ಬೆಂಗಳೂರು,ಜ.16- ಇನ್ಮುಂದೆ ನಗರದಲ್ಲಿ ಸಂಚರಿಸುವ ಬಿಎಂಟಿಸಿ ಬಸ್ಗಳು ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಕನಕಪುರ ಹಾಗೂ ತುಮಕೂರಿಗೂ ಸಂಚರಿಸಲಿವೆ. ನಗರದಲ್ಲಿ ಸಂಚರಿಸುತ್ತಿದ್ದ ವೋಲ್ವೋ ಬಸ್ಗಳಿಗೆ ಪ್ರಯಾಣಿಕರೆ ಹತ್ತುತ್ತಿರಲಿಲ್ಲ. ಹೀಗಾಗಿ ಬಸ್ಗಳು ತುಕ್ಕು ಹಿಡಿಯುವುದು ಬೇಡ ಎಂಬ ಉದ್ದೇಶದಿಂದ ಅದೇ ಬಸ್ಗಳನ್ನು ಚಿಕ್ಕಬಳ್ಳಾಪುರ ಕಡೆ ಸಂಚಾರ ಆರಂಭಿಸಲಾಗಿತ್ತು.
ಕೆಎಸ್ಆರ್ಟಿಸಿ ವಿರೋಧದ ನಡುವೆಯೂ ಚಿಕ್ಕಬಳ್ಳಾಪುರಕ್ಕೆ ಆರಂಭವಾದ ಬಿಎಂಟಿಸಿ ಸೇವೆಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಕಂಡು ಬಂದಿರುವ ಹಿನ್ನಲೆಯಲ್ಲಿ ಬಿಎಂಟಿಸಿ ಬಸ್ ಸೇವೆಯನ್ನು ಕೋಲಾರ, ತುಮಕೂರು ಹಾಗೂ ರಾಮನಗರ ಜಿಲ್ಲೆಗಳಿಗೂ ವಿಸ್ತರಿಸಲು ತೀರ್ಮಾನಿಸಲಾಗಿದೆ.
ಚಿಕ್ಕಬಳ್ಳಾಪುರಕ್ಕೆ ಬಿಎಂಟಿಸಿ ಬಸ್ ಸಂಚರಿಸಲು ಅನುಮತಿ ನೀಡಿದ ಮಾದರಿಯಲ್ಲೇ ಬೆಂಗಳೂರು ಸುತ್ತಮುತ್ತಲಿನ ನಾಲ್ಕು ಜಿಲ್ಲೆಗಳಲ್ಲಿ ಬಸ್ ಸಂಚಾರ ಆರಂಭಿಸಲು ಅನುಮತಿ ನೀಡುವಂತೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಅಧಿಕಾರಿಗಳು ಕೆಎಸ್ಆರ್ಟಿಸಿಗೆ ಪತ್ರ ಬರೆದಿದೆ.
ನೇಪಾಳದಲ್ಲಿ 72 ಪ್ರಯಾಣಿಕರಿದ್ದ ವಿಮಾನ ಪತನ, 40ಕ್ಕೂ ಹೆಚ್ಚು ಮಂದಿ ಸಾವು..!
ಕೊರೊನಾ ಬರುವುದಕ್ಕೂ ಮುನ್ನ ವೋಲ್ವೋ ಬಸ್ಗಳಿಗೆ ಭಾರಿ ಬೇಡಿಕೆ ಇತ್ತು. ಅದರೆ ಕೊರೊನಾ ಮಹಾಮಾರಿ ಅಟ್ಟಹಾಸದ ನಂತರ ವೋಲ್ವೋ ಬಸ್ಗಳು ನಿಂತಲ್ಲೇ ನಿಂತು ಧೂಳು ತಿನ್ನುವಂತಹ ಪರಿಸ್ಥಿತಿಗೆ ಬಂದಿತ್ತು.
