ಬೆಂಗಳೂರು,ಡಿ.30- ಇಂಧನ ಬೆಲೆ ಏರಿಕೆ ಹಾಗೂ ಇತರೆ ನಿರ್ವಹಣಾ ವೆಚ್ಚದಿಂದ ಎದುರಾಗುತ್ತಿರುವ ನಷ್ಟವನ್ನು ಸರಿದೂಗಿಸಲು ಹೊಸ ವರ್ಷದಲ್ಲಿ ಬಿಎಂಟಿಸಿ ಪ್ರಯಾಣಿಕರ ಟಿಕೆಟ್ ದರ ಹೆಚ್ಚಿಸಲು ನಿರ್ಧರಿಸಿದೆ.
ಇದೇ ವೇಳೆ ಪಾಸ್ ವ್ಯವಸ್ಥೆಯಲ್ಲೂ ಕೂಡ ಕೆಲವೊಂದು ರಿಯಾಯ್ತಿಯಲ್ಲಿ ಕಡಿತಗೊಳಿಸಲು ಈಗಾಗಲೇ ಅಧಿಕಾರಿಗಳು ಸಭೆ ನಡೆಸಿ ವಿಸ್ತೃತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ.
ಮಾಸಿಕ ಬಸ್ ಪಾಸ್ಗಳ ದರವು ಕೂಡ ಹೆಚ್ಚಾಗಲಿದ್ದು, ಕನಿಷ್ಠ 5ರಿಂದ 10ರೂ.ಗೆ ಏರಿಕೆಯಾದರೆ, ಟಿಕೆಟ್ ದರ 1ರಿಂದ 2ರೂ.ಗೆ ಹೆಚ್ಚಳವಾಗಬಹುದು ಎಂದು ಮೂಲಗಳು ತಿಳಿಸಿವೆ.
ಹೊಸ ವರ್ಷಕ್ಕೆ ಸಾರ್ವಜನಿಕರಿಗೆ ಸಿಹಿಸುದ್ದಿ, ವಿದ್ಯುತ್ ದರ ಇಳಿಕೆ
ಸಾಮಾನ್ಯ ಪ್ರಯಾಣಿಕರ ದರವನ್ನು ಹೆಚ್ಚಳ ಮಾಡಲು ಸರ್ಕಾರ ಒಪ್ಪದಿದ್ದರೆ ಪಾಸ್ ದರದಲ್ಲಿ ಪರಿಷ್ಕರಣೆ ಮಾಡುವುದು ನಿಶ್ಚಿತ ಎಂದು ಹೇಳಲಾಗುತ್ತಿದೆ.
ಇನ್ನೆರಡು ದಿನಗಳಲ್ಲಿ ಸ್ಪಷ್ಟ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದ್ದು, ಹೊಸ ವರ್ಷಕ್ಕೆ ಬಿಎಂಟಿಸಿ ಪ್ರಯಾಣಿಕರಿಗೆ ನೂತನ ದರ ಅನ್ವಯವಾಗುವ ಸಾಧ್ಯತೆ ಹೆಚ್ಚಾಗಿದೆ.
#BMTC, #PriceHike, #NewYear2023, #BusFare,