ರಸ್ತೆ ಸ್ಟ್ರಿಪ್ಸ್ ತಂದ ಅವಾಂತರ : ಬೈಕ್‍ಗೆ BMTC ಬಸ್ ಡಿಕ್ಕಿಯಾಗಿ ಸವಾರ ಸಾವು

Social Share

ಬೆಂಗಳೂರು,ನ.3- ವಾಹನಗಳ ವೇಗ ಮಿತಿಯನ್ನು ಕಡಿಮೆ ಮಾಡುವ ಉದ್ದೇಶದಿಂದ ರಸ್ತೆಗೆ ಅಳವಡಿಸಿರುವ ಸ್ಟ್ರಿಪ್ಸ್‍ಗೆ ಜೀವವೊಂದು ಬಲಿಯಾಗಿದೆ.ಈ ಹಿಂದೆ ರಸ್ತೆ ಗುಂಡಿಯಿಂದಾಗಿ ಅಮಾಯಕ ವಾಹನ ಸವಾರರು ಪ್ರಾಣ ಕಳೆದುಕೊಂಡಿದ್ದರು. ಇದೀಗ ಸ್ಟ್ರಿಪ್ಸ್‍ನಿಂದಾಗಿ ಬೈಕ್ ಸವಾರನ ಜೀವ ಹೋಗಿರುವುದು ದುರ್ದೈವ.

ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯ ರಿಂಗ್ ರಸ್ತೆಯಲ್ಲಿ ರಾತ್ರಿ ಬಿಎಂಟಿಸಿ ಬಸ್ ಅತಿವೇಗವಾಗಿ ಬಂದು ಮುಂದೆ ಹೋಗುತ್ತಿದ್ದ ಬೈಕ್‍ಗೆ ಡಿಕ್ಕಿ ಹೊಡೆದು ಕೆಳಕ್ಕೆ ಬಿದ್ದ ಸವಾರ ಮೇಲೆ ಚಕ್ರ ಹರಿದ ಪರಿಣಾಮ ಸವಾರ ಮೃತಪಟ್ಟಿದ್ದಾರೆ.

ಲಗ್ಗೆರೆ ನಿವಾಸಿ ಪ್ರಮೋದ್ ಕುಮಾರ್ (24) ಮೃತಪಟ್ಟ ಬೈಕ್ ಸವಾರ.
ಖಾಸಗಿ ಕಂಪೆನಿಯೊಂದರಲ್ಲಿ ಎಲೆಕ್ಟ್ರಿಕಲ್ ಸೂಪ್ರವೈಸರ್ ಆಗಿದ್ದ ಪ್ರಮೋದ್ ಅವರು ರಾತ್ರಿ 10 ಗಂಟೆ ಸುಮಾರಿನಲ್ಲಿ ಸುಮನಹಳ್ಳಿ ಕಡೆಯಿಂದ ಲಗ್ಗೆರೆಯ ತಮ್ಮ ಮನೆಗೆ ಬೈಕ್‍ನಲ್ಲಿ ಹೋಗುತ್ತಿದ್ದರು.

ಔಟರ್ ರಿಂಗ್ ರಸ್ತೆ, ಚಾಮುಂಡೇಶ್ವರಿ ನಗರ ಬಸ್ ನಿಲ್ದಾಣದ ಪೆಟ್ರೋಲ್ ಬಂಕ್ ಮುಂಭಾಗ ರಸ್ತೆಯಲ್ಲಿ ಅಳವಡಿಸಿದ್ದ ಸ್ಟ್ರಿಪ್ಸ್ ಗಮನಿಸಿ ಪ್ರಮೋದ್ ತಮ್ಮ ಬೈಕ್‍ನ ವೇಗಮಿತಿಯನ್ನು ಕಡಿಮೆ ಮಾಡುತ್ತಿದ್ದಂತೆ ಹಿಂದಿನಿಂದ ಅತಿವೇಗವಾಗಿ ಬಂದ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದಿದೆ.

ಆನ್‍ಲೈನ್ ಕ್ಲಾಸ್ ಎಫೆಕ್ಟ್, ಮೊಬೈಲ್ ದಾಸರಾದ ಮಕ್ಕಳು, ಪೋಷಕರು ಕಂಗಾಲು

ಕೆಳಗೆ ಬಿದ್ದ ಪ್ರಮೋದ್ ಹಾಗೂ ಬೈಕ್ ಮೇಲೆ ಬಸ್‍ನ ಮುಂದಿನ ಚಕ್ರ ಹರಿದ ಪರಿಣಾಮ ಗಂಭೀರ ಗಾಯಗೊಂಡರು. ತಕ್ಷಣ ಆ್ಯಂಬುಲೆನ್ಸ್ ಮೂಲಕ ಕೆ.ಸಿ.ಜನರಲ್ ಆಸ್ಪತ್ರೆಗೆ ಪ್ರಮೋದ್ ಅವರನ್ನು ಕರೆದೊಯ್ಯುತ್ತಿದ್ದಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.

ಚಾಲಕನಿಗೆ ಥಳಿತ:

ಅಪಘಾತದಿಂದ ಆಕ್ರೋಶಗೊಂಡ ಸಾರ್ವಜನಿಕರು ಬಿಎಂಟಿಸಿ ಬಸ್ ಗಾಜನ್ನು ಒಡೆದು ಚಾಲಕನಿಗೆ ಥಳಿಸಿದ್ದಾರೆ. ತಕ್ಷಣ ಹೊಯ್ಸಳ ಪೊಲೀಸರು ಸ್ಥಳಕ್ಕೆ ಆಗಮಿಸಿ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.

ಸುದ್ದಿ ತಿಳಿದು ಕಾಮಾಕ್ಷಿಪಾಳ್ಯ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.ಬಸ್ ವಶಕ್ಕೆ: ಅಪಘಾತವೆಸಗಿದ ಬಸನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಪಘಾತದಿಂದಾಗಿ ಪ್ರಮೋದ್ ಅವರ ಬೈಕ್ ಸಂಪೂರ್ಣ ಜಖಂಗೊಂಡಿದೆ.

ಕೆಂಪುಕೋಟೆ ಮೇಲೆ ದಾಳಿ ಪ್ರಕರಣ : ಎಲ್‍ಇಟಿ ಉಗ್ರನ ಮರಣದಂಡನೆ ಎತ್ತಿಹಿಡಿದ ಸುಪ್ರೀಂ

Articles You Might Like

Share This Article