ಬೊಮ್ಮಾಯಿ ಬಜೆಟ್ – 2023-2024 (Live Updates)

Social Share

ಬೆಂಗಳೂರು,ಫೆ.17-ನಾಡಿನ ರೈತರಿಗೆ ನೀಡುತ್ತಿದ್ದ ಅಲ್ಪಾವ ಸಾಲದ ಮಿತಿಯನ್ನು 3ರಿಂದ 5 ಲಕ್ಷದವರೆಗೆ ಏರಿಕೆ. ಸಣ್ಣ ಮತ್ತು ಅತಿ ಸಣ್ಣ ಕುಟುಂಬಗಳಿಗೆ ಜೀವನ್ ಜ್ಯೋತಿ ವಿಮಾ, ರೈತರ ಬೆಳೆ ಖರೀದಿಸಲು ಬೆಂಬಲ ಬೆಲೆ ಅನುದಾನ ಹೆಚ್ಚಳ, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಸಹಾಯಕ ಕಾರ್ಯಕರ್ತೆಯರು, ಬಿಸಿಯೂಟ ತಯಾರಕರ ಮಾಸಿಕ ಗೌರವ ಧನ ಹೆಚ್ಚಳ, ಮುಖ್ಯಮಂತ್ರಿಗಳ ವಿದ್ಯಾಶಕ್ತಿ, ಹೊಸ ಪಬ್ಲಿಕ್ ಶಾಲೆ ನಿರ್ಮಾಣ…

ಆಡಳಿತಾರೂಡ ಬಿಜೆಪಿ ಸರ್ಕಾರದ ಕೊನೆಯ ಹಾಗೂ ಪ್ರಸಕ್ತ 2023-24ನೇ ಸಾಲಿನ ಬಜೆಟ್‍ನಲ್ಲಿ ರಾಜ್ಯದ ಜನತೆಗೆ ಬರಪೂರ ಕೊಡುಗೆಗಳನ್ನು ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದಾಖಲೆಯ 3,03,910 ಕೋಟಿ ಮೊತ್ತದ ಮಂಡನೆ ಮಾಡಿದ್ದಾರೆ.

ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಜನ ಸಾಮಾನ್ಯರಿಗೆ ಹೊಸ ತೆರಿಗೆಗಳನ್ನು ವಿಸದೆ ಮತ ಬುಟ್ಟಿಗೆ ಕೈ ಹಾಕಿರುವ ಬಸವರಾಜ ಬೊಮ್ಮಾಯಿ ಅವರು, ರೈತರು, ಕಾರ್ಮಿಕರು, ಮಹಿಳೆಯರು, ಅಂಗನವಾಡಿ ಕಾರ್ಯಕರ್ತೆಯರು, ವಿದ್ಯಾರ್ಥಿಗಳು. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದವರು ಸೇರಿದಂತೆ ಎಲ್ಲಾ ಸಮುದಾಯಕ್ಕೂ ಸಾಮಾಜಿಕ ನ್ಯಾಯ ಒದಗಿಸುವ ಪ್ರಯತ್ನ ಮಾಡಿದ್ದಾರೆ.

ನಿರೀಕ್ಷೆಯಂತೆ ಇದು ಚುನಾವಣಾ ವರ್ಷವಾಗಿರುವುದರಿಂದ ಹೊಸ ತೆರಿಗೆ ವಿಸದೆ ಜನಪ್ರಿಯ ಯೋಜನೆಗಳಿಗೆ ಒತ್ತು ನೀಡಲಾಗಿದೆ. ರೈತರನ್ನು ಓಲೈಸಿಕೊಳ್ಳಲು ಮುಂದಾಗಿದ್ದು, ಶೂನ್ಯ ಬಡ್ಡಿ ಸಾಲದ ಮೊತ್ತವನ್ನು 3ಲಕ್ಷದಿಂದ 5 ಲಕ್ಷಕ್ಕೆ ಏರಿಕೆ ಮಾಡಿ ಅನ್ನದಾತನ ಮೊಗದಲ್ಲಿ ಮಂದಹಾಸ ಮೂಡಿಸಿದ್ದಾರೆ.

