ಬೆಂಗಳೂರು, ಜು.5– ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಪ್ರಯಾಣಿಕರ ಅನುಕೂಲಕ್ಕಾಗಿ ಜು.7 ಸೋಮವಾರದಿಂದ ಹೊಸ ಮಾರ್ಗಗಳಲ್ಲಿ ಬಸ್ ಸೇವೆಗಳನ್ನು ಆರಂಭಿಸಲಿದೆ.
ಕೆಂಗೇರಿ ಟಿಟಿಎಂಸಿ ಬಸ್ ನಿಲ್ದಾಣದಿಂದ ಮಾಗಡಿ ಬಸ್ ನಿಲ್ದಾಣದವರೆಗೆ 221-ಕೆ ಮಾರ್ಗ ಸಂಖ್ಯೆಯ ಬಸ್ ಸೇವೆಯನ್ನು ಆರಂಭಿಸಲಿದೆ. ಈ ಬಸ್‌ಗಳು ಕೊಮ್ಮಘಟ್ಟ, ಸೂಲಿಕೆರೆ, ಗುಲಗಂಜನಹಳ್ಳಿ ಕ್ರಾಸ್, ತಾವರೆಕೆರೆ, ಚೋಳನಾಯಕನಹಳ್ಳಿ, ಶಾನು ಭೋಗನಹಳ್ಳಿ, ತಗಚಗುಪ್ಪೆ, ರಂಗನಾಥಪುರ ಮಾರ್ಗಗಳಲ್ಲಿ ಸಂಚರಿಸಲಿದೆ.
238-ವಿಬಿ ಮಾರ್ಗ ಸಂಖ್ಯೆಯ ಬಸ್ ಕೆಂಪೇಗೌಡ ಬಸ್ ನಿಲ್ದಾಣದಿಂದ ಉತ್ಕಾರ್ ನಿಲ್ದಾಣದವರೆಗೆ ಸಂಚರಿಸಲಿವೆ. ಈ ಬಸ್‌ಗಳು ಸುಜಾತ ಟಾಕೀಸ್, ವಿಜಯನಗರ, ಚಂದ್ರಾಲೇಔಟ್, ನಾಗರಭಾವಿ ವೃತ್ತ, ಐಟಿಐ ಲೇಔಟ್, ಮುದ್ದಯ್ಯನ ಪಾಳ್ಯ, ಆರ್‌ಟಿಓ ಆಫೀಸ್, ವಿಶ್ವೇಶ್ವರಯ್ಯ ಲೇ ಔಟ್, ಉಪ್ಯಾರ್ ಲೇಔಟ್‌ರೆಗೆ ಸಂಚರಿಸಲಿದೆ.
ಬೆಳಿಗ್ಗೆ 5.50ರಿಂದ ರಾತ್ರಿ 8 ಗಂಟೆಯವರೆಗೆ 221-ಕೆ ಮಾರ್ಗ ಸಂಖ್ಯೆಯ ಬಸ್‌ಗಳು ಸಂಚರಿಸಲಿವೆ. 238-ವಿಬಿ ಮಾರ್ಗ ಸಂಖ್ಯೆಯ ಬಸ್‌ಗಳು 5-55ರಿಂದ ರಾತ್ರಿ 10 ಗಂಟೆಯವರೆಗೆ ಸಂಚರಿಸಲಿವೆ.
- ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (19-07-2025)
- ಬೆಂಗಳೂರಲ್ಲಿ ಇಂದು ಸಂಭವಿಸಿದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರ ಸಾವು
- ಶಾಲೆಗಳಿಗೆ ಬಾಂಬ್ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ : ಗೃಹಸಚಿವ ಪರಮೇಶ್ವರ
- ನೈರುತ್ಯ ಮುಂಗಾರು ಚೇತರಿಕೆ, ರಾಜ್ಯದ ಹಲವೆಡೆ ಮಳೆ
- 20 ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ, ಬೆಚ್ಚಿ ಬಿದ್ದ ದೆಹಲಿ