ಚಿಕ್ಕಬಳ್ಳಾಪುರಕ್ಕೆ ಬಿಎಂಟಿಸಿ ಬಸ್..!

Social Share

ಚಿಕ್ಕಬಳ್ಳಾಪುರ,ಡಿ.17-ಜನತೆಗೆ ಹೊಸ ವರ್ಷದ ಕೊಡುಗೆಯಾಗಿ ಚಿಕ್ಕಬಳ್ಳಾಪುರಕ್ಕೆ ಬಿಎಂಟಿಸಿ ಬಸ್ ವಿಸ್ತರಣೆಯಾಗಲಿದೆ. ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಮಾತ್ರ ಸೀಮಿತವಾಗಿದ್ದ ಬಿಎಂಟಿಸಿ ಬಸ್ ಜನವರಿ ಮೊದಲ ವಾರದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಗೂ ಆಗಮಿಸಲಿದೆ ಚಿಕ್ಕಬಳ್ಳಾಪುರ ಜಿಲ್ಲೆಗೆ ಜನವರಿ ಮೊದಲ ವಾರದಲ್ಲಿ ಬಿಎಂಟಿಸಿ ಬಸ್ ವಿಸ್ತರಣೆ ಆಗುವ ಬಗ್ಗೆ ಬಿಎಂಟಿಸಿ ಉಪಾಧ್ಯಕ್ಷ ಕೆ.ವಿ.ನವೀನ್ ಕಿರಣ್ ಮಾಹಿತಿ ನೀಡಿದ್ದಾರೆ.

ಜಿಲ್ಲೆಯ ಜನತೆಗೆ ಬಹುನಿರೀಕ್ಷಿತ ಬೇಡಿಕೆಯಾಗಿದ್ದ ಬಿಎಂಟಿಸಿ ಬಸ್ಸುಗಳನ್ನ ಹೊಸ ವರ್ಷ ಜನವರಿ ಮೊದಲ ವಾರದಲ್ಲಿ ಚಿಕ್ಕಬಳ್ಳಾಪುರಕ್ಕೂ ವಿಸ್ತರಿಸಲಾಗುವುದು ತನ್ನ ಕಾರ್ಯ ವ್ಯಾಪ್ತಿಯನ್ನು ವಿಸ್ತರಿಸಿ ಹೊಸ ವರ್ಷದ ಕೊಡುಗೆಯಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್ಸುಗಳನ್ನು ಚಿಕ್ಕಬಳ್ಳಾಪುರಕ್ಕೂ ವಿಸ್ತರಿಸುವ ಸಲುವಾಗಿ ನಡೆದ ನಿರ್ದೇಶಕರ ಮಂಡಳಿ ತೀರ್ಮಾನವಾಗಿದೆ.

ಡ್ರಗ್ ಪೆಡ್ಲಿಂಗ್ ಮಾಡುತ್ತಿದ್ದ ಬಿಹಾರ ಮೂಲದ ಫುಡ್ ಡೆಲವರಿ ಬಾಯ್ ಸೆರೆ

ಬಿಎಂಟಿಸಿ ಅಧ್ಯಕ್ಷರಾದ ನಂದೀಶ್ ರೆಡ್ಡಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರ ಪ್ರಯತ್ನದಿಂದಾಗಿ ಚಿಕ್ಕಬಳ್ಳಾಪುರಕ್ಕೂ ಬಿಎಂಟಿಸಿ ಬಸ್ಸುಗಳ ವಿಸ್ತರಿಸುವ ಸಂಬಂಧ ಈಗಾಗಲೇ ಎಲ್ಲಾ ತರನಾದ ಪತ್ರವ್ಯವಹಾರಗಳು ನಡೆದಿದ್ದು, ಪತ್ರ ವ್ಯವಹಾರವು ಕೊನೆ ಹಂತದಲ್ಲಿದ್ದು, ಸದ್ಯದಲ್ಲಿಯೇ ಈ ಪತ್ರ ವ್ಯವಹಾರ ಪೂರ್ಣಗೊಳ್ಳಲಿದೆ.

ಬಳಿಕ ಹೊಸ ವರ್ಷದ ಕೊಡುಗೆಯಾಗಿ ಚಿಕ್ಕಬಳ್ಳಾಪುರಕ್ಕೆ ಬಿಎಂಟಿಸಿ ಬಸ್ಸುಗಳ ವಿಸ್ತರಣೆ ಆಗಲಿದೆ ಎಂದು ಕೆ.ವಿ.ನವೀನ್ ಕಿರಣ್ ಅವರು ಸ್ಪಷ್ಟಪಡಿಸಿದ್ದಾರೆ.

#BMTC, #BusService, #Chikkaballapura, #Bengaluru,

Articles You Might Like

Share This Article