ಪ್ರಸಕ್ತ ವರ್ಷ 30 ಲಕ್ಷಕ್ಕಿಂತ ಹೆಚ್ಚಿನ ರೈತರಲಿಗೆ 25 ಸಾವಿರ ಕೋಟಿ ಸಾಲ ವಿತರಿಸುವ ಗುರಿ ಹಾಕಿಕೊಳ್ಳಲಾಗಿದ್ದು, ಕಿಸಾನ್ ಕಾರ್ಡ್ ಕ್ರೆಡಿಟ್ ಹೊಂದಿರುವ ರೈತರಿಗೆ ಭೂ ಸಿರಿ ಎಂಬ ಯೋಜನೆಯನ್ನು ಘೋಷಿಸಿದ್ದು, ಈ ವರ್ಷದಿಂದ 10 ಸಾವಿರ ಹಚ್ಚಿನ ಸಹಾಯಧನ ನೀಡಲು ನಿರ್ಧರಿಸಲಾಗಿದೆ.
56 ಲಕ್ಷ ಸಣ್ಣ ಮತ್ತು ಅತಿ ಸಣ್ಣ ರೈತರ ಕುಟುಂಬಗಳಿಗೆ 180 ಕೋಟಿ ವೆಚ್ಚದಲ್ಲಿ ಜೀವನ್ ಜ್ಯೋತಿ ವಿಮಾ ಯೋಜನೆ ಘೋಷಿಸಲಾಗಿದೆ.

ಜತೆಗೆ ಕೃಷಿ ಯಂತ್ರಧಾರೆ ಕೇಂದ್ರಗಳಲ್ಲಿ 300 ಹೈಟೆಕ್ ಹಾರ್ವೆಸ್ಟರ್ ನೀಡಲು ಯೋಜನೆ, ಕಿರುಧಾನ್ಯಗಳ ವಿಸ್ತೀರ್ಣ, ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ರೈತಸಿರಿ ಯೋಜನೆಯಡಿ ಕಿರುಧಾನ್ಯ ಬೆಳೆಗಾರರಿಗೆ ಪ್ರತಿ 10,000 ಗಳ ಪೆÇ್ರೀತ್ಸಾಹಧನ, ಸಹಸ್ರ ಸರೋವರ ಕಾರ್ಯಕ್ರಮದಡಿ ರಾಜ್ಯದಲ್ಲಿ 1,000 ಸಣ್ಣ ಸರೋವರಗಳನ್ನು ಅಭಿವೃದ್ಧಿ, 12 ತೋಟಗಳಲ್ಲಿ ಒಂದು ತೋಟ ಒಂದು ಬೆಳೆ ಯೋಜನೆಯಡಿ ತೋಟಗಾರಿಕೆ ಉತ್ಪಾದಕತೆಯನ್ನು ಹೆಚ್ಚಿಸಲು 10 ಕೋಟಿ ರೂ. ಗಳ ಒಂದು ಬಾರಿಯ ವಿಶೇಷ ಅನುದಾನ ನೀಡಲಾಗಿದೆ.

ಶಾಲೆಗೆ ಹೋಗುವ ವಿದ್ಯಾರ್ಥಿನಿಯರಿಗೆ ಹಾಗೂ ಕೆಲಸಕ್ಕೆ ತೆರಳುವ ಮಹಿಳೆಯರಿಗೆ ಅನುಕೂಲವಾಗುವ ರೀತಿಯಲ್ಲಿ ಉಚಿತ ಬಸ್ ಪಾಸ್ ಘೋಷಿಸಿರುವ ಸಿಎಂ, ಮಹಿಳಾ ಕಾರ್ಮಿಕರಿಗೆ 500ರೂ. ಸಹಾಯಧನ, 50 ಲಕ್ಷ ಮಹಿಳೆಯರಿಗೆ ಉಚಿತ ಬಸ್ ಪಾಸ್, ಮಕ್ಕಳ ಬಸ್ ಯೋಜನೆ ಮೂಲಕ 100 ಕೋಟಿ ವೆಚ್ಚದಲ್ಲಿ ಬಸ್ ಪಾಸ್ ಯೋಜನೆಯನ್ನು ಘೋಷಣೆ ಮಾಡಿದ್ದಾರೆ.

ಅಡಿಕೆ ಬೆಳೆಯನ್ನು ಬಾಸುವ ರೋಗಗಳ ನಿರ್ವಹಣೆಗೆ ನೂತನ ತಂತ್ರಜ್ಞಾನವನ್ನು ಅಭಿವೃದ್ಧಿ, ಉತ್ಪಾದಕತೆ ಹೆಚ್ಚಿಸಲು ತೀರ್ಥಹಳ್ಳಿಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರಕ್ಕೆ 10 ಕೋಟಿ ರೂ. ಗಳ ನೆರವು ನೀಡಲಾಗಿದೆ.

ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ತೋಟಗಾರಿಕಾ ಮಹಾವಿದ್ಯಾಲಯ ಸ್ಥಾಪನೆ, ದ್ರಾಕ್ಷಿ ಬೆಳೆಗಾರರಿಗೆ ಕರ್ನಾಟಕ ದಾಕ್ಷಿ ಹಾಗೂ ದ್ರಾಕ್ಷಾರಸ ಮಂಡಳಿ ಮುಖಾಂತರ 100 ಕೋಟಿ ರೂ. ಗಳ ವೆಚ್ಚದಲ್ಲಿ ವಿಶೇಷ ಕಾರ್ಯಕ್ರಮ ರೂಪಿಸಲಾಗಿದೆ.

ಶಿಡ್ಲಘಟ್ಟದಲ್ಲಿ ನಬಾರ್ಡ್ ಯೋಜನೆಯಡಿ 75 ಕೋಟಿ ರೂ.ಗಳ ವೆಚ್ಚದಲ್ಲಿ ಹೈಟೆಕ್ ರೇಷ್ಮೆ ಗೂಡು ಮಾರುಕಟ್ಟೆ ನಿರ್ಮಾಣ, ಗುಣಮಟ್ಟದ ಕಚ್ಚಾ ರೇಷ್ಮೆ ಉತ್ಪಾದನೆಗೆ 32 ಸ್ವಯಂಚಾಲಿತ ರೀಲಿಂಗ್ ಘಟಕಗಳ ಸ್ಥಾಪನೆಗೆ 10 ಕೋಟಿ ರೂ. ಹಾಗೂ 1,000 ರೇಷ್ಮೆ ಬೆಳೆಗಾರರಿಗೆ ಬ್ರೆಡ್ಡರ್ಸ್ ಗಳನ್ನು ಒದಗಿಸಲು 12 ಕೋಟಿ ರೂ. ನೆರವು ಒದಗಿಸಲಾಗಿದೆ.

ಗೋ ಸಂಪತ್ತಿನ ರಕ್ಷಣೆಗಾಗಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿ, ಗೋಶಾಲೆಗಳ ಸ್ಥಾಪನೆ, ಪುಣ್ಯಕೋಟಿ ದತ್ತು ಯೋಜನೆಯ ಅನುಷ್ಠಾನ ಹಾಗೂ 290 ಸಂಚಾರಿ ಪಶುಚಿಕಿತ್ಸಾಲಯಗಳ ಪ್ರಾರಂಭ ಮಾಡುವುದಾಗಿ ಸಿಎಂ ಘೋಷಿಸಿದ್ದಾರೆ.

ಸಹ್ಯಾದ್ರಿ ಸಿರಿ ಯೋಜನೆಯಡಿ ಕರಾವಳಿ, ಮಲೆನಾಡು ಹಾಗೂ ಅರೆಮಲೆನಾಡಿನಲ್ಲಿ ಬೇಸಿಗೆ ವೇಳೆ ನೀರು ಸಂರಕ್ಷಣೆ, ತೋಟಗಾರಿಕೆ ಉತ್ಪಾದಕತೆ ಹೆಚ್ಚಿಸಲು ಕ್ರಮ, ಮುಖ್ಯಮಂತ್ರಿ ವಿದ್ಯಾಶಕ್ತಿ ಯೋಜನೆಯಡಿ ಪದವಿವರೆಗೂ ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಉನ್ನತ ಶಿಕ್ಷಣ ಸೇರಿದಂತೆ ಹೀಗೆ ಜನಪ್ರಿಯ ಘೋಷಣೆಗಳ ಮೂಲಕ ಬಿಜೆಪಿ ಸರ್ಕಾರದ ಕೊನೆಯ ಬಜೆಟ್ ಮಂಡಿಸಲಾಯಿತು.

