಭಟನೆಯ ಎಚ್ಚರಿಕೆ ಕೊಟ್ಟ ಗ್ರಾ.ಪಂ. ನೌಕರರ ಸಂಘ

ಹಳೆ ಕಬ್ಬಿಣ,ತಾಮ್ರ,ಯರಕ ಮಾರಾಟದ ವೇಳೆ ತೂಕದಲ್ಲಿ ಗೋಲ್ಮಾಲ್ ಮಾಡಿರೋ ಭದ್ರತಾ ಜಾಗೃತ ದಳ ವಿಭಾಗದ ಭೂತರಾಜು, ಉಪಮುಖ್ಯ ಭದ್ರತಾ ಮತ್ತು ಜಾಗೃತಾಧಿಕಾರಿ ಪಾಪಣ್ಣ ಅವರು ಕೋಟ್ಯಾಂತರ ರೂಪಾಯಿ ಅಕ್ರಮ ಎಸಗಿರುವ ಆರೋಪ ಕೇಳಿ ಬಂದಿದೆ.

ಅರ್ಧ ವಿಡಿಯೋ ಚಿತ್ರೀಕರಣ ಮಾಡಿದಾಗ ನಿಗಮಕ್ಕೆ 32,89,052 ರೂ ಆದಾಯ ತೋರಿಸಿದ್ದ ಅಧಿಕಾರಿಗಳು, ಚಿತ್ರೀಕರಣ ಆಫ್ ಮಾಡಿದಾಗ ಬಿಎಂಟಿಸಿಗೆ 13,89,785 ರೂ ಮಾತ್ರ ಲೆಕ್ಕ ತೋರಿಸಿದ್ದರಂತೆ. ಆಗಿದ್ರೆ ಬಿಎಂಟಿಸಿ ಸಂಸ್ಥೆಗೆ ಸುಲಭವಾಗಿ ಯಮಾರಿಸಿ ಕೋಟ್ಯಾಂತರ ರೂಪಾಯಿ ಲಪಟಾಯಿಸಿದ್ರಾ ಈ ಅಧಿಕಾರಿಗಳು ಎಂಬ ಅನುಮಾನ ಕಾಡತೊಡಗಿದೆ.

ಈ ಅಕ್ರಮ ಕುರಿತಂತೆ ಮೇಲಾಧಿಕಾರಿಗಳಿಗೆ ಸಾಕ್ಷಿ ಸಮೇತ ದೂರು ನೀಡಿದ್ದರೂ ಅಧಿಕಾರಿಗಳು ಕೇವಲ ನೋಟೀಸ್ ಜಾರಿ ಕೈ ತೊಳೆದುಕೊಂಡಿರುವ ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಪ್ರಜಾಧ್ವನಿ ಯಾತ್ರೆ ಎದುರಾಳಿಗಳಲ್ಲಿ ಭಯ ಸೃಷ್ಟಿಸಿದೆ : ಡಿಕೆಶಿ

ಅಷ್ಟೇ ಅಲ್ಲ ಹೊರಗುತ್ತಿಗೆ ನೌಕರರ ವಿಚಾರದಲ್ಲೂ ಗೋಲ್ಮಾಲ್ ಹೊರಗುತ್ತಿಗೆಗೆ ಬಂದ ಸಿಬ್ಬಂದಿ ಸಂಖ್ಯೆ ನಮೂದು ಮಾಡೋದ್ರಲ್ಲೂ ಅಕ್ರಮ. ಕರ್ತವ್ಯಕ್ಕೆ ಹಾಜರಾದ ಸಿಬ್ಬಂದಿ ಲೆಕ್ಕ ತಪ್ಪು ತೋರಿಸಿ ಸಾಮಾನ್ಯ ಅಧಿಕಾರಿಗಳಿಂದಲೇ ಲಕ್ಷಾಂತರ ರೂಪಾಯಿ ಗೋಲ್ಮಾಲ್ ನಡೆಸಿರುವುದು ಗೊತ್ತಾಗಿದೆ.

ಒಟ್ಟಾರೆ ಹಗರಣ ಬೆಳಕಿಗೆ ಬರುತ್ತಿದ್ದಂತೆ ಮೇಲಾಕಾರಿಗಳು ಬಿಎಂಟಿಸಿ ಸಿಬ್ಬಂದಿಗಳಾದ ಭೂತರಾಜು, ಪಾಪಣ್ಣ, ಬಸವರಾಜಪ್ಪ,ಸೌಮ್ಯಾ, ಉಮಾ, ಮಂಜುನಾಥï,ಕಿಶೋರ್ ಕುಮಾರ್ ಗೆ ನೋಟೀಸ್ ಜಾರಿ ಮಾಡಿ ಈ ಅಕ್ರಮದ ಬಗ್ಗೆ ವಿವರಣೆ ನೀಡುವಂತೆ ಸೂಚನೆ ನೀಡಲಾಗಿದೆ.

BMTC, Another, corruption,

Articles You Might Like

Share This Article