ಬಿಗ್ ಬಿ ಹಾಗೂ ಧರ್ಮೇಂದ್ರ ಬಂಗಲೆಗಳಿಗೆ ಹುಸಿ ಬಾಂಬ್ ಕರೆ

Social Share

ಮುಂಬೈ, ಮಾ.1- ಬಾಲಿವುಡ್ನ ಸ್ಟಾರ್ ನಟರುಗಳಾದ ಬಿಗ್ ಬಿ ಅಮಿತಾಭ್ ಬಚ್ಚನ್ ಹಾಗೂ ಧರ್ಮೇಂದ್ರ ಅವರ ಬಂಗಲೆಗಳ ಬಳಿ ಬಾಂಬ್ ಇಟ್ಟಿರುವುದಾಗಿ ಬಂದ ಕರೆಯಿಂದಾಗಿ ಕೆಲ ಸಮಯ ಆತಂಕ ಮನೆ ಮಾಡಿತ್ತು.

ಖ್ಯಾತ ಉದ್ಯಮಿ ಮುಖೇಶ್ ಅಂಬಾನಿ ಅವರ ಮನೆಯ ಮುಂದೆ ಬಾಂಬ್ ಸ್ಪೋಟದ ಮಾಡಿದ ರೀತಿಯಲ್ಲಿ ಬಾಲಿವುಡ್ನ ಸ್ಟಾರ್ ನಟರುಗಳಾದ ಅಮಿತಾಬ್ ಬಚ್ಚನ್ ಹಾಗೂ ಧರ್ಮೇಂದ್ರರವರ ಮನೆಗಳ ಬಳಿ ಬಾಂಬ್ ಸೋಟಿಸುವುದಾಗಿ ನಾಗ್ಪುರ ಮುಖ್ಯ ಪೊಲೀಸ್ ಕಚೇರಿಗೆ ಅನಾಮಿಕ ವ್ಯಕ್ತಿಯೊಬ್ಬ ಕರೆ ಮಾಡಿದ್ದರು.

ಈ ಕರೆ ಬಂದ ಕೂಡಲೇ ನಾಗ್ಪುರ ಮುಖ್ಯ ಕಚೇರಿಯಿಂದ ಮುಂಬೈ ಪೊಲೀಸರಿಗೆ ಕರೆ ಮಾಡಿ ಸುದ್ದಿ ತಿಳಿಸಿದ್ದಾರೆ. ಮುಂಬೈನಲ್ಲಿ ಬಾಲಿವುಡ್ನ ಖ್ಯಾತ ತಾರೆಯಾದ ಅಮಿತಾಬ್ ಬಚ್ಚನ್ ಅವರು ಜಲ್ಸಾ, ಜನಕ್, ವಾಸ್ತ, ಪ್ರತೀಕ್ಷಾ ಸೇರಿದಂತೆ ಐದು ಐಷಾರಾಮಿ ಬಂಗಲೆಗಳನ್ನು ಹೊಂದಿದ್ದು , ಈ ಬಂಗಲೆಗಳಲ್ಲಿ ಮುಂಬೈ ಪೊಲೀಸರು ತಪಾ ಸಣೆ ನಡೆಸಿದ್ದಾರೆ. ಅದೇ ರೀತಿ ಧರ್ಮೇಂದ್ರ ಅವರು ವಾಸವಿರುವ ಜುಹು ಬಂಗಲೆ ಗಳಲ್ಲೂ ತಪಾಸಣೆ ನಡೆಸಿದ್ದಾರೆ. ಆದರೆ ಯಾವುದೇ ಬಾಂಬ್ ಸಿಗದಿದ್ದರಿಂದ ಪೊಲೀಸರು ನಿರಾತಂಕಗೊಂಡಿದ್ದಾರೆ.

ನಾಗ್ಪುರದ ಮುಖ್ಯ ಪೊಲೀಸ್ ಕಚೇರಿಗೆ ಹುಸಿ ಕರೆ ಮಾಡ ಬಾಲಿವುಡ್ನ ಸೂಪರ್ ಸ್ಟಾರ್ಗಳಾದ ಅಮಿತಾಬ್ ಬಚ್ಚನ್ ಹಾಗೂ ಧರ್ಮೇಂದ್ರ ಅವರ ಬಂಗಲೆಗಳ ಬಳಿ ಬಾಂಬ್ ಇಟ್ಟಿರುವುದಾಗಿ ಕರೆ ಮಾಡಿರುವ ವ್ಯಕ್ತಿಯ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಈ ಹಿಂದೆ ಖ್ಯಾತ ಉದ್ಯಮಿ ಹಾಗೂ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಮುಕೇಶ್ ಅಂಬಾನಿ ಅವರ ಮನೆಯ ಬಳಿ ಬಾಂಬ್ ಸೋಟಕಗೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ , ಮುಕೇಶ್ ಅಂಬಾನಿ ಕುಟುಂಬಕ್ಕೆ ಝೆಡ್ ಪ್ಲೆಸ್ ಭದ್ರತೆಯನ್ನು ನಿಯೋಜಿಸಿದ್ದನ್ನು ಇಲ್ಲಿ ಸ್ಮರಿಸ ಬಹುದು.

#BombScare, #AmitabhBachchan, #Dharmendra, #Bungalows,

Articles You Might Like

Share This Article