1. ಬೊಮ್ಮಾಯಿ ಬಜೆಟ್ ಗಾತ್ರ ಎಷ್ಟು..? : ಇಲ್ಲಿದೆ ಆದಾಯ-ವೆಚ್ಚಗಳ ಮಾಹಿತಿ

2. ರೈತರ ಅಲ್ಪಾವಧಿ ಸಾಲದ ಮಿತಿ 3 ರಿಂದ 5 ಲಕ್ಷಕ್ಕೆ ಏರಿಕೆ

3. ಆಸಿಡ್ ದಾಳಿ ಸಂತ್ರಸ್ತರಿಗೆ 10 ಸಾವಿರ ಮಾಸಾಶನ

4. ಬಜೆಟ್ ಹೈಲೈಟ್ಸ್ : 116 ನೂತನ ಪೊಲೀಸ್ ಠಾಣೆ ನಿರ್ಮಾಣ

5. ಬಜೆಟ್‍ನಲ್ಲಿ ಯಾವ ಇಲಾಖೆಗೆ ಎಷ್ಟು ಅನುದಾನ..? ಇಲ್ಲದಿ ಕಂಪ್ಲೀಟ್ ಮಾಹಿತಿ

6. ಬೆಂಗಳೂರಿನಲ್ಲಿ 50 ಲಕ್ಷ ಜನರಿಗೆ ಶುದ್ಧ ಕುಡಿಯುವ ನೀರು

7. 2025ರ ವೇಳೆಗೆ ಉಪನಗರ ರೈಲು ಯೋಜನೆಯ ಮೊದಲ ಹಂತ ಪೂರ್ಣ

8. ಬೆಂಗಳೂರು ನಗರಕ್ಕೆ 10 ಸಾವಿರ ಕೋಟಿ ರೂ. ಬಂಪರ್ ಕೊಡುಗೆ

9. ಬೊಮ್ಮಾಯಿ ಬಜೆಟ್‍ನಲ್ಲಿ ಮಹಿಳೆಯರಿಗೆ ಸಿಕ್ಕಿದ್ದೇನು..?

10. ಜನನಿಬಿಡ ಪ್ರದೇಶಗಳಲ್ಲಿ 250 ಶೀ ಟಾಯ್ಲೆಟ್‍ಗಳ ನಿರ್ಮಾಣ

11. ಆಡಳಿತ ಸುಧಾರಣೆಗೆ 68 ಸಾವಿರ ಕೋಟಿ ಮೀಸಲು

12. ಮಹಿಳಾ ಕಾರ್ಮಿಕರಿಗೆ ತಲಾ 500 ರೂ. ಸಹಾಯಧನ, ಉಚಿತ ಬಸ್ ಪಾಸ್

13. ಬೆಂಗಳೂರಿಗರಿಗೆ ಆರೋಗ್ಯದ ಕುರಿತು ಬಜೆಟ್‍ನಲ್ಲಿ ಗುಡ್ ನ್ಯೂಸ್

14. ವನ್ಯಪ್ರಾಣಿ ದಾಳಿಯಿಂದ ಸಾವನ್ನಪ್ಪಿದರೆ 15 ಲಕ್ಷ ಪರಿಹಾರ

15. ವಾಣಿಜ್ಯ ಬಳಕೆ ವಾಹನಗಳ ಚಾಲಕರಿಗೆ ಮುಖ್ಯಮಂತ್ರಿ ವಿಮಾ ಯೋಜನೆ

16. ಬೆಂಗಳೂರಲ್ಲಿ ಭುವನೇಶ್ವರಿ ಬೃಹತ್ ಮೂರ್ತಿ ಹಾಗೂ ಥೀಮ್ ಪಾರ್ಕ್ ಸ್ಥಾಪನೆ

17. ದಿನದ 24 ಗಂಟೆ ಕಾರ್ಯನಿರ್ವಹಿಸುವ ಸೈಬರ್ ಸೆಕ್ಯುರಿಟಿ ಆಪರೇಷನ್ಸ್ ಸೆಂಟರ್

18. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣ

19. ರಾಮನಗರದ ರಾಮದೇವರ ಬೆಟ್ಟದಲ್ಲಿ ರಾಮಮಂದಿರ ನಿರ್ಮಾಣ

20. ಸಾರಿಗೆ ನಿಗಮಗಳಿಗೆ 1200 ಹೊಸ ಬಸ್ ಖರೀದಿ

21. ಶಾಲೆ ಬಿಟ್ಟವರಿಗಾಗಿ ಬದುಕುವ ದಾರಿ ಯೋಜನೆ

22. SC/ST ಸಮುದಾಯಕ್ಕೆ ಭರಪೂರ ಕೊಡುಗೆ

23. ಹಾವೇರಿ ಜಿಲ್ಲೆಯ ಸವಣೂರಿನಲ್ಲಿ ತಾಯಿ-ಮಕ್ಕಳ ಆಸ್ಪತ್ರೆ

BUDGET HIGHLIGHTS :

* ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 5 ಲಕ್ಷ ಸಾಲ
* ಪ್ರತಿ ಗ್ರಾಪಂ ಗೆ 60 ಲಕ್ಷ ಅನುದಾನ
*ತೀರ್ಥಹಳ್ಳಿ ಕೃಷ್ಟಿ ಸಂಶೋಧನಾ ಕೇಂದ್ರಕ್ಕೆ 10 ಕೋಟಿ
*ಕಿರುದಾನ್ಯ ಬೆಳೆಗಾರರಿಗೆ 10 ಸಾವಿರ ಅನುದಾನ
*ಎಲ್ಲಾ ವಿದ್ಯಾರ್ಥಿಗಳಿಗೆ ಬಸ್ ಪಾಸ್ ವಿತರಣೆ
*ಬಿಬಿಎಂಪಿ ವ್ಯಾಪ್ತಿಯ 110 ಗ್ರಾಮಗಳಲ್ಲಿ ರಸ್ತೆ ನಿರ್ಮಾಣಕ್ಕೆ 300 ಕೋಟಿ
* ರಾಮನಗರದಲ್ಲಿ ಬೃಹತ್ ರಾಮಮಂದಿರ
*ಮುಖ್ಯಮಂತ್ರಿ ವಿದ್ಯಾಶಕ್ತಿ ಯೋಜನೆ
*ಪದವಿ ಕಾಲೇಜುಗಳಿಗೆ ಶುಲ್ಕ ವಿನಾಯಿತಿ
*ಬೆಂಗಳೂರು ಅಭಿವೃದ್ಧಿ 9698 ಕೋಟಿ ರೂ. ಅನುದಾನ
*ಕೆಐಎಬಿ ಸ್ಪಾರ್ಟ್ ಆಪ್ ಪಾರ್ಕ್
*ನರೇಗಾ ಯೋಜನೆ 1 ಸಾವಿರ ಕೋಟಿ ರೂ. ಮೀಸಲು
*ಕಳಸಾ ಬಂಡೂರಿ ಯೋಜನೆಗೆ 80 ಕೋಟಿ
*ಕುಡಿಯುವ ನೀರು ಯೋಜನೆಗೆ 11236 ಕೋಟಿ ಮೀಸಲು
*180 ಕೋಟಿ ರೂ. ವೆಚ್ಚದಲ್ಲಿ ಜೀವನ್ ಜ್ಯೋತಿ ವಿಮಾ ಯೋಜನೆ
*ಬೆಂಗಳೂರು ಟ್ರಾಫಿಕ್ ಕಂಟ್ರೋಲ್‍ಗೆ 150 ಕೋಟಿ
*ಆರೋಗ್ಯ ಇಲಾಖೆ 15151 ಕೋಟಿ
*ನೀರಾವರಿಗೆ 25 ಸಾವಿರ ಕೋಟಿ
*ಗೃಹಿಣಿರಿಗೆ ತಿಂಗಳಿಗೆ 500 ಸಹಾಯ ಧನ
*ಅಂಗನವಾಡಿ ಕಾರ್ಯಕರ್ತೆಯರಿಗೆ ಒಂದು ಸಾವಿರ ಗೌರವ ಧನ ಹೆಚ್ಚಳ
*ಮಹಿಳಾ ಮತ್ತು ಮಕ್ಕಳ ಕಲ್ಯಾಣ 5676 ಕೋಟಿ
*ಲೋಕೋಪಯೋಗಿ ಇಲಾಖೆಗೆ 10741 ಕೋಟಿ
*ಬಳ್ಳಾರಿ ಮೆಗಾ ಡೈರಿಗೆ 100 ಕೋಟಿ
*ಹಾವೇರಿ ಮೆಗಾ ಡೇರಿಗೆ 90 ಕೋಟಿ
*ಚಿಕ್ಕಬಳ್ಳಾಪುರದಲ್ಲಿ ಹೈಟೇಕ್ ಹೂವಿನ ಮಾರ್ಕೆಟ್
*ಅಡಿಗೆ ಸಂಶೋಧನೆಗೆ 10 ಕೋಟಿ
*ದ್ರಾಕ್ಷಿ ಬೆಳಗಾರರಿಗೆ 10 ಕೋಟಿ

#BasavarajBommai #Budget2023, #StateBudget2023, #BommaiBudget, #ಬಜೆಟ್ #ಬಜೆಟ್2023,

Articles You Might Like

Share This Article