ಅಯೋಧ್ಯೆ : ನೇಣು ಬಿಗಿದ ಸ್ಥಿತಿಯಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್‌ ಶವ ಪತ್ತೆ

Social Share

ಅಯೋಧ್ಯೆ (ಯುಪಿ), ಸೆ 15 -ಅಯೋಧ್ಯೆ ಪೊಲೀಸ್ ಠಾಣೆಯ ಮುಂಭಾಗದ ಅಪಾರ್ಟ್‍ಮೆಂಟ್‍ನಲ್ಲಿ ಇನ್ಸ್‍ಪೆಕ್ಟರ್ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಭಾರಿ ಆತಂಕ ವ್ಯಕ್ತವಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ಇನ್ಸ ಪೆಕ್ಟರ್ ಹುದ್ದೆಗೆ ಬಡ್ತಿ ಪಡೆದಿದ್ದ ಓಂಕಾರ್ ನಾಥ್ (46) ಸಾವು ಆತ್ಮಹತ್ಯೆಯೂ ಅಥವಾ ಕೊಲೆಯೂ ಎಂಬುದರ ಬಗ್ಗೆ ವ್ಯಾಪಕ ಚರ್ಚೆ ಶುರುವಾಗಿದೆ.

ಜಿಲ್ಲೆಯ ಪುರಕಲಂದರ್ ಪೊಲೀಸ್ ಠಾಣೆಯಲ್ಲಿ ಹಿರಿಯ ಸಬಇನ್ಸ್‍ಪೆಕ್ಟರ್ ಆಗಿದ್ದ ಅವರು ಒಳ್ಳೆ ಹೆಸರು ಪಡೆದಿದ್ದರು. ಇತ್ತೀಚೆಗೆ ಇನ್ಸ್‍ಪೆಕ್ಟರ್ ಹುದ್ದೆಗೆ ಬಡ್ತಿ ನೀಡಿ ಫೈಜಾಬಾದ್ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ಲವಲವಿಕೆಯಿಂದಿದ್ದ ಅವರು ಠಾಣೆ ಮುಂಭಾಗದ ಅಪಾರ್ಟ್‍ಮೆಂಟ್‍ನಲ್ಲಿ ಮನೆಯನ್ನು ಬಾಡಿಗೆ ಪಡೆದು ಅಲ್ಲೇ ವಾಸವಾಗಿದ್ದು ಎಂದು ಹಿರಿಯ ಪೋಲಿಸ್ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ : ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (15-09-2022)

ನಿನ್ನೆ ಸಂಜೆ ಅವರು ಅಧಿಕಾರ ವಹಿಸಿಕೊಳ್ಳಬೇಕಿತ್ತು ಆದರೆ ಅಪಾರ್ಟ್‍ಮೆಂಟ್‍ನ ಮೆಟ್ಟಿಲುಗಳ ಪಕ್ಕದಲ್ಲಿರುವ ಕಬ್ಬಿಣದ ರೇಲಿಂಗ್‍ಗೆ ಹಗ್ಗದಿಂದ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಸಂತ ಕಬೀರ್ ನಗರ ಜಿಲ್ಲಾಯವರಾದ ಓಂಕಾರ್ ನಾಥ್ ಮೂಲದವರಾಗಿದ್ದು ಇಂದು ಬೆಳಿಗ್ಗೆ ಅಪಾರ್ಟ್‍ಮೆಂಟ್ ನಿವಾಸಿಯೊಬ್ಬರು ಅವರನ್ನು ಮಾತನಾಡಿಸಲು ಹೋಗಿದ್ದಾರೆ, ಬಾಗಿಲು ಬಡಿದಾಗ ಯಾವುದೇ ಪ್ರತಿಕ್ರಿಯೆ ಬರಲಿಲ್ಲ ಮೇಲೆ ಹೋಗಿ ನೋಡಿದಾಗ ಬೆಚ್ಚಿಬಿದ್ದಿದ್ದಾರೆ ಎಂದು ಜಿಲ್ಲಾ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಮಧುಬನ್ ಸಿಂಗ್ ಮಾಹಿತಿ ನೀಡಿದ್ದಾರೆ.

ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಮತ್ತು ಈ ಬಗ್ಗೆ ಎಲ್ಲಾ ಆಯಾಮದಿಂದ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

Articles You Might Like

Share This Article