6 ಮಂದಿ ಡಕಾಯಿತರ ಬಂಧನ : 16 ಲಕ್ಷ ಬೆಲೆಬಾಳುವ BMW ಬೈಕ್, 3 ಕಾರು ವಶ

Social Share

ಬೆಂಗಳೂರು, ಡಿ. 22- ಬೈಕ್ ಖರೀದಿ ನೆಪದಲ್ಲಿ ಮಾಲೀಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ವಾಹನದೊಂದಿಗೆ ಪರಾರಿಯಾಗಿದ್ದ ಆರು ಮಂದಿ ಡಕಾಯಿತರನ್ನು ವಿಜಯನಗರ ಠಾಣೆ ಪೊಲೀಸರು ಬಂಧಿಸಿ 16 ಲಕ್ಷ ಬೆಲೆಬಾಳುವ ಬಿಎಂಡಬ್ಲ್ಯೂ ಬೈಕ್ ಹಾಗೂ ಕೃತ್ಯಕ್ಕೆ ಬಳಸಿದ್ದ 31 ಲಕ್ಷ ಮೌಲ್ಯದ ಮೂರು ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.

ವಿಶ್ವಾಸ್(23), ಜಗನ್ನಾಥ್(21), ಗಜೇಂದ್ರ(34), ಲಿಖಿತ್ ಕುಮಾರ್(29), ಶಶಾಂಕ್(23) ಮತ್ತು ಪವನ್(21) ಬಂಧಿತ ಡಕಾಯಿತರು. ಕಳೆದ ನ.10ರಂದು ಸಂಜೆ 6.30ರ ಸುಮಾರಿಗೆ ವಿಶ್ವಾಸ್ ಮತ್ತು ಆತನ ಸಂಗಡಿಗರು ಬೈಕ್ ಖರೀದಿ ನೆಪದಲ್ಲಿ ಕಾರಿನಲ್ಲಿ ಬಂದು ಮೊಹಮ್ಮದ್ ಆಸೀಫ್ ಎಂಬುವರಿಗೆ ಮಾರಣಾಂತಿಕ ಹಲ್ಲೆ ಮಾಡಿ ಎಡಗೈ ಮುರಿದು ಮನಬಂದಂತೆ ಥಳಿಸಿ ಅವರ ಬಳಿ ಇದ್ದ 16 ಲಕ್ಷ ಬೆಲೆಬಾಳುವ ಬಿಎಂಡಬ್ಲ್ಯೂ ಬೈಕ್ ಹಾಗೂ ಅವರ ಐಫೋನ್, 35 ಸಾವಿರ ಹಣವನ್ನು ದರೋಡೆ ಮಾಡಿದ್ದಾರೆ.

ನಂತರ ಮೊಹಮ್ಮದ್ ಆಸೀಫ್ ಅವರನ್ನು ತಾವು ತಂದಿದ್ದ ಕಾರಿನಲ್ಲಿ ಅಪಹರಿಸಲು ಪ್ರಯತ್ನಿಸಿದ್ದು, ಅಷ್ಟರಲ್ಲಿ ಜನ ಸೇರಿರುವುದನ್ನು ನೋಡಿ ತಾವು ಬಂದಿದ್ದ ಫೋಲೋ ಕಾರನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದರು.

ಈ ಬಗ್ಗೆ ಮೊಹಮ್ಮದ್ ಆಸೀಫ್ ಅವರು ವಿಜಯನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿ, ಆರು ಮಂದಿ ಡಕಾಯಿತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೋವಿಡ್ ನೆಪದಲ್ಲಿ ಚುನಾವಣೆ ಮುಂದೂಡುವ ಯತ್ನ ನಡೀತಿದೆ : ಡಿಕೆಶಿ

ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಕಾರುಗಳು, ಪೊಲೀಸರು ಪತ್ತೆ ಮಾಡಬಾರದೆಂಬ ಉದ್ದೇಶದಿಂದ ಬಚ್ಚಿಟ್ಟಿದ್ದ ವಾಹನಗಳ ಪೈಕಿ ಆರೋಪಿ ಗಜೇಂದ್ರ ಕೃತ್ಯಕ್ಕೆ ಬಳಸಿದ್ದ 15 ಲಕ್ಷ ಬೆಲೆಬಾಳುವ ಮಹೀಂದ್ರ ಕಾರು, ಆರೋಪಿ ಲಿಖಿತ ಕುಮಾರ್ ಬಳಸಿದ್ದ ಮಾರುತಿ ಸುಜುಕಿ ಕಂಪೆನಿಯ ಸ್ವಿಫ್ಟ್ ಕಾರು, 6 ಲಕ್ಷ ಬೆಲೆಬಾಳುವ ಮತ್ತೊಂದು ಕಾರು ಹಾಗೂ ಆರೋಪಿ ವಿಶ್ವಾಸ್ ಮತ್ತು ಜಗನ್ನಾಥ್ ಕೃತ್ಯ ನಡೆದ ಸ್ಥಳದಲ್ಲಿ ಬಿಟ್ಟು ಹೋಗಿದ್ದ 10 ಲಕ್ಷ ಬೆಲೆಬಾಳುವ ಪೊಲೋ ಕಾರನ್ನು ವಶಪಡಿಸಿಕೊಂಡಿದ್ದಾರೆ.

ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿಗಾಗಿ ಅಶೋಕ್ ಆಗ್ರಹ

ಆರೋಪಿಗಳಾದ ವಿಶ್ವಾಸ್ ಮತ್ತು ಜಗನ್ನಾಥ್ ನಿಂದ ಪಿರ್ಯಾರುದಾರರ 16 ಲಕ್ಷ ಬೆಲೆಬಾಳುವ ಬಿಎಂಡಬ್ಲ್ಯೂ ಬೈಕ್‍ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪಶ್ಚಿಮ ವಿಭಾಗದ ಉಪಪೊಲೀಸ್ ಆಯುಕ್ತ ಲಕ್ಷ್ಮಣ ನಿಂಬರಗಿ ಅವರ ಮಾರ್ಗದರ್ಶನದಲ್ಲಿ ವಿಜಯನಗರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ರವಿ ಅವರ ಮಾರ್ಗದರ್ಶನದಲ್ಲಿ ಇನ್ಸ್‍ಪೆಕ್ಟರ್ ಸಂತೋಷ್ ಕುಮಾರ್ ನೇತೃತ್ವದ ಸಿಬ್ಬಂದಿ ತಂಡ ಡಕಾಯಿತರನ್ನು ಬಂಧಿಸಿ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

BMW bike, 3 cars, seized, Six arrested,

Articles You Might Like

Share This Article