ಮತ್ತೆ ರೋಡಿಗಿಳಿಯಲಿವೆ ಡಬಲ್ ಡೆಕ್ಕರ್ ಬಸ್‍ಗಳು

Social Share

ಬೆಂಗಳೂರು, ಫೆ.9-ಒಂದು ಕಾಲದಲ್ಲಿ ಡಬಲ್ ಡೆಕ್ಕರ್ ಬಸ್‍ಗಳೇ ನಗರದ ಪ್ರಮುಖ ಆಕರ್ಷಣೆಯಾಗಿತ್ತು. ಕಾಲ ನಂತರ ಡಬಲ್ ಡೆಕ್ಕರ್ ಬಸ್‍ಗಳು ಕಣ್ಮರೆಯಾಗಿದ್ದವು. ಜನ ಇಂದಿಗೂ ಡಬಲ್ ಡೆಕ್ಕರ್ ಬಸ್‍ಗಳಲ್ಲಿ ಸಂಚರಿಸುತ್ತಿದ್ದ ಕಾಲವನ್ನು ಮೆಲುಕು ಹಾಕುತ್ತಾರೆ. ಮತ್ತೆ ಅಂತಹ ಬಸ್‍ಗಳಲ್ಲಿ ಸಂಚರಿಸುವ ಅವಕಾಶ ಸಿಗುವುದೆ ಇಲ್ಲ ಎಂದು ನೀವು ಭಾವಿಸಿದ್ದರೆ ನಿಮ್ಮ ಊಹೆ ತಪ್ಪು. ಯಾಕೆಂದರೆ ಬಿಎಂಟಿಸಿ ಸಂಸ್ಥೆ ಮತ್ತೆ ಡಬಲ್ ಡೆಕ್ಕರ್ ಬಸ್‍ಗಳನ್ನು ರೋಡಿಗಿಳಿಸಲು ತೀರ್ಮಾನಿಸಿದೆ.
ಆದರೆ, ಈ ಭಾರಿ ರಸ್ತೆಗಳಿಯುತ್ತಿರುವುದು ಡೀಸಲ್ ಆಧಾರಿತ ಡಬಲ್ ಡೆಕ್ಕರ್‍ಗಳಲ್ಲಿ ಬದಲಿಗೆ ಎಲೆಕ್ಟ್ರಿಕ್ ಬಸ್‍ಗಳು ಎನ್ನುವುದು ವಿಶೇಷ.
ಕೇಂದ್ರ ಸರ್ಕಾರದ ಅೀನ ಸಂಸ್ಥೆಯಾಗಿರುವ ಇಇಎಸ್‍ಎಲ್ ಕಂಪನಿ ಉತ್ಪಾದಿಸಿರುವ ಎಲೆಕ್ಟ್ರಿಕ್ ಆಧಾರಿತ ಡಬಲ್ ಡೆಕ್ಕರ್ ಬಸ್‍ಗಳನ್ನು ಖರೀದಿಸಲು ಬಿಎಂಟಿಸಿ ಸಂಸ್ಥೆ ಮುಂದಾಗಿದೆ.
ದೇಶದ ಎಲ್ಲಾ ರಾಜ್ಯಗಳ ಸಾರಿಗೆ ಸಂಸ್ಥೆಗಳಿಗೂ ಇಇಎಸ್‍ಎಲ್ ಸಂಸ್ಥೆ ಡಬಲ್ ಡೆಕ್ಕರ್ ಬಸ್‍ಗಳನ್ನು ಖರೀದಿಸುವಂತೆ ಪ್ರಸ್ತಾವನೆ ಸಲ್ಲಿಸಿದ್ದು, ಬಿಎಂಟಿಸಿ ಸಂಸ್ಥೆ ಡಬಲ್ ಡೆಕ್ಕರ್ ಬಸ್ ಖರೀದಿಗೆ ಆಸಕ್ತಿ ಹೊಂದಿದೆ. ಮೊದಲ ಹಂತದಲ್ಲಿ ಪ್ರಯೋಗಿಕವಾಗಿ ಐದು ಡಬಲ್ ಡೆಕ್ಕರ್ ಬಸ್‍ಗಳನ್ನು ಖರೀದಿಸಲಾಗುತ್ತಿದೆ.
ಪ್ರಾಯೋಗಿಕ ಪರೀಕ್ಷೆಯಲ್ಲಿ ಡಬಲ್ ಡೆಕ್ಕರ್ ಬಸ್‍ಗಳ ಸೇವೆ ತೃಪ್ತಿಕರವಾಗಿದ್ದರೆ, ಹೆಚ್ಚಿನ ಬಸ್‍ಗಳನ್ನು ಖರೀದಿಸಲಾಗುವುದು ಎಂದು ಬಿಎಂಟಿಸಿ ಮೂಲಗಳು ತಿಳಿಸಿವೆ. ನಗರ ಪ್ರದೇಶದೊಳಗಿರುವ ರಸ್ತೆಗಳು ಕಿರಿದಾಗಿರುವುದರಿಂದ ಡಬಲ್ ಡೆಕ್ಕರ್ ಬಸ್‍ಗಳ ಸಂಚಾರ ಕಷ್ಟ ಸಾಧ್ಯ ಎಂಬುದನ್ನು ಅರಿವು ಇರುವುದರಿಂದ ಹೊರ ವರ್ತುಲ ರಸ್ತೆಗಳಲ್ಲಿ ಡಬಲ್ ಡೆಕ್ಕರ್ ಬಸ್ ಸಂಚಾರ ಆರಂಭಿಸಲಾಗುತ್ತಿದೆ.
ಬಿಎಂಟಿಸಿ ಈಗಾಗಲೆ ನಷ್ಟದಲ್ಲಿದೆ ಇಂತಹ ಸಂದರ್ಭದಲ್ಲಿ ಡಬಲ್ ಡೆಕ್ಕರ್ ಬಸ್ ಖರೀದಿಸುವ ಅವಶ್ಯಕತೆ ಇರಲಿಲ್ಲ ಎನ್ನುತ್ತಾರೆ ಸಾರಿಗೆ ಮುಖಂಡ ಆನಂದ್ ಅವರು. ನಿಗಮದ ಅಕಾರಿಗಳು ಕಮಿಷನ್ ಆಸೆಗಾಗಿ ಡಬಲ್ ಡೆಕ್ಕರ್ ಬಸ್ ಖರೀದಿಗೆ ಮುಂದಾಗಿದ್ದಾರೆ. ಹೀಗಾಗಿ ಸಂಬಂಧಪಟ್ಟ ಮೇಲಾಕಾರಿಗಳು ಡಬಲ್ ಡೆಕ್ಕರ್ ಖರೀದಿಗೂ ಮುನ್ನು ಯೋಚಿಸಬೇಕಿದೆ ಎಂದು ಅವರು ಸಲಹೆ ನೀಡಿದ್ದಾರೆ.
ಆದರೆ, ಡಬಲ್ ಡೆಕ್ಕರ್ ಬಸ್ ಸಂಚಾರಕ್ಕೆ ಬಿಎಂಟಿಸಿ ಈಗಾಗಲೆ ನಿರ್ಧರಿಸಿದ್ದು, ಮೊದಲ ಹಂತದಲ್ಲಿ 5 ಬಸ್‍ಗಳು ರೋಡಿಗಿಳಿಯುವುದು ಗ್ಯಾರಂಟಿ ಎನ್ನುತ್ತಿವೆ ಬಿಎಂಟಿಸಿ ಮೂಲಗಳು.

Articles You Might Like

Share This Article