ಎಂಡಿ, ನಿರ್ದೇಶಕರುಗಳ ನಕಲಿ ಸಹಿ ಮಾಡಿ ಬಿಎಂಟಿಸಿ ಸಂಸ್ಥೆಗೆ ಮೋಸ

Social Share

ಬೆಂಗಳೂರು,ಜ.27- ಬಿಎಂಟಿಸಿ ಬಸ್ ನಿಲ್ದಾಣಗಳಲ್ಲಿ ಗುತ್ತಿಗೆ ನೀಡುತ್ತಿದ್ದ ಮಳಿಗೆಗಳು ಮತ್ತು ಶೌಚಾಲಯಗಳ ಗುತ್ತಿಗೆ ಪರವಾನಗಿಯನ್ನು ನವೀಕರಿಸುವ ಸಂಬಂಧ ಮೂವರು ವ್ಯವಸ್ಥಾಪಕ ನಿರ್ದೇಶಕರು ಹಾಗೂ ಇಬ್ಬರು ನಿರ್ದೇಶಕರ ಸಹಿಗಳನ್ನು ನಕಲು ಮಾಡಿ ಕರಾರು ಒಪ್ಪಂದದ ಆದೇಶ ಪತ್ರ ನೀಡಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ದ್ರೋಹ ಮಾಡಿ ಮೋಸ ಮಾಡಿರುವ ಬೃಹತ್ ಜಾಲ ಬೆಳಕಿಗೆ ಬಂದಿದೆ.

ನಕಲು ಸಹಿ ಮಾಡಿ ಲಕ್ಷಾಂತರ ರೂ ಪಡೆದ ಭ್ರಷ್ಟ ಅಧಿಕಾರಿಗಳ ವಿರುದ್ಧ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕೆಂಪೇಗೌಡ ಬಸ್ ನಿಲ್ದಾಣದ ಕೆಎಂಎಫ್ ಹಾಲಿನ ಮೂರು ಮಳಿಗೆಗಳಿಗೆ ಪರವಾನಗಿ ವಿಸ್ತರಿಸುವ ಸಂಬಂಧ ಉನ್ನತ ಅಧಿಕಾರಿಗಳ ಸಹಿಯನ್ನು ನಕಲು ಮಾಡಿರುವುದನ್ನು ಬಿಎಂಟಿಸಿ ಸಹಾಯಕ ಭದ್ರತಾ ಮತ್ತು ಜಾಗೃತದಳದ ಅಧಿಕಾರಿ ಸಿ.ಕೆ.ರಮ್ಯಾ ಅವರು ಬಯಲಿಗೆಳೆದಿದ್ದಾರೆ.

ನಕಲಿ ಅಂಕಪಟ್ಟಿ ದಂಧೆ: ಕಾಲೇಜು, ಶಿಕ್ಷಣ ಸಂಸ್ಥೆಗಳ ಮೇಲೆ ಸಿಸಿಬಿ ದಾಳಿ

ಶಿವಾಜಿನಗರ ಬಸ್ ನಿಲ್ದಾಣದ ಸಂಕೀರ್ಣ ಒಂದು ಮತ್ತು ಎರಡರ ಶೌಚಾಲಯಗಳ ಪರವಾನಗಿ ವಿಸ್ತರಿಸುವ ಸಂಬಂಧ ಬಿಟಿಎಂ ಲೇಔಟ್, ಟಿಟಿಎಂಸಿ ಕಡತದಲ್ಲಿ ಹೆಚ್ಚುವರಿ ಜಾಗ ಹಂಚಿಕೆಯಾಗಿರುವ ಸಂದರ್ಭದಲ್ಲಿ ಮತ್ತು ವಿಜಯನಗರ ಟಿಟಿಎಂಸಿ ಕಡತದಲ್ಲಿ ಹೆಚ್ಚುವರಿ ಜಾಗ ಹಂಚಿಕೆಯಾಗಿರುವ ಸಂದರ್ಭದಲ್ಲಿ ಉನ್ನತ ಅಧಿಕಾರಿಗಳ ಸಹಿಯನ್ನು ನಕಲು ಮಾಡಿರುವ ಕುರಿತಂತೆ ಕೂಲಂಕಷವಾಗಿ ಪರಿಶೀಲಿಸಿ ಪ್ರಾಥಮಿಕ ವಿಚಾರಣೆ ಮಾಡಿ ವರದಿ ಸಲ್ಲಿಸಲು ಸೂಚಿಸಲಾಗಿತ್ತು.

ಈ ಬಗ್ಗೆ ಪ್ರಾಥಮಿಕ ವಿಚಾರಣೆ ಕೈಗೊಂಡಾಗ 2020, ಮಾರ್ಚ್ 9ರಿಂದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿ ವಾಣಿಜ್ಯ ಶಾಖೆಯ ಅಂದಿನ ಮುಖ್ಯ ಸಂಚಾರ ವ್ಯವಸ್ಥಾಪಕರಾಗಿದ್ದ ಶ್ರೀರಾಮ ಮುಲ್ಕಾವಾನ್ ಹಾಗೂ ಇತರೆ ಅಧಿಕಾರಿ ಮತ್ತು ನೌಕರರು ಸೇರಿಕೊಂಡು ಈ ಕೃತ್ಯವೆಸಗಿರುವುದು ಕಂಡು ಬಂದಿದೆ.

ಏರ್ ಷೋ ಸಂದರ್ಭದಲ್ಲಿ ಮಾನ ಹರಾಜಾಗದಂತೆ ನೋಡಿಕೊಳ್ಳಲು ಬಿಬಿಎಂಪಿ ಸಿದ್ಧತೆ

ಶ್ರೀರಾಮ ಮುಲ್ಕಾವಾನ್ ಪ್ರಸ್ತುತ ಕಲಬುರಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಮಂಡಳಿ ನಿರ್ದೇಶಕರಾಗಿದ್ದಾರೆ. ಇವರುಗಳೆಲ್ಲಾ ಸೇರಿಕೊಂಡು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಾದ ಶಿಖಾ, ಅನ್ಬುಕುಮಾರ್, ಸತ್ಯವತಿ ಹಾಗೂ ಭದ್ರತಾ ಮತ್ತು ಜಾಗೃತದಳದ ನಿರ್ದೇಶಕರಾದ ರಾಕಾ ಮತ್ತು ಸೂರ್ಯಸೇನಾ(ಮಾಹಿತಿ ಮತ್ತು ತಂತ್ರಜ್ಞಾನ) ರವರುಗಳ ಸಹಿಗಳನ್ನು ನಕಲು ಮಾಡಿ ಕರಾರು ಒಪ್ಪಂದದ ಆದೇಶ ಪತ್ರ ನೀಡಿ ಬಿಟಿಎಂಸಿ ಸಂಸ್ಥೆಗೆ ದ್ರೋಹ ಮಾಡಿರುವ ಬಗ್ಗೆ ದೂರು ದಾಖಲಾಗಿದೆ.

ವಿಲ್ಸನ್ ಗಾರ್ಡನ್ ಠಾಣೆ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

BMTC, MD, director, fake, signature, fraud,

Articles You Might Like

Share This Article