ಬೋಗಸ್ ಮತದಾರರ ಸೇರ್ಪಡೆ ಕಾಂಗ್ರೆಸ್ ಚಾಳಿ : ಎನ್.ಆರ್.ರಮೇಶ್

Social Share

ಬೆಂಗಳೂರು, ನ.19- ಮತದಾರರ ಪಟ್ಟಿಯಲ್ಲಿ ಕೆಲವರ ಹೆಸರನ್ನು ತೆಗೆದು ಹಾಕಿ ತಮಗೆ ಬೇಕಾದ ಬೋಗಸ್ ಮತದಾರರನ್ನು ಸೇರ್ಪಡೆ ಮಾಡಿಕೊಳ್ಳುವ ಮೂಲಕ ವಾಮಮಾರ್ಗದಲ್ಲಿ ಚುನಾವಣೆಗಳಲ್ಲಿ ಗೆಲುವು ಸಾಧಿಸುವುದು ಕಾಂಗ್ರೆಸ್ ಪಕ್ಷದ ಚಾಳಿಯಾಗಿದೆ ಎಂದು ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎನ್.ಆರ್.ರಮೇಶ್ ಆರೋಪಿಸಿದ್ದಾರೆ.

ಈ ರೀತಿ ದಶಕಗಳ ಕಾಲದಿಂದಲೂ ಕಾಂಗ್ರೆಸ್ ಪಕ್ಷದ ಮುಖಂಡರು ವಾಮಮಾರ್ಗದಲ್ಲಿ ಚುನಾವಣೆಗಳಲ್ಲಿ ಗೆಲುವು ಸಾಧಿಸುವ ಕಾನೂನು ಬಾಹಿರ ಕಾರ್ಯಗಳಲ್ಲಿ ತೊಡಗಿರುವ ವಿಷಯಗಳನ್ನು ದಾಖಲೆಗಳ ಸಹಿತ ಆಯಾ ಅವಧಿಗಳಲ್ಲೇ ಬಯಲಿಗೆಳೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಸ್ತುತ ಹೆಚ್ಚು ಸದ್ದು ಮಾಡುತ್ತಿರುವ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡುವ ಮತ್ತು ತೆಗೆದು ಹಾಕುವ ಅಕ್ರಮ ಕಾರ್ಯಗಳಿಗೆ ಸಂಬಸಿದಂತೆ ಈ ಹಿಂದೆಯೇ 2020 ರ ಜನವರಿಯಲ್ಲಿ ಮುಖ್ಯ ಚುನಾವಣಾಧಿಕಾರಿಗಳು, ಚುನಾವಣಾ ಆಯುಕ್ತರು ಮತ್ತು ಬಿಬಿಎಂಪಿ ಆಯುಕ್ತರನ್ನು ಖುದ್ದಾಗಿ ಬೇಟಿ ಮಾಡಿ ದೂರು ನೀಡಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಕದ್ದ ಮಾಹಿತಿಯನ್ನು ಚುನಾವಣೆ ವೇಳೆ ಮಾರಿಕೊಳ್ಳಲು ಮುಂದಾಗಿತ್ತಾ ಚಿಲುಮೆ ಸಂಸ್ಥೆ..!

ಆ ಸಂದರ್ಭದಲ್ಲಿ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಹೊಂದಿಕೊಂಡಂತಿರುವ ತಮಿಳುನಾಡಿನ ಹೊಸೂರು, ಕೃಷ್ಣಗಿರಿ, ಧರ್ಮಪುರಿ ಹಾಗೂ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪಲಮನೇರು ಮತ್ತು ಬಂಗಾರಪಾಳ್ಯ ಭಾಗಗಳಿಂದ ಸುಮಾರು ಒಂದೂವರೆ ಲಕ್ಷಕ್ಕು ಬೋಗಸ್ ಮತದಾರರನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುವ 27 ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಿರುವ ಆಘಾತಕಾರಿ ಅಂಶಗಳ ಬಗ್ಗೆ ದಾಖಲೆಗಳ ಸಹಿತ ದೂರನ್ನು ಸಲ್ಲಿಸಿರುತ್ತೇನೆ ಎಂದು ಅವರು ತಿಳಿಸಿದ್ದಾರೆ.

ಮುಂಬರುವ ಬಿಬಿಎಂಪಿ ಚುನಾವಣೆ ಮತ್ತು ವಿಧಾನಸಭೆ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಬಹುತೇಕ ಸ್ಥಾನಗಳನ್ನು ಗೆಲ್ಲಬೇಕೆಂಬ ದುರುದ್ದೇಶದಿಂದ ಕಾಂಗ್ರೆಸ್ ಪಕ್ಷದ ಮುಖಂಡರು 27 ವಿಧಾನಸಭಾ ಕ್ಷೇತ್ರಗಳ ಬಿಬಿಎಂಪಿ ವಾರ್ಡ್ ಗಳ ವ್ಯಾಪ್ತಿಯಲ್ಲಿ ಹೊರರಾಜ್ಯಗಳ ಅಲ್ಪಸಂಖ್ಯಾತ ಸಮುದಾಯದವರನ್ನು ಇಲ್ಲಿನ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಿರುತ್ತಾರೆ.

