ಏಕಾಏಕಿ ಹೊತ್ತಿ ಉರಿದ ಬಿಎಂಟಿಸಿ ಬಸ್‍, ನಿರ್ವಾಹಕ ಸಜೀವ ದಹನ

Social Share

ಬೆಂಗಳೂರು, ಮಾ.10- ಏಕಾಏಕಿ ಬಿಎಂಟಿಸಿ ಬಸ್‍ನಲ್ಲಿ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲಿ ಬಸ್ ಪೂರ್ತಿ ಬೆಂಕಿ ಆವರಿಸಿದ್ದರಿಂದ ಒಳಗೆ ಮಲಗಿದ್ದ ನಿರ್ವಾಹಕ ರೊಬ್ಬರು ಸಜೀವ ದಹನವಾಗಿರುವ ಹೃದಯ ವಿದ್ರಾವಕ ಘಟನೆ ಇಂದು ಮುಂಜಾನೆ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.

ಮೂಲತಃ ಬಳ್ಳಾರಿಯ ಮುತ್ತಯ್ಯಸ್ವಾಮಿ(45)ಮೃತಪಟ್ಟಿರುವ ಬಿಎಂಟಿಸಿ ನಿರ್ವಾಹಕರು. ರಾತ್ರಿ 10.30ರ ಸುಮಾರಿಗೆ ಎಂದಿನಂತೆ ಕರ್ತವ್ಯ ಮುಗಿಸಿ ಸುಮನಹಳ್ಳಿ ಡಿಪೆಫೋಗೆ ಸೇರಿದ ಬಿಎಂಟಿಸಿ ಬಸ್‍ನ್ನು ಚಾಲಕ ಪ್ರಕಾಶ್ ಅವರು ಲಿಂಗೀರನಹಳ್ಳಿ ಡಿ ಗ್ರೂಪ್ ಲೇಔಟ್ ಬಸ್ ನಿಲ್ದಾಣದಲ್ಲಿ ನಿಲ್ಲಿಸಿ ನಿಲ್ದಾಣದಲ್ಲಿರುವ ರೂಂಗೆ ಹೋಗಿ ಮಲಗಿದ್ದಾರೆ.

BIG NEWS : ಕರ್ನಾಟಕ, ಹರಿಯಾಣದಲ್ಲಿ H3N2ಗೆ ಇಬ್ಬರು ಬಲಿ

ಬಸ್ ಒಳಗೆ ನಿರ್ವಾಹಕ ಮುತ್ತಯ್ಯಸ್ವಾಮಿ ಮಲಗಿಕೊಂಡಿದ್ದರು. ಇಂದು ಬೆಳಗಿನ ಜಾವ 4 ಗಂಟೆ ಸುಮಾರಿಗೆ ಪ್ರಕಾಶ್ ಅವರಿಗೆ ಎಚ್ಚರವಾಗಿದ್ದು, ಅವರು ನಿತ್ಯ ಕರ್ಮ ಮುಗಿಸಲು ರೂಮ್‍ನಿಂದ ಹೊರಗೆ ಹೋಗಿದ್ದಾರೆ. ಅವರು ಹೋದ ಕೆಲವೇ ನಿಮಿಷಗಳಲ್ಲಿ ಈ ಬಿಎಂಟಿಸಿ ಬಸ್‍ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನೋಡನೋಡುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆ ಇಡೀ ಬಸ್ ಆವರಿಸಿರುವುದು ನಿದ್ರೆಗೆ ಜಾರಿದ್ದ ಮುತ್ತಯ್ಯಸ್ವಾಮಿ ಅವರ ಅರಿವಿಗೆ ಬಂದಿಲ್ಲ.

4.45ರ ಸುಮಾರಿಗೆ ಪ್ರಕಾಶ್ ಅವರು ಬಸ್ ಬಳಿ ಬರುತ್ತಿದ್ದಂತೆ ಬೆಂಕಿ ಹೊತ್ತಿಕೊಂಡಿರುವುದು ಗಮನಿಸಿ ತಕ್ಷಣ ಅಗ್ನಿಶಾಮಕ ದಳ ಹಾಗೂ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ವಾಹನದೊಂದಿಗೆ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವಷ್ಟರಲ್ಲಿ ಶೇ. 80ರಷ್ಟು ಸುಟ್ಟ ಗಾಯಗಳಿಂದಾಗಿ ಮುತ್ತಯ್ಯ ಸ್ವಾಮಿ ಸಜೀವ ದಹನವಾಗಿರುವುದು ಕಂಡು ಬಂದಿದೆ.

ಆರ್‌ಜೆಡಿ ಮುಖಂಡರ ಮನೆಗಳ ಮೇಲೆ ಮುಗಿಬಿದ್ದ ಇಡಿ

ಸ್ಥಳಕ್ಕೆ ಎಫ್‍ಎಸ್‍ಎಲ್ ಅಧಿಕಾರಿಗಳು, ಬೆರಳಚ್ಚು ತಜ್ಞರು, ಬಿಎಂಟಿಸಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಚಾಲಕ ಪ್ರಕಾಶ್ ಅವರನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

ಮುನ್ನೆಚ್ಚರಿಕೆ ಅತ್ಯಗತ್ಯ: ನಿತ್ಯ ತಮ್ಮ ಸೇವೆ ಮುಗಿಸಿ ಬಹುತೇಕ ಬಿಎಂಟಿಸಿ ಬಸ್‍ಗಳಲ್ಲಿ ರಾತ್ರಿ ಚಾಲಕ ಹಾಗೂ ನಿರ್ವಾಹಕರು ಮಲಗಿಕೊಳ್ಳುತ್ತಾರೆ. ಈ ರೀತಿಯ ಘಟನೆಗಳು ಮರುಕಳಿಸಿದರೆ ಅವರ ಜೀವಕ್ಕೆ ಬೆಲೆ ಇಲ್ಲವೆ ಎಂಬ ಪ್ರಶ್ನೆ ಮೂಡಿದೆ.

BMTC, bus, Fire, conductor, burn,

Articles You Might Like

Share This Article