ಅಂತಹ ಸಂದರ್ಭದಲ್ಲಿ ಚಿಕ್ಕಬಳ್ಳಾಪುರಕ್ಕೆ ಬಿಎಂಟಿಸಿ ವೋಲ್ವೋ ಬಸ್ ಸೇವೆ ಆರಂಭಿಸಲಾಗಿತ್ತು. ಇದಕ್ಕೆ ವ್ಯಾಪಕ ಜನಬೆಂಬಲ ವ್ಯಕ್ತವಾಗಿರುವುದರಿಂದ ಬಿಎಂಟಿಸಿ ತುಮಕೂರು, ಕೋಲಾರ ಮತ್ತು ರಾಮನಗರ ಮಾರ್ಗದಲ್ಲೂ ಬಸ್ ಸಂಚಾರಕ್ಕೆ ಅನುಮತಿ ನೀಡುವಂತೆ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರು ಕೆಎಸ್ಆರ್ಟಿಸಿ ಎಂಡಿಗೆ ಪತ್ರ ಬರೆದಿದ್ದಾರೆ.
ಸದ್ಯ 400 ಕ್ಕೂ ಅಧಿಕ ವೋಲ್ವೋಬಸ್ಗಳು ನಿಂತಲ್ಲೇ ನಿಂತಿವೆ. ನೀವು ಪರ್ಮಿಟ್ ಕೊಟ್ರೆ ಬೆಂಗಳೂರು ಸುತ್ತಲೂ ಇರೋ ಜಿಲ್ಲೆಗಳಿಗೆ ಬಸ್ ಸೇವೆ ನೀಡ್ತಿವಿ ಎಂದು ಬಿಎಂಟಿಸಿ ಕೇಳ್ತಿದೆ. ಆದ್ರೆ ಇದನ್ನ ಕೆಎಸ್ಆರ್ಟಿಸಿ ತೀವ್ರವಾಗಿ ವಿರೋಧಿಸ್ತಿದೆ. ಇಷ್ಟುಮಾತ್ರವಲ್ಲ ಬಿಎಂಟಿಸಿಯ ಪ್ರಸ್ತಾವನೆಯನ್ನ ನೌಕರರ ಸಂಘಟನೆಗಳೂ ಸಹ ಕಡ್ಡಿ ಮುರಿದಹಾಗೆ ವಿರೋಧಿಸಿವೆ.
ಸಿದ್ದರಾಮಯ್ಯ ಆಡಳಿತದಲ್ಲಿ ಭರವಸೆ ಉಚಿತ, ಸಾಲ ಖಚಿತ
ಬಿಎಂಟಿಸಿಯವರ ಬಳಿ ಅನವಶ್ಯಕವಾಗಿ ಬಸ್ಗಳು ಇದ್ದರೆ ಅವುಗಳನ್ನು ಕೆಎಸ್ಆರ್ಟಿಸಿಗೆ ನೀಡಲಿ ಅದರ ಬದಲು ಕೆಎಸ್ಆರ್ಟಿಸಿ ರೂಟ್ಗಳಲ್ಲಿ ಬಿಎಂಟಿಸಿ ಬಸ್ ಸಂಚಾರ ಆರಂಭಿಸುವುದು ಎಷ್ಟು ಸರಿ ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ.
ಬೆಂಗಳೂರು ಜನರು ಪೀಕ್ ಆವರ್ಗಳಲ್ಲಿ ಬಸ್ ಸಿಗದೆ ಪರದಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಬಿಎಂಟಿಸಿ ಬಸ್ಗಳು ಕೆಎಸ್ಆರ್ಟಿಸಿ ರೂಟ್ಗಳಲ್ಲಿ ಓಡಿಸಲು ಅವಕಾಶ ನೀಡುವುದಿಲ್ಲ ಎಂದು ಕೆಎಸ್ಆರ್ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್ ಅಧ್ಯಕ್ಷ ಅನಂತ ಸುಬ್ಬರಾವ್ ಎಚ್ಚರಿಸಿದ್ದಾರೆ.
BMTC, bus, service, Tumkur, Kolar, Ramanagara,