ವಿಮಾನ ನಿಲ್ದಾಣದಲ್ಲಿ ಆತಂಕ ಸೃಷ್ಟಿಸಿದ ಬಾಂಬ್‌‍ ಎಂದು ಬರೆದ ಟಿಶ್ಯೂ ಪೇಪರ್‌

ನವದೆಹಲಿ, ಮೇ 16 (ಪಿಟಿಐ) ಇಲ್ಲಿನ ಐಜಿಐ ವಿಮಾನ ನಿಲ್ದಾಣದಲ್ಲಿ ದೆಹಲಿ-ವಡೋದರಾ ಏರ್‌ ಇಂಡಿಯಾ ವಿಮಾನದ ವಾಶ್‌ರೂಮ್‌ನಲ್ಲಿ ಸಿಬ್ಬಂದಿಯೊಬ್ಬರು ಬಾಂಬ್‌‍ ಎಂದು ಬರೆದಿರುವ ಟಿಶ್ಯೂ ಪೇಪರ್‌ ಕಂಡ ನಂತರ ಆತಂಕ ಎದುರಾಗಿತ್ತು. ತಕ್ಷಣ ವಿಮಾನವನ್ನು ಹುಡುಕಲಾಯಿತು ಆದರೆ ಅನುಮಾನಾಸ್ಪದ ವಸ್ತು ಯಾವುದು ಕಂಡುಬಂದಿಲ್ಲ ಎಂದು ತಿಳಿದ ನಂತರ ನೆಮದಿಯ ನಿಟ್ಟುಸಿರು ಬಿಡುವಂತಾಗಿದೆ. ಸಂಜೆ 7 ಗಂಟೆಗೆ ಟಿಶ್ಯೂ ಪೇಪರ್‌ ಅನ್ನು ಸಿಬ್ಬಂದಿ ಗುರುತಿಸಿದಾಗ ವಿಮಾನವು ಟೇಕ್‌-ಆಫ್‌ಗೆ ಸಿದ್ಧವಾಗಿತ್ತು ಎಂದು ತಿಳಿದುಬಂದಿದೆ. ಸೆಂಟ್ರಲ್‌ ಇಂಡಸ್ಟ್ರಿಯಲ್‌ ಸೆಕ್ಯುರಿಟಿ ಫೋರ್ಸ್‌ ಮತ್ತು … Continue reading ವಿಮಾನ ನಿಲ್ದಾಣದಲ್ಲಿ ಆತಂಕ ಸೃಷ್ಟಿಸಿದ ಬಾಂಬ್‌‍ ಎಂದು ಬರೆದ ಟಿಶ್ಯೂ ಪೇಪರ್‌