2018 ರ ಫೆಬ್ರವರಿ ತಿಂಗಳಿನಲ್ಲಿ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ 07 ವಾರ್ಡ್ ಗಳಲ್ಲಿ ಹೊರ ರಾಜ್ಯಗಳ ಸುಮಾರು 9,500 ಕ್ಕೂ ಹೆಚ್ಚು ಮತದಾರರನ್ನು ಸೇರ್ಪಡೆ ಮಾಡುವ ಸಂಚನ್ನು ಅಂದಿನ ಪಾಲಿಕೆಯ ಆಯುಕ್ತ ಮಂಜುನಾಥ್ ಪ್ರಸಾದ್ ರವರ ಗಮನಕ್ಕೆ ತಂದಿದ್ದೆ. ಹೀಗಾಗಿ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಇಬ್ಬರು ಸಹಾಯಕ ಕಂದಾಯ ಅಧಿಕಾರಿಗಳು, 07 ಮಂದಿ ಕಂದಾಯ ಪರಿವೀಕ್ಷಕರು ಮತ್ತು 07 ಮಂದಿ ಕಂದಾಯ ವಸೂಲಿಗಾರನ್ನು ಅಮಾನತು ಮಾಡಲಾಗಿತ್ತು.

ವೋಟರ್ ಐಡಿ ಗೋಲ್‍ಮಾಲ್, ಆಯೋಗಕ್ಕೆ ಕಾಂಗ್ರೆಸ್ ದೂರು

ಅದೇ ರೀತಿ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲೂ 4,700 ಕ್ಕೂ ಹೆಚ್ಚು ಹೊರ ಭಾಗದ ಅಲ್ಪಸಂಖ್ಯಾತ ಮತದಾರರನ್ನು ಸೇರ್ಪಡೆ ಮಾಡಿರುವ ಅಂಶಗಳ ಬಗ್ಗೆ ದಾಖಲೆಗಳ ಸಹಿತ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರುಗಳನ್ನು ನೀಡಿದ್ದೆ.

ಈ ಹಿಂದೆಯೂ ಸುಮಾರು 18,000 ಕ್ಕೂ ಹೆಚ್ಚು ಅಕ್ರಮ ಬಾಂಗ್ಲಾ ವಲಸಿಗರನ್ನು ಬೆಂಗಳೂರು ಮಹಾನಗರದ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಿದ್ದ ಬಗ್ಗೆ ದಾಖಲೆಗಳ ಸಹಿತ ದೂರನ್ನು ನೀಡಲಾದ್ದ ಕಾರಣ ಅಂದಿನ ಮಾನ್ಯ ಮುಖ್ಯ ಚುನಾವಣಾಕಾರಿಗಳು ನೀಡಿದ ಆದೇಶದಂತೆ ಸಮಗ್ರವಾದ ತನಿಖೆಯನ್ನು ನಡೆಸಿ ಆ ಎಲ್ಲಾ ಬಾಂಗ್ಲಾ ನುಸುಳುಕೋರರ ಹೆಸರುಗಳನ್ನು 2016 ರಲ್ಲಿ ಮತದಾರರ ಪಟ್ಟಿಯಿಂದ ತೆಗೆಯಲಾಗಿತ್ತು.

ಬಿ.ಎಲ್.ಸಂತೋಷ್‌ಗೆ ಬಂಧನದ ಭೀತಿ

ಜಯನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲೂ ಡಾಟಾ ಎಂಟ್ರಿ ಸಿಬ್ಬಂದಿಗಳನ್ನು ಬಳಸಿಕೊಂಡು ನೂರಾರು ಮಂದಿ ಬೆಂಗಳೂರಿಗೆ ಸಂಬಂಧಿಸದ ಜನರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಿರುವ ದಾಖಲೆಗಳನ್ನು ದಕ್ಷಿಣ ವಲಯದ ಜಂಟಿ ಆಯುಕ್ತರಿಗೆ ನೀಡಲಾಗಿತ್ತು ಮತ್ತು ಇದೇ ಕಾರಣದಿಂದ ಅಕ್ರಮಕ್ಕೆ ಸಹಕರಿಸಿದ್ದ ವ್ಯಕ್ತಿಯನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು ಎಂದು ರಮೇಶ್ ತಿಳಿಸಿದ್ದಾರೆ.

bogus, voters, list, Congress, NR Ramesh,

Articles You Might Like

Share This Article