ಬಿಎಂಟಿಸಿ ಎಂಡಿ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದ ಚಾಲಕ ಸಸ್ಪೆಂಡ್

Social Share

ಬೆಂಗಳೂರು,ಫೆ.7- ಬಿಎಂಟಿಸಿ ಎಂಡಿ ಜಿ. ಸತ್ಯವತಿ ಬಗ್ಗೆ ರಾಜ್ಯಪಾಲರಿಗೆ ದೂರು ನೀಡಿದ್ದ ಚಾಲಕ ತ್ಯಾಗರಾಜ್ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಸತ್ಯವತಿ ಅವರ ಸಹಿ ನಕಲು ಮಾಡಿ ವಂಚಿಸಿದ್ದವರನ್ನು ಕೇವಲ ಟ್ರಾನ್ಸ್‍ಫರ್ ಮಾಡಿ ನ್ಯಾಯ ಕೇಳಿದ್ದ ಚಾಲಕನನ್ನು ಸೇವೆಯಿಂದ ಅಮಾನತುಗೊಳಿಸಿರುವ ಕ್ರಮಕ್ಕೆ ಇದೀಗ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ಇತ್ತಿಚೆಗೆ ಬಿಎಂಟಿಸಿ ಸಂಸ್ಥೆಯಲ್ಲಿ ಭಾರಿ ಅಕ್ರಮಗಳು ನಡೆಯುತ್ತಿವೆ. ಈ ಕುರಿತಂತೆ ಚಾಲಕ ತ್ಯಾಗರಾಜ್ ಅವರು ಸತ್ಯವತಿ ಅವರಿಗೆ ದಾಖಲೆ ಸಮೇತ ದೂರು ನೀಡಿ ಅನ್ಯಾಯ ಸರಿಪಡಿಸುವಂತೆ ಒತ್ತಾಯಿಸಿದ್ದರು.

ಕೇಂದ್ರದ ಬಜೆಟ್‍ನಲ್ಲಿ ಸರ್ವ ಹಿತ ರಕ್ಷಣೆಗೆ ಆದ್ಯತೆ : ಪ್ರಧಾನಿ

ಆದರೆ ಅವರ ದೂರಿನ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೆ ದೂರು ನೀಡಿದ್ದ ತ್ಯಾಗರಾಜ ಗೆ ಬಿಎಂಟಿಸಿ ನಿಗಮ ನೋಟೀಸ್ ಜಾರಿ ಮಾಡಿತ್ತು.

ಮದ್ರಾಸ್ ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಗೌರಿ ಪ್ರಮಾಣ ವಚನ

ಇದರಿಂದ ನೋಂದ ಚಾಲಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸಾರಿಗೆ ಇಲಾಖೆಯ ಸೆಕ್ರೆಟರಿ ಡಾ. ಎನ್ ವಿ ಪ್ರಸಾದ್ ಹಾಗೂ ಕಾರ್ಮಿಕ ಇಲಾಖೆ ಆಯುಕ್ತ ಅಕ್ರಂ ಪಾಷ ಅವರಿಗೆ ಪತ್ರ ಬರೆದು ನ್ಯಾಯ ಕೇಳಿದ್ದರು.
ಹೀಗಾಗಿ ಅಕ್ರಮದ ವಿರುದ್ಧ ಧ್ವನಿ ಎತ್ತಿರುವ ತ್ಯಾಗರಾಜ್ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

BMTC, driver, suspended, MD Satyavathy,

Articles You Might Like

Share This Article